For Quick Alerts
ALLOW NOTIFICATIONS  
For Daily Alerts
 

GT vs CSK IPL 2024: ಚೆನ್ನೈ ಚಳಿ ಬಿಡಿಸಿದ ಗಿಲ್-ಸುದರ್ಶನ್; ಜಿಟಿ ಆರಂಭಿಕರ ಅವಳಿ ಶತಕಕ್ಕೆ ಕಂಗಾಲಾದ ಸಿಎಸ್‌ಕೆ

ಶುಕ್ರವಾರ, ಮೇ 10ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 59ನೇ ಪಂದ್ಯದಲ್ಲಿ ಆತಿಥೇಯ ಗುಜರಾತ್ ಟೈಟನ್ಸ್ ತಂಡವು ತನ್ನ ಆರಂಭಿಕ ಬ್ಯಾಟರ್‌ಗಳ ಅವಳಿ ಶತಕಗಳ ನೆರವಿನಿಂದ ಪ್ರವಾಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡ ಸಾಯಿ ಸುದರ್ಶನ್ ಮತ್ತು ನಾಯಕ ಶುಭ್ಮನ್ ಗಿಲ್ ಅವರ ಭರ್ಜರಿ ಶತಕಗಳ ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 231 ರನ್ ಗಳಿಸಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 232 ರನ್‌ಗಳ ಬೃಹತ್ ಗುರಿ ನೀಡಿದೆ.

IPL 2024 Shubman Gill-Sai Sudharsan Hits Century CSK Need 232 Runs To Win Against Gujarat Titans

ಗುಜರಾತ್ ಟೈಟನ್ಸ್ ತಂಡದ ಇನ್ನಿಂಗ್ಸ್ ಆರಂಭಿಸಿದ ನಾಯಕ ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ದೊಡ್ಡ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 17.2 ಓವರ್‌ಗಳಲ್ಲಿ 210 ರನ್‌ಗಳ ಜೊತೆಯಾಟ ನಿರ್ಮಿಸಿ ಬೃಹತ್ ಮೊತ್ತಕ್ಕೆ ಅಡಿಪಾಯ ಹಾಕಿದರು.

ಸಾಯಿ ಸುದರ್ಶನ್ 51 ಎಸೆತಗಳಲ್ಲಿ 5 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್‌ಗಳ ಮೂಲಕ 103 ರನ್ ಗಳಿಸಿ ಔಟಾದರೆ, ಶುಭ್ಮನ್ ಗಿಲ್ 55 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 6 ಸಿಕ್ಸರ್‌ಗಳ ಸಮೇತ 104 ರನ್ ಬಾರಿಸಿ 18ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು.

IPL 2024 Shubman Gill-Sai Sudharsan Hits Century CSK Need 232 Runs To Win Against Gujarat Titans

ಗಮನಾರ್ಹವಾಗಿ, ಶುಭ್ಮನ್ ಗಿಲ್ ಅವರು ಐಪಿಎಲ್ ಇತಿಹಾಸದ 100ನೇ ಶತಕ ಗಳಿಸಿದರೆ, ಸಾಯಿ ಸುದರ್ಶನ್ ಐಪಿಎಲ್‌ನ 101ನೇ ಶತಕ ಬಾರಿಸಿದರು. ಗುಜರಾತ್ ಟೈಟನ್ಸ್ ಆರಂಭಿಕರು 210 ರನ್‌ಗಳ ಜೊತೆಯಾಟ ಸೇರಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ ಜಂಟಿ ಅತ್ಯಧಿಕ ಮೊದಲ ವಿಕೆಟ್ ಜೊತೆಯಾಟವಾಗಿದೆ.

ನಂತರ ಬಂದ ಡೇವಿಡ್ ಮಿಲ್ಲರ್ 11 ಎಸೆತಗಳಲ್ಲಿ 16 ರನ್ ಗಳಿಸಿದರೆ, ಶಾರೂಖ್ ಖಾನ್ 3 ಎಸೆತಗಳಲ್ಲಿ 2 ರನ್ ಗಳಿಸಿ ಕೊನೆಯ ಎಸೆತದಲ್ಲಿ ರನೌಟ್ ಆದರು.

ಇನ್ನು ಬೌಲಿಂಗ್‌ನಲ್ಲಿ ಸಿಎಸ್‌ಕೆ ತಂಡದ ಪರ ತುಷಾರ್ ದೇಶಪಾಂಡೆ 4 ಓವರ್‌ಗಳಲ್ಲಿ 33 ರನ್ ನೀಡಿ 2 ವಿಕೆಟ್ ಪಡೆದರೆ, ಉಳಿದ ಬೌಲರ್‌ಗಳು ದುಬಾರಿಯಾದರು ಮತ್ತು ವಿಕೆಟ್ ರಹಿತರಾದರು.

Story first published: Friday, May 10, 2024, 21:21 [IST]
Other articles published on May 10, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+