RCB vs CSK: ಪ್ರಮುಖ ಟಿ20 ದಾಖಲೆಗಳ ಮೇಲೆ ಕಣ್ಣಿಟ್ಟ ಎಂಎಸ್ ಧೋನಿ, ವಿರಾಟ್ ಕೊಹ್ಲಿ
ಬಹು ನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿಯು ಹೈ-ವೋಲ್ಟೇಜ್ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಶುಕ್ರವಾರ, ಮಾರ್ಚ್ 22ರಂದು ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಸೆಣಸಾಡಲಿವೆ.
ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದ ಸ್ಥಾನದಿಂದ ಎಂಎಸ್ ಧೋನಿ ಕೆಳಗಿಳಿಯುವ ಮೊದಲು ಒಂದು ದೊಡ್ಡ ಬದಲಾವಣೆ ಸಂಭವಿಸಿತು. ಆರಂಭಿಕ ಪಂದ್ಯದ ಟಾಸ್‌ಗೆ ಒಂದು ದಿನ ಮೊದಲು ಗುರುವಾರ ಬೆಳಿಗ್ಗೆ ಬ್ರೇಕ್‌ಫಾಸ್ಟ್ ಟೇಬಲ್‌ನಲ್ಲಿ ಕುಳಿತಾಗ, ಎಂಎಸ್ ಧೋನಿ ತಲೆಯೊಳಗೆ ಏನು ನಡೆಯುತ್ತಿದೆ ಎಂದು ಸಿಎಸ್‌ಕೆ ತಂಡದಲ್ಲಿ ಯಾರಿಗೂ ತಿಳಿದಿರಲಿಲ್ಲ.

ಸಿಎಸ್‌ಕೆ ಮ್ಯಾನೇಜ್‌ಮೆಂಟ್‌ಗೆ ಕರೆ ಮಾಡುವ ಮೊದಲು ಮತ್ತು ರುತುರಾಜ್ ಗಾಯಕ್‌ವಾಡ್‌ಗೆ ನಾಯಕತ್ವದ ಬ್ಯಾಟನ್ ಹಸ್ತಾಂತರಿಸುವ ಬಗ್ಗೆ ತಿಳಿಸುವ ಮೊದಲು ಎಂಎಸ್ ಧೋನಿ ತಂಡಕ್ಕೆ ಶಾಕಿಂಗ್ ಸುದ್ದಿಯನ್ನು ನೀಡಿದರು.
2024ರ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಹಾಜರಾಗಲು ಬಂದಿದ್ದ ಎಲ್ಲಾ ತಂಡಗಳ ನಾಯಕರ ಸಮಾಗಮದ ಫೋಟೋದಲ್ಲಿ ಎಂಎಸ್ ಧೋನಿ ಬದಲಾಗಿ ರುತುರಾಜ್ ಗಾಯಕ್ವಾಡ್ ಕಾಣಿಸಿಕೊಂಡಿದ್ದರಿಂದ ಸಾಮಾಜಿಕ ಮಾಧ್ಯಮದ ಮೂಲಕ ಸಿಎಸ್‌ಕೆಯಲ್ಲಿ ನಾಯಕತ್ವ ಬದಲಾವಣೆಯನ್ನು ಐಪಿಎಲ್ ಘೋಷಿಸಿತು.
ಏಕಕಾಲದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಎಂಎಸ್ ಧೋನಿ ತಮ್ಮ ತಂಡಗಳನ್ನು ಮುನ್ನಡೆಸುವುದನ್ನು ಅಭಿಮಾನಿಗಳು ನೋಡದಿರುವುದು ಐಪಿಎಲ್‌ನ ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಇದೇ ಮೊದಲ ಬಾರಿ ಎನಿಸಿದೆ.
ಇಂದಿನ ಆರಂಭಿಕ ಪಂದ್ಯಕ್ಕೂ ಮುನ್ನ ಎಂಎಸ್ ಧೋನಿ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದರೂ, ಇಂದಿನ ಗಮನವು ಮತ್ತೆ ಪಂದ್ಯದ ಕಡೆಗೆ ತಿರುಗುತ್ತದೆ. ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಪಂದ್ಯದಲ್ಲಿ ಅನೇಕ ಟಿ20 ಮತ್ತು ಐಪಿಎಲ್ ದಾಖಲೆಗಳನ್ನು ಮುರಿಯಬಹುದು.
ಮೊದಲು ವಿರಾಟ್ ಕೊಹ್ಲಿಯಿಂದ ಪ್ರಾರಂಭಿಸುವುದಾದರೆ, ಆರ್‌ಸಿಬಿ ಸ್ಟಾರ್ ಬ್ಯಾಟರ್ ಎರಡು ತಿಂಗಳ ಸುದೀರ್ಘ ವಿರಾಮದ ನಂತರ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಅವರು ನೇರವಾಗಿ ದಾಖಲೆಯ ಪುಸ್ತಕದಲ್ಲಿ ತಮ್ಮ ಹೆಸರನ್ನು ನಮೂದಿಸಬಹುದು.

ಟಿ20 ಕ್ರಿಕೆಟ್‌ನಲ್ಲಿ 12000 ರನ್ ಪೂರೈಸಿದ ಇತಿಹಾಸದಲ್ಲಿ 6ನೇ ಆಟಗಾರನಾಗಲು ವಿರಾಟ್ ಕೊಹ್ಲಿಗೆ ಕೇವಲ ಆರು ರನ್‌ಗಳ ಅಗತ್ಯವಿದೆ. 2024ರ ಐಪಿಎಲ್‌ನ ಆರಂಭಿಕ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಏಳು ಬೌಂಡರಿಗಳನ್ನು ಬಾರಿಸಿದರೆ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ 650 ಬೌಂಡರಿಗಳನ್ನು ಪೂರೈಸಿದ ಸಾಧನೆ ಮಾಡಲಿದ್ದಾರೆ.
ಇನ್ನು ಸಿಎಸ್‌ಕೆ ವಿರುದ್ಧ ಭಾರತೀಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 15 ರನ್ ಗಳಿಸಿದರೆ, ಅವರು ಎಂಎಸ್ ಧೋನಿ ನೇತೃತ್ವದ ಫ್ರಾಂಚೈಸಿ ವಿರುದ್ಧ ವೈಯಕ್ತಿಕವಾಗಿ 1000 ರನ್ ಪೂರ್ಣಗೊಳಿಸಲಿದ್ದಾರೆ.
ಮತ್ತೊಂದೆಡೆ, ಲೆಜೆಂಡ್ ಎಂಎಸ್ ಧೋನಿ ಕೂಡ ಬೃಹತ್ ವಿಕೆಟ್ ಕೀಪಿಂಗ್ ದಾಖಲೆಯ ಸಮೀಪದಲ್ಲಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 300 ಔಟ್ ಮಾಡಿದ ಮೊದಲ ವಿಕೆಟ್‌ಕೀಪರ್ ಆಗಲು ಸಿಎಸ್‌ಕೆ ಮಾಜಿ ನಾಯಕನಿಗೆ ಕೇವಲ ನಾಲ್ಕು ಔಟ್‌ಗಳ ಅಗತ್ಯವಿದೆ.
ಇನ್ನು ಅಜಿಂಕ್ಯ ರಹಾನೆ ಇಂದು ಆರ್‌ಸಿಬಿ ವಿರುದ್ಧ ಆಡಿದರೆ, ಐಪಿಎಲ್‌ನಲ್ಲಿ ಸಿಕ್ಸರ್‌ಗಳ ಶತಕ ಪೂರೈಸುವ ಅವಕಾಶ ಲಭಿಸಲಿದೆ. ಅವರು ಮೈಲಿಗಲ್ಲಿಗಿಂತ ಕೇವಲ 4 ಸಿಕ್ಸರ್‌ಗಳ ಕೊರತೆ ಹೊಂದಿದ್ದಾರೆ.
ರವೀಂದ್ರ ಜಡೇಜಾ ಅವರು ಲೀಗ್‌ನಲ್ಲಿ 100 ಸಿಕ್ಸರ್ ಪೂರ್ಣಗೊಳಿಸಲು ಒಂದು ಸಿಕ್ಸರ್ ಅಗತ್ಯವಿದ್ದು, ಐಪಿಎಲ್‌ನಲ್ಲಿ 200 ಬೌಂಡರಿಗಳನ್ನು ತಲುಪಲು ಏಳು ಬೌಂಡರಿಗ ಅಗತ್ಯವಿರುವ ಕಾರಣ, ರವೀಂದ್ರ ಜಡೇಜಾ ಕೆಲವು ಐಪಿಎಲ್ ದಾಖಲೆಗಳ ಸಮೀಪದಲ್ಲಿದ್ದಾರೆ.
ಆರ್‌ಸಿಬಿ vs ಸಿಎಸ್‌ಕೆ ಹಣಾಹಣಿ ರಾತ್ರಿ 8 ಗಂಟೆಗೆ ಪ್ರಾರಂಭ
ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಮತ್ತು ಗಾಯಕ ಸೋನು ನಿಗಮ್ ಪ್ರದರ್ಶನ ನೀಡಲಿರುವ ಉದ್ಘಾಟನಾ ಸಮಾರಂಭದ ನಂತರ, ಆರ್‌ಸಿಬಿ vs ಸಿಎಸ್‌ಕೆ ಪಂದ್ಯವು ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications