For Quick Alerts
ALLOW NOTIFICATIONS  
For Daily Alerts
 

IPL 2024: ಆರಂಭದಲ್ಲಿ ರಿಲೀಫ್‌ ನೀಡಿ: ಗುಜರಾತ್‌ ಟೈಟನ್ಸ್‌ಗೆ ಆರಂಭಿಕ ಆಘಾತ

ಗುಜರಾತ್ ಟೈಟಾನ್ಸ್‌ಗೆ 17ನೇ ಆವೃತ್ತಿ ಶುಭದಾಯಕ ಇದ್ದಂತೆ ಕಾಣುತ್ತಿಲ್ಲ. ಮೊದಲು ಎರಡು ಬಾರಿ ಐಪಿಎಲ್‌ ಫೈನಲ್‌ಗೆ ತಂಡವನ್ನು ಕೊಂಡೊಯ್ದಿದ್ದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ತಂಡಕ್ಕೆ ಬಿಟ್ಟುಕೊಟ್ಟಿದ್ದ ತಂಡಕ್ಕೆ ಗಾಯದ ಮೇಲೆ ಬರೆ ಬಿದ್ದಿದೆ. ಈಗ ಆಟಗಾರರ ಗಾಯ ನಿಜಕ್ಕೂ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ತಂಡದ ಸ್ಟಾರ್ ಆಟಗಾರರಲ್ಲಿ ಒಬ್ಬರಾದ ಮೊಹಮ್ಮದ್ ಶಮಿ ಗಾಯದ ಕಾರಣದಿಂದ ಐಪಿಎಲ್‌ನಲ್ಲಿ ಆಡುತ್ತಿಲ್ಲ. ರಶೀದ್ ಖಾನ್ ಕೂಡ ಬಹಳ ಸಮಯದಿಂದ ಗಾಯಗೊಂಡಿದ್ದಾರೆ. ಇದೀಗ ಈ ತಂಡ ಮತ್ತೊಂದು ಹಿನ್ನಡೆ ಅನುಭವಿಸಿದೆ. ಗುಜರಾತ್ ಟೈಟಾನ್ಸ್‌ನ ಮತ್ತೊಬ್ಬ ಸ್ಟಾರ್ ಟೂರ್ನಿಯ ಹಲವು ಪಂದ್ಯಗಳಿಂದ ಹೊರಗುಳಿಯಬಹುದು.

IPL 2024 Relief at the start Gujarat Titans get an early shock

ಗುಜರಾತ್ ಟೈಟಾನ್ಸ್ ಐಪಿಎಲ್ 2024 ರ ತನ್ನ ಮೊದಲ ಪಂದ್ಯವನ್ನು ಮಾರ್ಚ್ 25 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಆಡಬೇಕಾಗಿದೆ. ಈ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಗುಜರಾತ್ ನ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮ್ಯಾಥ್ಯೂ ವೇಡ್ ಈ ಪಂದ್ಯದಲ್ಲಿ ಆಡುವಂತಿಲ್ಲ. ಇದಕ್ಕೆ ಸ್ವತಃ ಆಟಗಾರರೇ ಕಾರಣವನ್ನೂ ನೀಡಿದ್ದಾರೆ. ವಾಸ್ತವವಾಗಿ ವೇಡ್ ಆಸ್ಟ್ರೇಲಿಯ ಪರ ದೇಶೀಯ ಕ್ರಿಕೆಟ್ ಆಡಲು ಹೆಚ್ಚು ಗಮನಹರಿಸುತ್ತಿದ್ದಾರೆ.

ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್‌ನ ಅಂತಿಮ ಪಂದ್ಯವು ಮಾರ್ಚ್ 21 ರಿಂದ ಮಾರ್ಚ್ 25 ರ ನಡುವೆ ನಡೆಯಲಿದೆ. ಹೀಗಿರುವಾಗ ಗುಜರಾತ್ ನ ಮೊದಲ ಪಂದ್ಯ ಹಾಗೂ ಆಸ್ಟ್ರೇಲಿಯದ ದೇಶೀಯ ಕ್ರಿಕೆಟ್ ನ ಅಂತಿಮ ಪಂದ್ಯ ಒಂದೇ ದಿನ ಇರುತ್ತದೆ. ಈ ಕಾರಣದಿಂದ ಮೊದಲೆರಡು ಪಂದ್ಯಗಳಿಗೆ ರಿಲೀಫ್ ನೀಡಬೇಕು ಎಂದು ಸ್ವತಃ ಆಟಗಾರ ಫ್ರಾಂಚೈಸಿಯಿಂದ ಬೇಡಿಕೆ ಇಟ್ಟಿದ್ದಾರೆ.

IPL 2024 Relief at the start Gujarat Titans get an early shock

ಗುಜರಾತ್ ಟೈಟಾನ್ಸ್ ಐಪಿಎಲ್ 2024 ರ ಎರಡನೇ ಪಂದ್ಯವನ್ನು ಮಾರ್ಚ್ 27 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ಆದರೆ ಈ ಪಂದ್ಯದಲ್ಲೂ ಮ್ಯಾಥ್ಯೂ ಆಡುವಂತಿಲ್ಲ. ಮಾರ್ಚ್ 25 ರವರೆಗೆ ಫೈನಲ್ ಆಡಿದ ನಂತರ, ಆಸ್ಟ್ರೇಲಿಯಾದಿಂದ ಭಾರತಕ್ಕೆ ಬಂದು ಮಾರ್ಚ್ 27 ರಂದು ಚೆನ್ನೈ ವಿರುದ್ಧ ಆಡುವುದು ಸುಲಭವಲ್ಲ, ಇದರಿಂದಾಗಿ ಅವರು ಎರಡನೇ ಪಂದ್ಯದಿಂದಲೂ ಹೊರಗುಳಿಯಬಹುದು. ಮೂರನೇ ಪಂದ್ಯದಿಂದ ಮ್ಯಾಥ್ಯೂ ವೇಡ್ ಆಡಲಿದ್ದಾರೆ. ಗುಜರಾತ್ ಟೂರ್ನಿಯ ಮೂರನೇ ಪಂದ್ಯ ಮಾರ್ಚ್ 31 ರಂದು ಹೈದರಾಬಾದ್ ವಿರುದ್ಧ ನಡೆಯಲಿದೆ.

ಮಾರ್ಚ್ 22ರಿಂದ ಐಪಿಎಲ್

IPL 2024 ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಲೀಗ್‌ನ ಮೊದಲ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಕಳೆದ ಐಪಿಎಲ್ ಸೀಸನ್ ನ ವಿಜೇತ ತಂಡ ಚೆನ್ನೈ ಹಾಗೂ ಮೊದಲ ಟ್ರೋಫಿ ಗೆಲ್ಲಲು ಕಾಯುತ್ತಿರುವ ಆರ್ ಸಿಬಿ ತಂಡಗಳ ನಡುವೆ ನಡೆಯಲಿದೆ. ಈ ಪಂದ್ಯದ ವೇಳೆ ಕ್ರೀಡಾಂಗಣದಲ್ಲೂ ಪ್ರೇಕ್ಷಕರ ದಂಡೇ ಹರಿದು ಬರಲಿದೆ. ಎರಡೂ ತಂಡಗಳಿಗೆ ಕೋಟಿಗಟ್ಟಲೆ ಅಭಿಮಾನಿಗಳಿದ್ದಾರೆ.

Story first published: Friday, March 8, 2024, 17:01 [IST]
Other articles published on Mar 8, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+