For Quick Alerts
ALLOW NOTIFICATIONS  
For Daily Alerts
 

IPL 2024: ಎಂಎಸ್ ಧೋನಿ ನಿವೃತ್ತಿಯಾದರೆ 2025ರಲ್ಲಿ ಸಿಎಸ್‌ಕೆ ತಂಡಕ್ಕೆ ಈತನೇ ನಾಯಕ; ರಾಯುಡು

ಬಹು ನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಮಾರ್ಚ್ 22ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಗಳು ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ.

ಇದೇ ವೇಳೆ ಭಾರತದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಅವರು ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪರ ಆಡಬೇಕೆಂದು ಬಯಸಿದ್ದಾರೆ.

ಮುಂಬರುವ ಆವೃತ್ತಿಯ ಬಳಿಕ ಲೆಜೆಂಡರಿ ಕ್ರಿಕೆಟಿಗ ಎಂಎಸ್ ಧೋನಿ ಐಪಿಎಲ್‌ನಿಂದ ನಿವೃತ್ತಿ ಹೊಂದಿದರೆ, ಟೀಮ್ ಇಂಡಿಯಾ ಹಾಲಿ ನಾಯಕ ರೋಹಿತ್ ಶರ್ಮಾ ಶ್ರೀಮಂತ ಲೀಗ್‌ನಲ್ಲಿ ಐದು ಬಾರಿ ಚಾಂಪಿಯನ್ ತಂಡವನ್ನು ಮುನ್ನಡೆಸಬಹುದು ಎಂದು ಅಂಬಟಿ ರಾಯುಡು ಹೇಳಿದರು.

IPL 2024 Rohit Sharma to Lead CSK in 2025 If MS Dhoni Retires Says Ambati Rayudu

ಗಮನಾರ್ಹವಾಗಿ, ಗುಜರಾತ್ ಟೈಟನ್ಸ್ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್‌ಗೆ ಮರಳುವುದರೊಂದಿಗೆ, ಫ್ರಾಂಚೈಸಿಯಲ್ಲಿ ಎಲ್ಲವೂ ಇದ್ದಕ್ಕಿದ್ದಂತೆ ಬದಲಾಗಿದೆ. ಏಕೆಂದರೆ ಆಲ್‌ರೌಂಡರ್‌ನನ್ನು ನೂತನ ನಾಯಕನಾಗಿ ನೇಮಿಸಲಾಯಿತು. ಇದನ್ನು ತಂಡದ ಕೆಲವು ಕ್ರಿಕೆಟಿಗರು ಇನ್‌ಸ್ಟಾಗ್ರಾಮ್‌ನಲ್ಲಿ ರಹಸ್ಯ ಸ್ಟೋರಿಗಳನ್ನು ಹಾಕಿದರು.

ಕಳೆದ ಎರಡು ಆವೃತ್ತಿಗಳಲ್ಲಿ ಆರಂಭಿಕ ಬ್ಯಾಟ್‌ನೊಂದಿಗೆ ರೋಹಿತ್ ಶರ್ಮಾ ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ ಮತ್ತು ಕೆಲವು ಜವಾಬ್ದಾರಿಯಿಂದ ಅವರನ್ನು ಮುಕ್ತಗೊಳಿಸಲು ಫ್ರಾಂಚೈಸಿ ನಿರ್ಧರಿಸಿತು ಎಂದು ಮುಂಬೈ ಇಂಡಿಯನ್ಸ್ ಕೋಚ್ ಮಾರ್ಕ್ ಬೌಚರ್ ತಿಳಿಸಿದರು.

ಇದಕ್ಕೆ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್ ಅವರು ಮಾರ್ಕ್ ಬೌಚರ್ ಅವರ ಕಾಮೆಂಟ್‌ಗಳನ್ನು ತಪ್ಪು ದಾರಿಗೆಳೆಯುವಂತದ್ದಾಗಿದೆ ಎಂದು ಹೇಳಿದಾಗ, ವಿಷಯವು ಮತ್ತಷ್ಟು ಉಲ್ಬಣಗೊಂಡಿತು. ಅಂದಿನಿಂದ, ಯಾವುದೇ ಕ್ರಿಕೆಟಿಗರು ಅಥವಾ ಮ್ಯಾನೇಜ್‌ಮೆಂಟ್ ಪರಿಸ್ಥಿತಿಯ ಬಗ್ಗೆ ಯಾವುದೇ ಮಾತನ್ನು ಹೇಳಿಲ್ಲ.

ಈ ವಿಷಯದ ಬಗ್ಗೆ ಅಂಬಟಿ ರಾಯುಡು ಅವರನ್ನು ಕೇಳಿದಾಗ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕನಿಷ್ಠ ಐದರಿಂದ ಆರು ವರ್ಷಗಳ ಕಾಲ ಐಪಿಎಲ್ ಆಡಬಹುದು ಎಂದು ಹೇಳಿದರು.

ಯಾವುದೇ ತಂಡವು ತನ್ನ ಸಾಮರ್ಥ್ಯದ ಆಟಗಾರನನ್ನು ಹೊಂದಲು ಇಷ್ಟಪಡುತ್ತದೆ ಮತ್ತು ಅವರು ಅತೃಪ್ತರಾಗಿದ್ದರೆ, ಮುಂಬರುವ ಋತುವಿನಲ್ಲಿ ಸ್ಟಾರ್ ಕ್ರಿಕೆಟಿಗರು ಸಿಎಸ್‌ಕೆ ತಂಡಕ್ಕೆ ಸೇರಬಹುದು ಎಂಬ ಆಘಾತಕಾರಿ ಹೇಳಿಕೆ ನೀಡಿದರು.

"ರೋಹಿತ್ ಶರ್ಮಾ ಮುಂದಿನ 5-6 ವರ್ಷಗಳವರೆಗೆ ಐಪಿಎಲ್ ಆಡಬಹುದು. ಅವರು ನಾಯಕನಾಗಲು ಬಯಸಿದರೆ, ಇಡೀ ಜಗತ್ತು ತೆರೆದಿರುತ್ತದೆ. ಅವರನ್ನು ಯಾವ ತಂಡ ಬೇಕಾದರೂ ಸುಲಭವಾಗಿ ಕ್ಯಾಪ್ಟನ್ ಮಾಡಬಹುದು".

IPL 2024 Rohit Sharma to Lead CSK in 2025 If MS Dhoni Retires Says Ambati Rayudu

"ರೋಹಿತ್ ಶರ್ಮಾ ಅವರು 2025ರಲ್ಲಿ ಸಿಎಸ್‌ಕೆ ತಂಡದ ಪರ ಆಡಬೇಕೆಂದು ನಾನು ಬಯಸುತ್ತೇನೆ, ಎಂಎಸ್ ಧೋನಿ ನಿವೃತ್ತಿಯಾದರೆ ರೋಹಿತ್ ಶರ್ಮಾ ಕೂಡ ಮುನ್ನಡೆಸಬಹುದುಮ," ಎಂದು ಅಂಬಟಿ ರಾಯುಡು ಹೇಳಿದರು.

ಇದೇ ವೇಳೆ 36 ವರ್ಷದ ರೋಹಿತ್ ಶರ್ಮಾ ಸ್ವಲ್ಪ ವಿರಾಮದ ನಂತರ, ಶೀಘ್ರದಲ್ಲೇ ಮುಂಬೈ ಇಂಡಿಯನ್ಸ್ ಶಿಬಿರವನ್ನು ಸೇರುವ ನಿರೀಕ್ಷೆಯಿದೆ. ಇತ್ತೀಚಿಗೆ ಇಂಗ್ಲೆಂಡ್ ವಿರುದ್ಧ ಎಲ್ಲಾ ಐದು ಟೆಸ್ಟ್ ಪಂದ್ಯಗಳನ್ನು ಆಡಿದರು, ಇದರಲ್ಲಿ ಭಾರತವು ರೋಹಿತ್ ಶರ್ಮಾ ನಾಯಕತ್ವದಲ್ಲಿ 4-1 ಅಂತರದಿಂದ ಗೆದ್ದಿತು.

2024ರ ಐಪಿಎಲ್ ಮಾರ್ಚ್ 22ರಂದು ಚೆನ್ನೈನಲ್ಲಿ ಪ್ರಾರಂಭವಾಗಲಿರುವುದರಿಂದ, ರೋಹಿತ್ ಶರ್ಮಾ ಅವರು ಟಿ20 ಲೀಗ್ ಜ್ವರಕ್ಕೆ ಸಜ್ಜಾಗುವ ಮೊದಲು ಕನಿಷ್ಠ ಒಂದು ವಾರದ ವಿರಾಮವನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ.

ಆದಾಗ್ಯೂ, ಮುಂಬೈ ಇಂಡಿಯನ್ಸ್ ತನ್ನ ಆರಂಭಿಕ ಪಂದ್ಯವನ್ನು ಗುಜರಾತ್ ಟೈಟನ್ಸ್ ವಿರುದ್ಧ ಮಾರ್ಚ್ 24ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಡಲಿದೆ.

Story first published: Monday, March 11, 2024, 18:19 [IST]
Other articles published on Mar 11, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+