IPL 2024: ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಸಾಯಿ ಸುದರ್ಶನ್; ಈ ದಾಖಲೆ ಬರೆದ ಮೊದಲ ಭಾರತೀಯ
ಶುಕ್ರವಾರ, ಮೇ 10ರಂದು ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ 2024ರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ಆರಂಭಿಕರಾದ ನಾಯಕ ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಭರ್ಜರಿ ಶತಕ ಬಾರಿಸಿ ಮಿಂಚಿದರು.
ಇದೇ ವೇಳೆ ಎಡಗೈ ಬ್ಯಾಟರ್ ಸಾಯಿ ಸುದರ್ಶನ್ ಅವರು ಚೊಚ್ಚಲ ಶತಕ ಸಿಡಿಸಿದ್ದಲ್ಲದೆ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ವೇಗವಾಗಿ 1000 ರನ್‌ಗಳ ಹೆಗ್ಗುರುತನ್ನು ತಲುಪಿದ ಮೊದಲ ಭಾರತೀಯ ದಾಖಲೆಯನ್ನು ನಿರ್ಮಿಸಿದರು.

ಸಾಯಿ ಸುದರ್ಶನ್ ಅವರು ಸಚಿನ್ ತೆಂಡೂಲ್ಕರ್ ಮತ್ತು ರುತುರಾಜ್ ಗಾಯಕ್ವಾಡ್ ಜಂಟಿಯಾಗಿ ಹೊಂದಿದ್ದ ದಾಖಲೆಯನ್ನು ಮುರಿದರು, ಇಬ್ಬರೂ ತಮ್ಮ 31ನೇ ಇನ್ನಿಂಗ್ಸ್‌ನಲ್ಲಿ 1000 ಐಪಿಎಲ್ ರನ್‌ಗಳ ಮೈಲಿಗಲ್ಲನ್ನು ತಲುಪಿದ್ದರು.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಿಎಸ್‌ಕೆ ವಿರುದ್ಧದ ಐಪಿಎಲ್ 2024ರ ಪಂದ್ಯದಲ್ಲಿ ಸಾಯಿ ಸುದರ್ಶನ್ ತಮ್ಮ 25ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು.
ಈ ಮೂಲಕ ಸಾಯಿ ಸುದರ್ಶನ್ ಅವರು ಮ್ಯಾಥ್ಯೂ ಹೇಡನ್ ಜೊತೆಗೆ 1000 ಐಪಿಎಲ್ ರನ್ ಗಳಿಸಿದ ಜಂಟಿ ಮೂರನೇ ವೇಗದ ಬ್ಯಾಟರ್ ಎನಿಸಿದರು. ಐಪಿಎಲ್ 2008ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುವಾಗ ಆರೆಂಜ್ ಕ್ಯಾಪ್ ಗೆದ್ದ ಶಾನ್ ಮಾರ್ಷ್ 21 ಇನ್ನಿಂಗ್ಸ್‌ಗಳಲ್ಲಿ ಈ ದಾಖಲೆ ಹೊಂದಿದ್ದಾರೆ.

ಲೆಂಡ್ಲ್ ಸಿಮನ್ಸ್ 23 ಇನ್ನಿಂಗ್ಸ್ ಮೂಲಕ ಎರಡನೇ ಸ್ಥಾನದಲ್ಲಿದ್ದರೆ, ಜಾನಿ ಬೈರ್‌ಸ್ಟೋವ್, ಕ್ರಿಸ್ ಗೇಲ್, ಕೇನ್ ವಿಲಿಯಮ್ಸನ್ ಮತ್ತು ಮೈಕಲ್ ಹಸ್ಸಿ ಕ್ರಮವಾಗಿ 26, 27, 28 ಮತ್ತು 30ನೇ ಇನ್ನಿಂಗ್ಸ್‌ಗಳಲ್ಲಿ 1000 ಐಪಿಎಲ್ ರನ್ ಬಾರಿಸಿದ್ದಾರೆ.
ಐಪಿಎಲ್‌ನಲ್ಲಿ ಅತಿ ವೇಗವಾಗಿ 1000 ರನ್ ಗಳಿಸಿದ ದಾಖಲೆ ಹೊಂದಿದ ಆಟಗಾರರು
ಶಾನ್ ಮಾರ್ಷ್ - 21 ಇನ್ನಿಂಗ್ಸ್
ಲೆಂಡ್ಲ್ ಸಿಮನ್ಸ್ - 23 ಇನ್ನಿಂಗ್ಸ್
ಮ್ಯಾಥ್ಯೂ ಹೇಡನ್ - 25 ಇನ್ನಿಂಗ್ಸ್
ಸಾಯಿ ಸುದರ್ಶನ್ - 25 ಇನ್ನಿಂಗ್ಸ್
ಜಾನಿ ಬೈರ್‌ಸ್ಟೋವ್ - 26 ಇನ್ನಿಂಗ್ಸ್
ಕ್ರಿಸ್ ಗೇಲ್ - 27 ಇನ್ನಿಂಗ್ಸ್
ಕೇನ್ ವಿಲಿಯಮ್ಸನ್ - 28 ಇನ್ನಿಂಗ್ಸ್
ಮೈಕೆಲ್ ಹಸ್ಸಿ - 30 ಇನ್ನಿಂಗ್ಸ್
ಸಚಿನ್ ತೆಂಡೂಲ್ಕರ್ - 31 ಇನ್ನಿಂಗ್ಸ್
ರುತುರಾಜ್ ಗಾಯಕ್ವಾಡ್ - 31 ಇನ್ನಿಂಗ್ಸ್
ಚೊಚ್ಚಲ ಐಪಿಎಲ್ ಶತಕ ಬಾರಿಸಿ ಮಿಂಚಿದ ಸಾಯಿ ಸುದರ್ಶನ್
2023ರ ಐಪಿಎಲ್ ಫೈನಲ್‌ನಲ್ಲಿ ಸಾಯಿ ಸುದರ್ಶನ್ 96 ರನ್‌ಗಳಿಗೆ ಔಟಾದ ನಂತರ, ಸಿಎಸ್‌ಕೆ ವಿರುದ್ಧ ಶತಕ ಗಳಿಸುವ ಅವಕಾಶವನ್ನು ತಪ್ಪಿಸಿಕೊಂಡಿದ್ದರು. ಅಲ್ಲದೆ, ಆ ಪಂದ್ಯವನ್ನು ಸೋತ ಗುಜರಾತ್ ಟೈಟನ್ಸ್ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಆದರೆ ಶುಕ್ರವಾರದ ಪಂದ್ಯದಲ್ಲಿ ಅದೇ ಸಿಎಸ್‌ಕೆ ವಿರುದ್ಧದ ಅವಕಾಶವನ್ನು ಮಿಸ್ ಮಾಡಿಕೊಳ್ಳಲಿಲ್ಲ. ತಮಿಳುನಾಡು ಮೂಲದ ಬ್ಯಾಟರ್ ತನ್ನ ಚೊಚ್ಚಲ ಐಪಿಎಲ್ ಶತಕವನ್ನು ಕೇವಲ 50 ಎಸೆತಗಳಲ್ಲಿ ಪೂರೈಸಿದರು.
ಸಾಯಿ ಸುದರ್ಶನ್ 32 ಎಸೆತಗಳಲ್ಲಿ ತಮ್ಮ ಅರ್ಧಶತಕ ಗಳಿಸಿದರು. ನಂತರ ತಮ್ಮ ಶತಕವನ್ನು ತಲುಪಲು ಸಿಮರ್ಜೀತ್ ಸಿಂಗ್ ಅವರ ಬೌಲಿಂಗ್‌ನಲ್ಲಿ ಲಾಂಗ್ ಲೆಗ್‌ಗೆ ಸಿಕ್ಸರ್ ಬಾರಿಸಿದರು.
ಇನ್ನು 50 ಎಸೆತಗಳಲ್ಲಿ ಶತಕ ಪೂರೈಸಿದ ಶುಭ್ಮನ್ ಗಿಲ್ ಜೊತೆಗೆ ಸಾಯಿ ಸುದರ್ಶನ್ 210 ರನ್‌ಗಳ ಜೊತೆಯಾಟ ನಿರ್ಮಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಕಾಟ ನೀಡಿದರು. ಇದೇ ವೇಳೆ ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಜೋಡಿ ಐಪಿಎಲ್ ಇತಿಹಾಸದಲ್ಲಿ ಆರನೇ ಬಾರಿಗೆ 200 ಪ್ಲಸ್ ಜೊತೆಯಾಟವನ್ನು ದಾಖಲಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications