IPL 2024: RCB ಪಂದ್ಯ ಸೋಲಿಗೆ ಇದುವೇ ಟರ್ನಿಂಗ್ ಪಾಯಿಂಟ್; ಇಲ್ಲಿದೆ ಮೊದಲ ಪಂದ್ಯದ ಕಂಪ್ಲೀಟ್ ಹೈಲೈಟ್ಸ್
ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ಆರ್‌ಸಿಬಿ 16 ವರ್ಷಗಳಿಂದ ಗೆಲುವು ದಾಖಲಿಸುವಲ್ಲಿ ಹರಸಾಹಸ ಪಡುತ್ತಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಈ ದಾಖಲೆಯನ್ನು ಅಳಿಸಿ ಹಾಕುವ ಆಸೆಯಿಂದಲೇ ಬೆಂಗಳೂರು ತಂಡ ಅಂಗಳಕ್ಕೆ ಪ್ರವೇಶಿಸಿತು. ಆದರೆ, ಚೆನ್ನೈ ತಂಡದ ಸಂಘಟಿತ ಆಟಕ್ಕೆ ತಲೆ ಬಾಗಿ ಸೋಲು ಕಂಡಿತು. ಈ ಮೂಲಕ ಚೆನ್ನೈ ಪ್ರಸಕ್ತ ಋತುವನ್ನು ಗೆಲುವಿನೊಂದಿಗೆ ಆರಂಭಿಸಿದೆ. ಆರ್‌ಸಿಬಿ ಈ ಪಂದ್ಯದಲ್ಲಿ ಸೋಲಲು ಕಾರಣ ಏನು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಐಪಿಎಲ್ 2024ರ ಉದ್ಘಾಟನಾ ಪಂದ್ಯದಲ್ಲಿ ಗೆಲ್ಲಲು 174 ರನ್‌ಗಳ ಗುರಿಯನ್ನು ನೀಡಿದ ಆರ್‌ಸಿಬಿ, ಚೆನ್ನೈ ತಂಡವನ್ನು ಮಿಡ್ಲ್ ಓವರ್‌ನಲ್ಲಿ ಕಟ್ಟಿ ಹಾಕುವಲ್ಲಿ ಎಡವಿತು. ಪರಿಣಾಮ ಸ್ಪರ್ಧಾತ್ಮಕ ಮೊತ್ತವನ್ನು ಚೆನ್ನೈ ಯಾವುದೇ ಒತ್ತಡವಿಲ್ಲದೆ ಮೆಟ್ಟಿ ನಿಂತಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಹಿನ್ನಡೆಗೆ ಪ್ರಮುಖವಾದ ಅಂಶ ಬ್ಯಾಟ್ಸ್‌ಮನ್‌ಗಳ ವೈಫಲ್ಯ. ಆರ್‌ಸಿಬಿ ಬ್ಯಾಟರ್‌ಗಳು ಚೆನ್ನೈನಲ್ಲಿ ಬಿಗ್ ಇನ್ನಿಂಗ್ಸ್ ಆಡುವಲ್ಲಿ ಎಡವಿದ್ದೇ ತಂಡದ ಸೋಲಿನಲ್ಲಿ ಪ್ರಮುಖವಾಗಿ ಕಂಡಿತು.

ಇದೇ ಪಂದ್ಯ ಸೋಲು ಪ್ರಮುಖ ಕಾರಣ?
ಆರ್‌ಸಿಬಿ ತಂಡದ ನಾಯಕ ಫಾಫ್ ಡುಪ್ಲೇಸಿಸ್, ಆಲ್‌ರೌಂಡರ್ ಗ್ಲೇನ್ ಮ್ಯಾಕ್ಸ್‌ವೆಲ್, ಕ್ಯಾಮುರೂನ್ ಗ್ರೀನ್ ಅವರನ್ನು ಸಿಎಸ್‌ಕೆ ತಂಡ ಕಟ್ಟಿಹಾಕುವಲ್ಲಿ ಯಶಸ್ವಿ ಆಗಿದ್ದೆ, ಆರ್‌ಸಿಬಿ ಸೋಲಿಗೆ ಕಾರಣವಾಗಿದೆ. ಅಲ್ಲದೆ ಮುಸ್ತಾಫಿಜುರ್ ರೆಹಮಾನ್ ಸತತ ಎರಡು ಓವರ್‌ಗಳಲ್ಲಿ ಆರ್‌ಸಿಬಿ ತಂಡಕ್ಕೆ ಕಾಟ ನೀಡಿದರು. ರೆಹಮಾನ್ ನಾಲ್ಕು ವಿಕೆಟ್ ಪಡೆದು ಆರಂಭದಲ್ಲೇ ಪೆಟ್ಟು ನೀಡಿದರು.
ಆರ್‌ಸಿಬಿ ಪವರ್ ಪ್ಲೇನಲ್ಲಿ ಹೇಗೆ ಆಡಿತು?
ಆರ್‌ಸಿಬಿ ಮೊದಲ ಪವರ್ ಪ್ಲೇನಲ್ಲಿ ಉತ್ತಮವಾಗಿ ಆಡಿತು. ಅಲ್ಲದೆ ವಿಕೆಟ್ ಬೀಳದಂತೆ ನೋಡಿಕೊಳ್ಳುವಲ್ಲಿ ಸಫಲವಾಯಿತು. ಈ ಅವಧಿಯಲ್ಲಿ ಬೆಂಗಳೂರು ತಂಡ 37 ರನ್ ಸೇರಿಸಿತು. ಆದರೆ 12 ಓವರ್ ಮುಕ್ತಾಯಕ್ಕೆ ಆರ್‌ಸಿಬಿ 79 ರನ್ ಸೇರಿಸಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಡೆತ್ ಓವರ್‌ನಲ್ಲಿ ಆರ್‌ಸಿಬಿ ಕಲೆ ಹಾಕಿದ ರನ್ ಎಷ್ಟು?
ಡೆತ್ ಓವರ್‌ಗಳಲ್ಲಿ ಆರ್‌ಸಿಬಿ ಪರ ದಿನೇಶ್ ಕಾರ್ತಿಕ್ ಹಾಗೂ ಅನುಜ್ ರಾವತ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ಕೊನೆಯ ನಾಲ್ಕು ಓವರ್‌ಗಳಲ್ಲಿ 57 ರನ್ ಕಲೆ ಹಾಕಿ, ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ನೆರವಾದರು.
ಬೌಲಿಂಗ್‌ನಲ್ಲಿ ಆರ್‌ಸಿಬಿ ಪವರ್ ಫುಲ್ ಆರಂಭ ಮಾಡಿತಾ?
ಆರ್‌ಸಿಬಿ ಪವರ್ ಪ್ಲೇನಲ್ಲಿ ಸ್ಥಿರವಾಗಿ ಬೌಲಿಂಗ್ ಮಾಡಿತು. ಮೊದಲ ನಾಲ್ಕು ಓವರ್‌ಗಳಲ್ಲಿ ಆರ್‌ಸಿಬಿ 38 ರನ್ ನೀಡಿ ಒಂದು ವಿಕೆಟ್ ಕಬಳಿಸಿತು.

ಡೆತ್ ಓವರ್‌ನಲ್ಲಿ ಆಗಿದ್ದು ಏನು?
ಆರ್‌ಸಿಬಿ ಮಿಡ್ಲ್ ಓವರ್‌ಗಳಲ್ಲಿ ವಿಕೆಟ್ ಪಡೆಯಲು ವಿಫಲವಾಯಿತು. ಡೆತ್ ಓವರ್‌ಗಳಲ್ಲಿ ರನ್‌ಗಳನ್ನು ನೀಡಿ ಕೈ ಸುಟ್ಟುಕೊಂಡಿತು. 24 ಎಸೆತಗಳಲ್ಲಿ 34 ರನ್ ಬೇಕಿದ್ದಾಗ, ಅಲ್ಜಾರಿ ಜೋಸೆಫ್ 17ನೇ ಓವರ್‌ನಲ್ಲಿ 16 ರನ್ ನೀಡಿದ್ದು ತಂಡದ ಪೆಟ್ಟು ಬಿದ್ದಿತು. ಡೆತ್ ಓವರ್‌ಗಳಲ್ಲಿ ವಿಕೆಟ್ ಬೀಳದೇ ಇರುವುದು ಸಹ ತಂಡಕ್ಕೆ ಪೆಟ್ಟು ನೀಡಿತು.
ಸೋಲಿಗೆ ಕಾರಣವಾದ ಅಂಶಗಳು ಯಾವವು?
ಆರ್‌ಸಿಬಿ ಟಾಪ್ ಆರ್ಡರ್ ನೆಲಕಚ್ಚಿ ನಿಂತು ಬ್ಯಾಟ್ ಮಾಡದೇ ಇರುವುದೇ ಸೋಲಿಗೆ ಪ್ರಮುಖ ಕಾರಣ. ಅಲ್ಲದೆ ಮಿಡ್ಲ್ ಓವರ್‌ಗಳಲ್ಲಿ ವಿಕೆಟ್ ಪಡೆಯಲು ಪರದಾಡಿರುವುದು ಸಹ ಸೋಲನ್ನು ಕಾಣಲು ಕಾರಣವಾಗಿದೆ.
ಒಟ್ಟಾರೆ ಪಂದ್ಯದಲ್ಲಿ ಬಂದ ಬೌಂಡರಿಗಳು ಎಷ್ಟು?
ಆರ್‌ಸಿಬಿ ಬಾರಿಸಿದ್ದು 16
ಸಿಎಸ್‌ಕೆ ಬಾರಿಸಿದ್ದು 10
ಪಂದ್ಯದಲ್ಲಿ ಬಂದ ಸಿಕ್ಸರ್‌ಗಳು ಎಷ್ಟು?
ಪಂದ್ಯದಲ್ಲಿ ಆರ್‌ಸಿಬಿ ಪರ ಆರು ಸಿಕ್ಸರ್ ದಾಖಲಾದರೆ, ಚೆನ್ನೈ ಪರ ಒಂಬತ್ತು ಸಿಕ್ಸರ್ ದಾಖಲಾಗಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications