For Quick Alerts
ALLOW NOTIFICATIONS  
For Daily Alerts
 

IPL 2024: ಸತತ 5ನೇ ಗೆಲುವು ಸಾಧಿಸಿದ್ರೂ, ಆರ್‌ಸಿಬಿ ಪ್ಲೇಆಫ್ ಹಾದಿ ಸುಲಭವಿಲ್ಲ; ಲೆಕ್ಕಾಚಾರ ಹೀಗಿದೆ?

2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಗುಂಪು ಹಂತದಲ್ಲಿ ಕೇವಲ 8 ಪಂದ್ಯಗಳು ಮಾತ್ರ ಬಾಕಿ ಉಳಿದಿದ್ದು, ಪ್ಲೇಆಫ್ ರೇಸ್ ರೋಚಕ ಕ್ಲೈಮ್ಯಾಕ್ಸ್‌ನತ್ತ ಬಂದು ನಿಂತಿದೆ. ಆದರೂ ಪ್ಲೇಆಫ್ ಅರ್ಹತೆ ಸನ್ನಿವೇಶವು ಗೊಂದಲ ಮುಂದುವರೆದಿದೆ.

ಈವರೆಗೆ ಕೇವಲ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಪ್ಲೇಆಫ್‌ನಲ್ಲಿ ತನ್ನ ಸ್ಥಾನವನ್ನು ಕಾಯ್ದಿರಿಸಿದ್ದರೆ, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2024ರ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿವೆ.

ಇದೀಗ ಪ್ಲೇಆಫ್ ರೇಸ್‌ನಲ್ಲಿ ಭಾನುವಾರದ ಡಬಲ್-ಹೆಡರ್ ಪಂದ್ಯಗಳು ನಾಟಕೀಯ ತಿರುವು ಪಡೆದುಕೊಂಡವು. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕ್ರಮವಾಗಿ ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳನ್ನು ಸೋಲಿಸಿ ಪ್ಲೇಆಫ್ ರೇಸ್‌ನ ಭರವಸೆಯನ್ನು ಜೀವಂತವಾಗಿರಿಸಿಕೊಂಡವು.

IPL 2024 RCB s Playoffs Qualification Scenario Must Win Against CSK

ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್‌ಗಳಿಂದ ಸೋಲಿಸಿ, ಈ ಋತುವಿನಲ್ಲಿ ಸತತ 5ನೇ ಗೆಲುವನ್ನು ದಾಖಲಿಸಿತು.

ಈ ಗೆಲುವು ಆರ್‌ಸಿಬಿ ತಂಡ ಅಗ್ರ ನಾಲ್ಕರಲ್ಲಿ ಸ್ಥಾನ ಗಿಟ್ಟಿಸುವ ಹೋರಾಟದಲ್ಲಿ ತನ್ನನ್ನು ಇರಿಸಿಕೊಂಡಿತು. 13 ಪಂದ್ಯಗಳಿಂದ +0.387ರ ನೆಟ್ ರನ್ ರೇಟ್‌ನೊಂದಿಗೆ 12 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಏರಿದೆ.

ಆರ್‌ಸಿಬಿ ತಂಡ ತನ್ನ ಕೊನೆಯ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತವರಿನಲ್ಲಿ ಎದುರಿಸಲಿದೆ. ಇದು ಎರಡು ತಂಡಗಳ ನಡುವೆ ವರ್ಚುವಲ್ ನಾಕೌಟ್ ಪಂದ್ಯವಾಗಿರಲಿದೆ. ಪಂದ್ಯದ ವಿಜೇತ ತಂಡವು ಪ್ಲೇಆಫ್‌ಗೆ ಮುನ್ನಡೆಯಲಿದ್ದರೆ, ಸೋತ ತಂಡ ಪಂದ್ಯಾವಳಿಯಿಂದ ಹೊರಬೀಳಲಿದೆ.

ರುತುರಾಜ್ ಗಾಯಕ್ವಾಡ್ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಸ್ತುತ ಆಡಿದ 13 ಪಂದ್ಯಗಳಲ್ಲಿ +0.528 ನೆಟ್‌ ರನ್‌ ರೆಟ್‌ನೊಂದಿಗೆ 14 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

ಇನ್ನು ಎರಡು ಪಂದ್ಯಗಳನ್ನು ಹೊಂದಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಈವರೆಗೆ ಆಡಿದ 12 ಪಂದ್ಯಗಳಲ್ಲಿ 7 ಗೆಲುವುಗಳು ಮತ್ತು +0.406 ನೆಟ್ ರನ್ ರೇಟ್‌ನೊಂದಿಗೆ 14 ಅಂಕಗಳನ್ನು ಹೊಂದಿ ನಾಲ್ಕನೇ ಸ್ಥಾನದಲ್ಲಿದೆ.

IPL 2024 RCB s Playoffs Qualification Scenario Must Win Against CSK

ಐಪಿಎಲ್ 2024ರ ಪ್ಲೇಆಫ್ ಸನ್ನಿವೇಶ

ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ ತನ್ನ ಮುಂದಿನ ಎರಡು ಗುಜರಾತ್ ಟೈಟನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ತವರಿನಲ್ಲಿ ಸೆಣಸಾಡಲಿದೆ.

ಎಸ್‌ಆರ್‌ಹೆಚ್ ಈಗಾಗಲೇ 14 ಅಂಕಗಳನ್ನು ಹೊಂದಿರುವುದರಿಂದ ಮತ್ತು ಉತ್ತಮ ನೆಟ್ ರನ್ ರೇಟ್ ಅನ್ನು ಹೊಂದಿರುವುದರಿಂದ ಎರಡೂ ಪಂದ್ಯಗಳಲ್ಲಿ ಒಂದು ಗೆಲುವು ಸಾಧಿಸಿದರೂ ಪ್ಲೇಆಫ್‌ಗೆ ತಲುಪಬಹುದು.

ಲಕ್ನೋ ಸೂಪರ್ ಜೈಂಟ್ಸ್ ತಂಡ ಸಹ ಪ್ರಬಲ ಪೈಪೋಟಿಯಲ್ಲಿದೆ. ಆದರೆ ನೆಟ್ ರನ್ ರೇಟ್ -0.769 ಋಣಾತ್ಮಕವಾಗಿರುವುದರಿಂದ ತಮ್ಮ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾಗುತ್ತದೆ.

ಗುಜರಾತ್ ಟೈಟನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕೂಡ ಲೆಕ್ಕಾಚಾರದ ಪ್ರಕಾರ, ಪ್ಲೇಆಫ್ ರೇಸ್‌ನಲ್ಲಿವೆ. ಆದರೆ ಈ ಎರಡೂ ತಂಡಗಳು ಅಭಿಯಾನದ ಲೀಗ್ ಹಂತದ ಮುಕ್ತಾಯದಲ್ಲಿ ಗರಿಷ್ಠ 14 ಅಂಕಗಳನ್ನು ಪಡೆಯಬಹುದು.

ಆದರೆ, ಅವರ ಕೆಳಮಟ್ಟದ ನೆಟ್ ರನ್ ರೇಟ್ ಅನ್ನು ಪರಿಗಣಿಸಿ, ಸಿಎಸ್‌ಕೆ, ಆರ್‌ಸಿಬಿ, ಎಲ್‌ಎಸ್‌ಜಿ ಅಥವಾ ಎಸ್‌ಆರ್‌ಹೆಚ್ ತಂಡಗಳನ್ನು ಅಗ್ರ 4ರ ಪೈಪೋಟಿಯಲ್ಲಿ ಸೋಲಿಸಲು ಸಾಧ್ಯವಾಗುವುದಿಲ್ಲ.

IPL 2024 RCB s Playoffs Qualification Scenario Must Win Against CSK

ಆರ್‌ಸಿಬಿ ತಂಡದ ಐಪಿಎಲ್ 2024ರ ಪ್ಲೇಆಫ್ ಅರ್ಹತಾ ಸನ್ನಿವೇಶ

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪ್ಲೇಆಫ್ ಅರ್ಹತಾ ಅತ್ಯುತ್ತಮ ಸನ್ನಿವೇಶವೆಂದರೆ, ಸನ್ ರೈಸರ್ಸ್ ಹೈದರಾಬಾದ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆಯಲು ತಮ್ಮ ಒಂದು ಅಥವಾ ಎರಡೂ ಪಂದ್ಯಗಳನ್ನು ಗೆಲ್ಲುವುದು. ಲಕ್ನೋ ಸೂಪರ್ ಜೈಂಟ್ಸ್ ತಂಡ ಒಂದಕ್ಕಿಂತ ಹೆಚ್ಚು ಪಂದ್ಯವನ್ನು ಗೆಲ್ಲದಿರುವುದು.

ಐಪಿಎಲ್ 2024ರ ಪ್ಲೇಆಫ್‌ನ ಅಂತಿಮ ಸ್ಥಾನವು ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವಿನ ಪಂದ್ಯವನ್ನು ಅವಲಂಬಿಸಿರುತ್ತದೆ. ಬೆಂಗಳೂರಿನಲ್ಲಿ ನಡೆಯುವ ಪಂದ್ಯವು ಪ್ಲೇಆಫ್ ರೇಸ್‌ನಲ್ಲಿ ವರ್ಚುವಲ್ ಎಲಿಮಿನೇಟರ್ ಆಗಿ ಬದಲಾಗುತ್ತದೆ.

ಅಲ್ಲದೆ, ಆರ್‌ಸಿಬಿ ತಂಡ ಮೊದಲು ಬ್ಯಾಟಿಂಗ್ ಮಾಡಿ 18 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳಿಂದ ಸಿಎಸ್‌ಕೆ ತಂಡವನ್ನು ಸೋಲಿಸಿದರೆ, ಸಿಎಸ್‌ಕೆ ತಂಡದ ನೆಟ್ ರನ್-ರೇಟ್ ಅನ್ನು ಮೀರಿಸುತ್ತದೆ. ಒಂದು ವೇಳೆ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದರೆ, ಆರ್‌ಸಿಬಿ ಸರಿಸುಮಾರು 11 ಎಸೆತಗಳು ಬಾಕಿ ಇರುವಾಗ ಗುರಿ ಬೆನ್ನಟ್ಟಬೇಕಾಗುತ್ತದೆ.

Story first published: Monday, May 13, 2024, 15:33 [IST]
Other articles published on May 13, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+