IPL 2024: "ಆರ್‌ಸಿಬಿ ಪ್ಲೇಆಫ್ ತಲುಪಲಿದೆ"; ವಿವರಿಸಿದ ಕೋಚ್ ಆಂಡಿ ಫ್ಲವರ್
ಶನಿವಾರ, ಮೇ 4ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 52ನೇ ರೋಚಕ ಪಂದ್ಯದಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಗುಜರಾತ್ ಟೈಟನ್ಸ್ (ಜಿಟಿ) ತಂಡಗಳು ಮುಖಾಮುಖಿಯಾಗುತ್ತಿವೆ.
2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 17ನೇ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇಆಫ್ ತಲುಪಬಹುದು ಎಂಬ ನಂಬಿಕೆ ಇದೆ ಎಂದು ಆರ್‌ಸಿಬಿ ಮುಖ್ಯ ಕೋಚ್ ಆಂಡಿ ಫ್ಲವರ್ ಹೇಳಿದ್ದಾರೆ.

ಶನಿವಾರದಂದು ಗುಜರಾತ್ ಟೈಟನ್ಸ್ ವಿರುದ್ಧದ ತವರಿನ ಪಂದ್ಯಕ್ಕೂ ಮುನ್ನ ಮಾತನಾಡಿದ ಆಂಡಿ ಫ್ಲವರ್, ಉಳಿದ ಪಂದ್ಯಗಳನ್ನು ಗೆಲ್ಲಲು ತಂಡವು ಎಲ್ಲವನ್ನೂ ಮಾಡುತ್ತಿದೆ ಎಂದು ತಿಳಿಸಿದರು.
ಆರ್‌ಸಿಬಿ ತಂಡ ತನ್ನ ಹಿಂದಿನ ಪಂದ್ಯಗಳಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟನ್ಸ್ ವಿರುದ್ಧ ಸತತವಾಗಿ ಗೆದ್ದಿದೆ ಮತ್ತು ಅದನ್ನು ಹ್ಯಾಟ್ರಿಕ್ ಮಾಡಲು ಆಶಿಸುತ್ತಿದೆ. ಆರ್‌ಸಿಬಿ ಈ ಆವೃತ್ತಿಯಲ್ಲಿ ಪಂದ್ಯಗಳನ್ನು ಗೆಲ್ಲಲು ಹೋರಾಡಿದೆ ಮತ್ತು ಅಂತಿಮವಾಗಿ ಪಂದ್ಯಾವಳಿಯ ದ್ವಿತೀಯಾರ್ಧದಲ್ಲಿ ಫಾರ್ಮ್‌ಗೆ ಬಂದಿದೆ ಎಂದರು.
ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಮಾತನಾಡಿದ ಆಂಡಿ ಫ್ಲವರ್, ಆರ್‌ಸಿಬಿಯ ಪ್ಲೇಆಫ್ ಭರವಸೆ ಜೀವಂತವಾಗಿರುವುದಕ್ಕೆ ಸಂತೋಷವಾಗಿದೆ. ಆದರೆ ಪಂದ್ಯಾವಳಿಯಲ್ಲಿ ಉತ್ತಮ ಸ್ಥಾನದಲ್ಲಿರಲು ಬಯಸುತ್ತೇನೆ ಎಂದು ಹೇಳಿದರು.

ಆರ್‌ಸಿಬಿ ಬೌಲಿಂಗ್ ವಿಭಾಗವನ್ನು ಶ್ಲಾಘಿಸಿದ ಆಂಡಿ ಫ್ಲವರ್, ತಮ್ಮ ಕೊನೆಯ ಮೂರು ಪಂದ್ಯಗಳಲ್ಲಿ ಭಯವಿಲ್ಲದೆ ಎದುರಾಳಿಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಳಿಸಿದರು.
"ನಮ್ಮ ಪ್ಲೇಆಫ್ ಭರವಸೆ ಇನ್ನೂ ಜೀವಂತವಾಗಿದೆ ಮತ್ತು ಅದು ಅದ್ಭುತ ಸ್ಥಾನವಾಗಿರಲಿದೆ. ನಿಸ್ಸಂಶಯವಾಗಿ ನಾವು ಪ್ಲೇಆಪ್‌ಗೆ ಹತ್ತಿರದ ಸ್ಥಾನದಲ್ಲಿರಲು ಬಯಸುತ್ತೇವೆ. ಆದರೆ ಭರವಸೆ ಮತ್ತು ಅವಕಾಶಗಳು ಇನ್ನೂ ಇವೆ. ನಾನು ಇನ್ನೂ ನಂಬಿಕೆ ಹೊಂದಿದ್ದೇನೆ," ಎಂದು ಆಂಡಿ ಫ್ಲವರ್ ಅಭಿಪ್ರಾಯಪಟ್ಟಿದ್ದಾರೆ.
"ನಮ್ಮ ಬ್ಯಾಟರ್‌ಗಳು ಖಂಡಿತವಾಗಿಯೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಎದುರು ನೋಡುತ್ತಿದ್ದಾರೆ. ನಮ್ಮ ವೇಗದ ಬೌಲಿಂಗ್ ವಿಭಾಗವೂ ಆಕ್ರಮಣಕಾರಿಯಾಗಿದೆ ಎಂದು ನಾನು ಗಮನಿಸಿದ್ದೇನೆ. ಮುಂದಿನ ಪಂದ್ಯಗಳಲ್ಲಿ ಅದನ್ನು ಮತ್ತೊಮ್ಮೆ ನೋಡಲು ನಾನು ಬಯಸುತ್ತೇನೆ," ಎಂದು ಆರ್‌ಸಿಬಿ ತಂಡದ ಮುಖ್ಯ ಕೋಚ್ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿನ ಎಂ ಚಿನ್ನಸ್ವಾಮಿಯಲ್ಲಿ ಕಳೆದ ಬಾರಿ ಆರ್‌ಸಿಬಿ ಆಡಿದ ಪಂದ್ಯವು ಒಟ್ಟು 500ಕ್ಕೂ ಅಧಿಕ ರನ್‌ಗಳನ್ನು ಗಳಿಸಿತ್ತು. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ದಾಖಲೆಯ ರನ್ ಚೇಸಿಂಗ್‌ನಲ್ಲಿ ರೋಚಕವಾಗಿ ಸೋಲು ಕಂಡಿತು. ಆದರೆ ಈ ಬಾರಿ ಹೆಚ್ಚಿನ ಆತ್ಮವಿಶ್ವಾಸದಿಂದ ಪಂದ್ಯಕ್ಕೆ ಬರಲಿದೆ.
ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಅದೇ ವಿಡಿಯೋದಲ್ಲಿ ಮಾತನಾಡಿ, ತಂಡವು ಅಂತಿಮವಾಗಿ ತಾವು ಬಯಸಿದ ಶೈಲಿಯಲ್ಲಿ ಆಡುತ್ತಿದೆ ಮತ್ತು ಸತತ ಎರಡು ಪಂದ್ಯಗಳಲ್ಲಿ ಎರಡು ಗೆಲುವುಗಳನ್ನು ಪಡೆದಿದ್ದಕ್ಕಾಗಿ ಸಂತೋಷವಾಗಿದೆ ಎಂದು ಹೇಳಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸ್ತುತ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ ಮತ್ತು ಗುಜರಾತ್ ಟೈಟನ್ಸ್ ವಿರುದ್ಧ ಗೆದ್ದರೆ ಮುಂಬೈ ಇಂಡಿಯನ್ಸ್ ತಂಡವನ್ನು ಹಿಂದಿಕ್ಕಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications