Dinesh Karthik: ಗ್ಲೌಸ್ ಕಳಚಿ ಐಪಿಎಲ್‌ಗೆ ವಿದಾಯ ಹೇಳಿದ ಆರ್‌ಸಿಬಿ ಸ್ಟಾರ್ ಫಿನಿಶರ್?
ಬುಧವಾರ, ಮೇ 22ರಂದು ಅಹಮದಾಬಾದ್‌ನ ಐಕಾನಿಕ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋತ ನಂತರ, ಅನುಭವಿ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಐಪಿಎಲ್‌ಗೆ ವಿದಾಯ ಘೋಷಿಸುವ ಮುನ್ಸೂಚನೆ ನೀಡಿದರು.
ರಾಜಸ್ಥಾನ್ ರಾಯಲ್ಸ್ ವಿರುದ್ಧ ತಮ್ಮ ಕೊನೆಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯವನ್ನು ಆಡಿರಬಹುದು ಎಂದು ಅನುಭವಿ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಸೂಚನೆ ನೀಡಿದರು.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪ್ಲೇಆಫ್ ಪಂದ್ಯದಲ್ಲಿ ಹೃದಯವಿದ್ರಾವಕ ಸೋಲಿನ ನಂತರ, ಆರ್‌ಸಿಬಿ ಸ್ಟಾರ್ ಫಿನಿಶರ್ ದಿನೇಶ್ ಕಾರ್ತಿಕ್ ತಮ್ಮ ವಿಕೆಟ್-ಕೀಪಿಂಗ್ ಗ್ಲೌಸ್ ಕಳಚಿ ಪ್ರೇಕ್ಷಕರಿಗೆ ತೋರಿಸಿ ಚಪ್ಪಾಳೆಗಗಳ ಮೂಲಕ ಬೀಳ್ಕೊಡುಗೆ ಸ್ವೀಕರಿಸಿದರು.
173 ರನ್‌ಗಳ ಯಶಸ್ವಿ ಚೇಸ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ರೋವ್ಮನ್ ಪೊವೆಲ್ ಗೆಲುವಿನ ಸಿಕ್ಸರ್ ಬಾರಿಸಿದ ಬಳಿಕ, 38 ವರ್ಷದ ದಿನೇಶ್ ಕಾರ್ತಿಕ್ ತಮ್ಮ ಸಹ ಆಟಗಾರ ವಿರಾಟ್ ಕೊಹ್ಲಿಯೊಂದಿಗೆ ಭಾವನಾತ್ಮಕ ಅಪ್ಪುಗೆ ಹಂಚಿಕೊಂಡರು.

ಐಪಿಎಲ್ 2024ರ ಆವೃತ್ತಿಯು ಆಟಗಾರನಾಗಿ ಕೊನೆಯದಾಗಿರಬಹುದೆಂದು ಪಂದ್ಯಾವಳಿಯುದ್ದಕ್ಕೂ ಹಲವು ಬಾರಿ ಒತ್ತಿ ಹೇಳಿದ ನಂತರ, ತಮಿಳುನಾಡು ಮೂಲದ ದಿನೇಶ್ ಕಾರ್ತಿಕ್ ಐಪಿಎಲ್‌ನಿಂದ ನಿವೃತ್ತಿ ಪಡೆಯುವ ಮುನ್ಸೂಚನೆ ನೀಡಿದರು. ಆದರೆ, ಇನ್ನೂ ಅಧಿಕೃತವಾಗಿ ದೃಢೀಕರಿಸಿಲ್ಲ ಎಂಬುದು ಗಮನಾರ್ಹ ಸಂಗತಿ.
ವಾಸ್ತವವಾಗಿ, ತಮ್ಮ ಕೋಚ್ ಮತ್ತು ಉತ್ತಮ ಸ್ನೇಹಿತ ಶಂಕರ್ ಬಸು ಮೈದಾನದಿಂದ ಹೊರಗೆ ಸ್ವಾಗತಿಸುವ ಮೊದಲು ವಿರಾಟ್ ಕೊಹ್ಲಿ ಅನುಭವಿ ವಿಕೆಟ್‌ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್‌ಗೆ ಗೌರವ ರಕ್ಷೆ ನಡೆಸಿಕೊಟ್ಟರು.
ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್‌ಗಳ ಸೋಲಿನ ನಂತರ, ಆಟಗಾರರು ಮೈದಾನದಿಂದ ಹೊರನಡೆಯುವ ಮೊದಲು ದಿನೇಶ್ ಕಾರ್ತಿಕ್ ಅವರು ತಮ್ಮ ಆರ್‌ಸಿಬಿ ತಂಡದ ಸಹ ಆಟಗಾರರಿಂದ ಭಾವನಾತ್ಮಕ ಗೌರವ ಪಡೆದರು. ತಂಡದ ಪುನರುತ್ಥಾನದ ಓಟವು ಸ್ಥಗಿತಗೊಂಡಿದ್ದರಿಂದ ಆರ್‌ಸಿಬಿ ಆಟಗಾರರಿಗೆ ಹೃದಯ ವಿದ್ರಾವಕ ಸಂಜೆಯಾಗಿತ್ತು.
ಆವೃತ್ತಿಯ ಮಧ್ಯದಲ್ಲಿ ಆರ್‌ಸಿಬಿ ಆಡಿದ ಮೊದಲ 8 ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದು ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿ ತತ್ತರಿಸಿತ್ತು. ನಂತರ 5 ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿದ್ದು ಒಳಗೊಂಡಂತೆ ಸತತವಾಗಿ ಆರು ಪಂದ್ಯಗಳನ್ನು ಗೆದ್ದು ಪ್ಲೇಆಫ್‌ಗೆ ಪ್ರವೇಶಿಸಿತ್ತು.

ದಿನೇಶ್ ಕಾರ್ತಿಕ್ 257 ಐಪಿಎಲ್ ಪಂದ್ಯಗಳಲ್ಲಿ 22 ಅರ್ಧಶತಕಗಳೊಂದಿಗೆ 4842 ರನ್ ಗಳಿಸಿ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪೂರ್ಣಗೊಳಿಸಲಿದ್ದಾರೆ. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದರು.
ವಿಶೇಷವಾಗಿ ಆರ್‌ಸಿಬಿಗೆ ಸೇರಿದ ನಂತರ, ಐಪಿಎಲ್‌ನಲ್ಲಿ ಆಡಲು ದಿನೇಶ್ ಕಾರ್ತಿಕ್ ಅವರಿಗೆ ತಮ್ಮ ವಯಸ್ಸು ಅಡ್ಡಬರದಂತೆ ಆಡಿದರು. 2022ರ ಟಿ20 ವಿಶ್ವಕಪ್ ನಂತರ ಭಾರತ ಹಿರಿಯ ರಾಷ್ಟ್ರೀಯ ತಂಡದ ಸಾಮಾನ್ಯ ಭಾಗವಾಗದ ಕಾರಣ, ವಿಕೆಟ್‌ಕೀಪರ್-ಬ್ಯಾಟರ್ ಕಾಮೆಂಟರಿ ಬದ್ಧತೆಗಳನ್ನು ಮತ್ತು ಐಪಿಎಲ್‌ಗೆ ತಯಾರಿಯನ್ನು ಆರಂಭಿಸಿದರು.
ವಾಸ್ತವವಾಗಿ, ದಿನೇಶ್ ಕಾರ್ತಿಕ್ ಐಪಿಎಲ್ 2022ರಲ್ಲಿ ಆರ್‌ಸಿಬಿ ಪರ 183ರ ಸ್ಟ್ರೈಕ್ ರೇಟ್‌ನಲ್ಲಿ 330 ರನ್ ಗಳಿಸುವ ಮೂಲಕ ಭಾರತ ಟಿ20 ತಂಡದಲ್ಲಿ ಮರಳಿ ಸ್ಥಾನ ಪಡೆದರು ಮತ್ತು ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿದ್ದರು.
ದಿನೇಶ್ ಕಾರ್ತಿಕ್ ಐಪಿಎಲ್ 2024ರಲ್ಲಿ ಆಡಿದ 15 ಪಂದ್ಯಗಳಲ್ಲಿ 326 ರನ್‌ಗಳೊಂದಿಗೆ ಮುಗಿಸಿದರು ಮತ್ತು ಮತ್ತೊಮ್ಮೆ ಬ್ಯಾಟಿಂಗ್ ಫಿನಿಶರ್ ಪಾತ್ರವನ್ನು ನಿರ್ವಹಿಸಿದರು.

ವಾಸ್ತವವಾಗಿ, ದಿನೇಶ್ ಕಾರ್ತಿಕ್ ಟಿ20 ವಿಶ್ವಕಪ್‌ಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಲೆಕ್ಕಾಚಾರದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ರೇಸ್‌ನ ಭಾಗವಾಗಿದ್ದರು. ಇದೇ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಅನುಭವಿ ವಿಕೆಟ್‌ಕೀಪರ್‌ನೊಂದಿಗಿನ ಆನ್-ಫೀಲ್ಡ್‌ನಲ್ಲಿ ತಮಾಷೆಯಾಗಿ ಮಾತನಾಡಿದ್ದರು.
ಆದಾಗ್ಯೂ, ಜೂನ್ 2ರಿಂದ ಯುಎಸ್‌ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್‌ಗೆ ಭಾರತೀಯ ತಂಡದಲ್ಲಿ ದಿನೇಶ್ ಕಾರ್ತಿಕ್ ಆಯ್ಕೆಯಾಗಲಿಲ್ಲ.
ವಿಕೆಟ್ ಕೀಪರ್-ಬ್ಯಾಟರ್ ತಮ್ಮ ಐಪಿಎಲ್ ವೃತ್ತಿಜೀವನದುದ್ದಕ್ಕೂ ಆರು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಅವರು 2008ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ನೊಂದಿಗೆ ಪ್ರಾರಂಭಿಸಿದರು, 2011ರಲ್ಲಿ ಪಂಜಾಬ್ ಕಿಂಗ್ಸ್ ಎಲೆವೆನ್‌ಗೆ ತೆರಳಿದರು. ನಂತರ 2014ರಲ್ಲಿ ಡೆಲ್ಲಿ ತಂಡಕ್ಕೆ ಹಿಂದಿರುಗುವ ಮೊದಲು ಮುಂಬೈ ಇಂಡಿಯನ್ಸ್‌ನೊಂದಿಗೆ ಮುಂದಿನ ಎರಡು ಆವೃತ್ತಿ ಕಳೆದರು.
ದಿನೇಶ್ ಕಾರ್ತಿಕ್ ಅವರನ್ನು 2015ರಲ್ಲಿ ಆರ್‌ಸಿಬಿ ಖರೀದಿಸಿತು ಮತ್ತು ಬಳಿಕ 2016 ಮತ್ತು 2017ರಲ್ಲಿ ಗುಜರಾತ್ ಲಯನ್ಸ್‌ಗಾಗಿ ಆಡಿದರು. ಕೆಕೆಆರ್ ತಂಡದೊಂದಿಗೆ ನಾಲ್ಕು ಆವೃತ್ತಿಗಳನ್ನು ಕಳೆದರು. ದಿನೇಶ್ ಕಾರ್ತಿಕ್ 2022ರಲ್ಲಿ ಮತ್ತೆ ಆರ್‌ಸಿಬಿಗೆ ಮರಳಿದರು ಮತ್ತು ಫಿನಿಶರ್ ಪಾತ್ರವನ್ನು ಪರಿಪೂರ್ಣತೆಗೆ ಏರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications