2024ರ ಐಪಿಎಲ್ ಹರಾಜಿನಲ್ಲಿ ಹಲವು ಭಾರತೀಯ ಯುವ ಆಟಗಾರರ ಮೇಲೆ ಎಲ್ಲಾ ಹತ್ತು ಫ್ರಾಂಚೈಸಿಗಳು ಕಣ್ಣು ಹಾಯಿಸಿದರು ಮತ್ತು ಕೋಟಿ ಕೊಟಿ ಹಣ ಸುರಿದು ಖರೀದಿಸಿದರು. ಫ್ರಾಂಚೈಸಿಗಳ ಮಾಲೀಕರು ತಮ್ಮ ಪ್ರತಿಭೆಗಳಿಗೆ ಹೆಚ್ಚು ಅಗತ್ಯವಿರುವ ಮನ್ನಣೆ ನೀಡಿದರು.
ಇದೇ ವೇಳೆ ಜಾರ್ಖಂಡ್‌ನ ಯುವ ವಿಕೆಟ್ ಕೀಪರ್-ಬ್ಯಾಟರ್ ರಾಬಿನ್ ಮಿಂಜ್ ಅವರನ್ನು ಮಾಜಿ ಚಾಂಪಿಯನ್ ಗುಜರಾತ್ ಟೈಟನ್ಸ್ 3.6 ಕೋಟಿ ರೂಪಾಯಿಗೆ ಖರೀದಿಸಿ ಅಚ್ಚರಿ ಮೂಡಿಸಿತು.

20 ಲಕ್ಷ ರೂಪಾಯಿ ಮೂಲ ಬೆಲೆ ಹೊಂದಿದ್ದ ರಾಬಿನ್ ಮಿಂಜ್ ಖರೀದಿಸಲು ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟನ್ಸ್ ಬಿಡ್ಡಿಂಗ್ ವಾರ್‌ನಲ್ಲಿ ಪೈಪೋಟಿ ನಡೆಸಿದವು.
ಅಂತಿಮವಾಗಿ, ಗುಜರಾತ್ ಟೈಟನ್ಸ್ ರಾಬಿನ್ ಮಿಂಜ್‌ರನ್ನು ತೆಕ್ಕೆಗೆ ತೆಗೆದುಕೊಂಡಿತು. ಈ ಐತಿಹಾಸಿಕ ಸಹಿಯೊಂದಿಗೆ ರಾಬಿನ್ ಮಿಂಜ್ ಅವರು ಐಪಿಎಲ್ ಫ್ರಾಂಚೈಸಿಯಿಂದ ಖರೀದಿಸಲ್ಪಟ್ಟ ಮೊದಲ ಬುಡಕಟ್ಟು ಕ್ರಿಕೆಟಿಗನಗಿದ್ದಾರೆ.
21 ವರ್ಷದ ರಾಬಿನ್ ಮಿಂಜ್ ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯವರು ಮತ್ತು ಆಗಸ್ಟ್ 2023ರಲ್ಲಿ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಅಂತಾರಾಷ್ಟ್ರೀಯ ತರಬೇತಿ ಶಿಬಿರಕ್ಕಾಗಿ ಮುಂಬೈ ಇಂಡಿಯನ್ಸ್ ತಂಡದಿಂದ ಆಯ್ಕೆಯಾಗಿದ್ದರು.

ಕ್ಲಬ್ ಕ್ರಿಕೆಟ್‌ನಲ್ಲಿ 140ರ ಸ್ಟ್ರೈಕ್ ರೇಟ್ ಹೊಂದಿದ್ದು, ತಮ್ಮ ಸ್ಫೋಟಕ ಹಾಗೂ ಆಕ್ರಮಣಕಾರಿ ಬ್ಯಾಟಿಂಗ್ ಸಾಮರ್ಥ್ಯಕ್ಕೆ ರಾಬಿನ್ ಮಿಂಜ್ ಹೆಸರುವಾಸಿಯಾಗಿದ್ದಾರೆ.
ಭಾರತದಲ್ಲಿ ಹೆಚ್ಚಿನ ಯುವ ವಿಕೆಟ್‌ಕೀಪರ್-ಬ್ಯಾಟರ್‌ಗಳಂತೆ, ರಾಬಿನ್ ಮಿಂಜ್ ಕೂಡ ತಮ್ಮದೇ ರಾಜ್ಯದ ಲೆಜೆಂಡ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಆರಾಧಿಸುತ್ತಾರೆ ಮತ್ತು ಎಡಗೈನಲ್ಲಿ ಸಾಂಪ್ರದಾಯಿಕ ಸ್ಪಿನ್ ಬೌಲ್ ಮಾಡುತ್ತಾರೆ.
10ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ರಾಬಿನ್ ಮಿಂಜ್ ತಮ್ಮ ಅಧ್ಯಯನವನ್ನು ನಿಲ್ಲಿಸಿದರು. ಮಿಂಜ್ ಅವರ ತಂದೆ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಸದ್ಯ ಜಾರ್ಖಂಡ್ ವಿಮಾನ ನಿಲ್ದಾಣದಲ್ಲಿ ಭದ್ರತಾ ಕೆಲಸ ಮಾಡುತ್ತಿದ್ದಾರೆ.
ಇದೇ ವೇಳೆ, ಗುಜರಾತ್ ಟೈಟನ್ಸ್‌ನಿಂದ ಆಯ್ಕೆಯಾದ ನಂತರ, ಮುಂಬರುವ ಆವೃತ್ತಿಯಲ್ಲಿ ರಾಬಿನ್ ಮಿಂಜ್ ತನ್ನ ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡುವ ಉತ್ತಮ ಅವಕಾಶವನ್ನು ಹೊಂದಿದ್ದಾನ. ಏಕೆಂದರೆ ಮಾಜಿ ಚಾಂಪಿಯನ್ ಗುಜರಾತ್ ಟೈಟನ್ಸ್ ಕೇವಲ ಮೂರು ವಿಕೆಟ್‌ಕೀಪರ್‌ಗಳನ್ನು ಮತ್ತು ಕೇವಲ ಇಬ್ಬರು ಭಾರತೀಯ ವಿಕೆಟ್‌ಕೀಪರ್‌ಗಳನ್ನು ಹೊಂದಿದೆ.
ರಾಬಿನ್ ಮಿಂಜ್ ಹೊರತುಪಡಿಸಿ ವೃದ್ಧಿಮಾನ್ ಸಹಾ ಗುಜರಾತ್ ಟೈಟನ್ಸ್ ತಂಡದಲ್ಲಿ ಭಾರತದ ಇತರ ವಿಕೆಟ್ ಕೀಪರ್ ಆಗಿದ್ದಾರೆ. ಆದ್ದರಿಂದ, ಗುಜರಾತ್ ಫ್ರಾಂಚೈಸಿ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ 39 ವರ್ಷದ ವೃದ್ಧಿಮಾನ್ ಸಹಾ ಬದಲಿಗೆ ರಾಬಿನ್ ಮಿಂಜ್ ಅವರನ್ನು ಕಣಕ್ಕಿಳಿಸಲು ಎದುರು ನೋಡುತ್ತದೆ.