ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯು ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಇತಿಹಾಸದಲ್ಲಿ ಅತ್ಯಂತ ನಿಷ್ಠಾವಂತ ಅಭಿಮಾನಿಗಳ ಬಳಗವನ್ನು ಹೊಂದಿದೆ. ಭಾರತದಾದ್ಯಂತದ ಅಭಿಮಾನಿಗಳನ್ನು ಪಡೆಯಲು ನಗರ ಹಾಗೂ ಗಡಿ ಮಿತಿಗಳನ್ನು ಮೀರಿ ವಿಸ್ತರಿಸಿದೆ.
16 ವರ್ಷಗಳಿಂದಲೂ ಆರ್‌ಸಿಬಿ ತಂಡದ ಟ್ರೋಫಿ ರಹಿತವಾಗಿ ಪಂದ್ಯಾವಳಿ ಮುಗಿಸಿದ ಹೊರತಾಗಿಯೂ, ತಂಡದ ಅಭಿಮಾನಿಗಳು ಬಹಳ ನಿಷ್ಠಾವಂತರಾಗಿ ಉಳಿದಿದ್ದಾರೆ ಮತ್ತು ಹೆಚ್ಚುತ್ತಲೇ ಇದ್ದಾರೆ.
ಗೆಲುವಾಗಲಿ ಅಥವಾ ಸೋಲಾಗಲಿ ಲಾಯಲ್ ಅಭಿಮಾನಿಗಳು ಮಾತ್ರ ತಮ್ಮ ರಾಯಲ್ ತಂಡದ ಹಿಂದೆ ದೃಢವಾಗಿ ನಿಂತಿದ್ದಾರೆ. ಈ ಸಾಟಿಯಿಲ್ಲದ ಉತ್ಸಾಹ ಮತ್ತು ಬೆಂಬಲವನ್ನು ಮೈದಾನದ ಒಳಗೆ ಹಾಗೂ ಹೊರಗೆ ಪ್ರದರ್ಶಿಸುತ್ತಲೇ ಇದ್ದಾರೆ.

ಆರ್‌ಸಿಬಿ ತಂಡ ಯಾವುದೇ ಸ್ಥಳ ಮತ್ತು ಯಾವಾಗ ಬೇಕಾದರೂ ಮೈದಾನಕ್ಕಿಳಿದರೆ, ಅವರು ಅಭಿಮಾನಿಗಳಿಂದ ಅಪಾರ ಬೆಂಬಲವನ್ನು ಪಡೆಯುತ್ತಾರೆ. ವಿಶೇಷವಾಗಿ ತಮ್ಮ ತವರು ಮೈದಾನವಾದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆದಾಗ ಟಿಕೆಟ್‌ಗಳ ಬೇಡಿಕೆಯಲ್ಲಿ ಸ್ಪಷ್ಟವಾಗಿ ಕಾಣಬಹುದು. ಸ್ಥಳಗಳನ್ನು ಮೀರಿ, ಆರ್‌ಸಿಬಿ ವ್ಯಾಪಕ ಜನಪ್ರಿಯತೆಯನ್ನು ಹೊಂದಿದೆ.
2024ರ ಆವೃತ್ತಿಯ ಆರ್‌ಸಿಬಿ ಪಂದ್ಯಗಳ ಸಂದರ್ಭದಲ್ಲಿ ಐಪಿಎಲ್‌ನ ಲೈವ್ ಸ್ಟ್ರೀಮಿಂಗ್ ಪಾಲುದಾರರಾದ JioCinema ನಲ್ಲಿ ಭಾರೀ ದಟ್ಟಣೆಯನ್ನು ತೋರಿಸುವ ಇತ್ತೀಚಿನ ವೀಕ್ಷಕರ ಡೇಟಾವು ಸಾಕ್ಷಿಯಾಗಿದೆ.
ಐಪಿಎಲ್ ಎಲ್ಲಾ ವಯಸ್ಸಿನ ಅಭಿಮಾನಿಗಳನ್ನು ಆಕರ್ಷಿಸುತ್ತದೆ. ಯುವ ಸಮುದಾಯ ಮತ್ತು ಹಿರಿಯ ಸಮುದಾಯ ಇಬ್ಬರೂ ಸಮಾನವಾಗಿ ತೊಡಗಿಸಿಕೊಂಡಿದ್ದಾರೆ ಮತ್ತು ಪಂದ್ಯಾವಳಿಯಲ್ಲಿ ತಮ್ಮ ಅಮೂಲ್ಯ ಸಮಯ ಹೂಡಿಕೆ ಮಾಡಿದ್ದಾರೆ.
ಆರ್‌ಸಿಬಿ ತಂಡ ಮಾತ್ರವಲ್ಲದೆ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತ್ಯಂತ ಜನಪ್ರಿಯ ತಂಡಗಳಾಗಿವೆ.
ಶನಿವಾರ, ಮೇ 18ರಂದು ನಡೆದ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ನಿರ್ಣಾಯಕ ಪಂದ್ಯದಲ್ಲಿ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿಯಂತಹ ಆಟಗಾರರು ಮುಖಾಮುಖಿಯಾದರು.
ಈ ಪಂದ್ಯದ ವೇಳೆ ಜಿಯೋಸಿನಿಮಾದಲ್ಲಿ ಏಕಕಾಲದಲ್ಲಿ ವೀಕ್ಷಣೆಗಳು 50 ಕೋಟಿಗೆ ತಲುಪಿದೆ. ಇದು ಐಪಿಎಲ್ ಇತಿಹಾಸದ ಯಾವುದೇ ಪಂದ್ಯಗಳಲ್ಲಿ ಇದುವರೆಗಿನ ಅತ್ಯಧಿಕ ವೀಕ್ಷಣೆಯಾಗಿದೆ.
ಸಂಖ್ಯೆಗಳೇ ಆ ಪ್ರಮಾಣವನ್ನು ಹೇಳುತ್ತವೆ, ಪ್ರಮುಖವಾಗಿ ಆರ್‌ಸಿಬಿ ತಂಡ JioCinema ದ ಅತ್ಯಧಿಕ ಒಟ್ಟು ಏಕಕಾಲದ ವೀಕ್ಷಣೆಗಳ ಪಟ್ಟಿಯಲ್ಲಿ, ಅಗ್ರ ಹನ್ನೊಂದು ಪಂದ್ಯಗಳಲ್ಲಿ ಪ್ರಭಾವಶಾಲಿ ಏಳು ಪಂದ್ಯಗಳಲ್ಲಿ ಭಾಗಿಯಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್‌ನಂತಹ ಸಾಂಪ್ರದಾಯಿಕ ಎದುರಾಳಿಯ ವಿರುದ್ಧ ರೋಮಾಂಚಕ ಮುಖಾಮುಖಿಗಳಿಂದ ಹಿಡಿದು ಇತರ ಫ್ರಾಂಚೈಸಿಗಳೊಂದಿಗೆ ತೀವ್ರವಾದ ಕದನದಲ್ಲಿ ಸೆಣಸಾಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯಗಳು ಸತತವಾಗಿ ಭಾರಿ ವೀಕ್ಷಕರನ್ನು ಸೆಳೆದಿವೆ. ಅದರಲ್ಲೂ ಸಿಎಸ್‌ಕೆ ವಿರುದ್ಧದ ಆರ್‌ಸಿಬಿಯ ನಿರ್ಣಾಯಕ ಪಂದ್ಯದಲ್ಲಿ 50 ಕೋಟಿ ವೀಕ್ಷಣೆಗಳನ್ನು ತಲುಪಿದೆ.
ಐಪಿಎಲ್‌ನಲ್ಲಿ ಆರ್‌ಸಿಬಿ ಫ್ರಾಂಚೈಸಿ ತಮ್ಮ ಮೊದಲ ಪ್ರಶಸ್ತಿಗಾಗಿ ತಮ್ಮ ಅನ್ವೇಷಣೆ ಮುಂದುವರೆಸುತ್ತಿದ್ದಂತೆ, ದೇಶದಾದ್ಯಂತ ಅಭಿಮಾನಿಗಳು ಬೆಂಗಳೂರು ಮೂಲದ ಫ್ರಾಂಚೈಸಿಯ ಬೆಂಬಲಕ್ಕೆ ನಿಂತಿದ್ದಾರೆ. ಆಟಗಾರರ ಉತ್ಸಾಹವನ್ನು ಹೆಚ್ಚಿಸುವುದು ಮತ್ತು ಪ್ರಶಸ್ತಿ ಹುಡುಕಾಟದ ದಾರಿಯ ಪ್ರತಿ ಹೆಜ್ಜೆಯಲ್ಲಿ ಅವರನ್ನು ಹುರಿದುಂಬಿಸಲು ಸಾಮಾಜಿಕ ಮಾಧ್ಯಮ ಮತ್ತು ಮೈದಾನದಲ್ಲಿ ಕಾಣಿಸಿಕೊಳ್ಳುತ್ತಾರೆ.