ಎಲ್ಲವೂ ಅಂದುಕೊಂಡಂತೆ ನಡೆದರೆ, ಮಾರ್ಚ್ 22ರಿಂದ ಪ್ರಾರಂಭವಾಗುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್ 17ರ ಉತ್ಸಾಹವು ನಿಧಾನವಾಗಿ ಬೆಳೆಯುತ್ತಿದೆ. ಶ್ರೀಮಂತ ಕ್ರಿಕೆಟ್ ಲೀಗ್‌ಗಾಗಿ ಎಲ್ಲಾ ಹತ್ತು ಫ್ರಾಂಚೈಸಿಗಳು ತಯಾರಿ ನಡೆಸಿವೆ.
ಇನ್ನು ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡ 2023ರ ಐಪಿಎಲ್ ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿದ ನಂತರ, ತಮ್ಮ ಐದನೇ ಟ್ರೋಫಿಯನ್ನು ಗೆದ್ದುಕೊಂಡಿತು. ಮುಂಬರುವ ಆವೃತ್ತಿಯಲ್ಲಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಎದುರು ನೋಡುತ್ತಿದೆ.

17ನೇ ಐಪಿಎಲ್ ಆವೃತ್ತಿಗೂ ಮುನ್ನ ಎಲ್ಲಾ ಹತ್ತು ಫ್ರಾಂಚೈಸಿಗಳು ಮಿನಿ ಹರಾಜಿನಲ್ಲಿ ತಮ್ಮ ತಂಡವನ್ನು ನಿರ್ಮಿಸಿಕೊಂಡಿವೆ ಮತ್ತು ವಿಶ್ವದ ಅತಿದೊಡ್ಡ ಟಿ20 ಲೀಗ್‌ನಲ್ಲಿ ಮತ್ತೊಂದು ಅದ್ಭುತ ಪ್ರದರ್ಶನವನ್ನು ನೀಡಲು ಸಜ್ಜಾಗಿವೆ.
ಮುಂಬರುವ ಐಪಿಎಲ್‌ಗೆ ದಿನಗಣನೆ ಆರಂಭವಾಗಿದ್ದು, ಇದೇ ವೇಳೆ ಭಾರತ ತಂಡದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತೊಮ್ಮೆ ಪ್ಲೇಆಫ್‌ಗೆ ಅರ್ಹತೆ ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

"ಸಿಎಸ್‌ಕೆ ಯಾವಾಗಲೂ ಮೊದಲ ನಾಲ್ಕರಲ್ಲಿ ಖಂಡಿತವಾಗಿಯೂ ಬರುತ್ತದೆ ಎಂದು ನಾನು ಭಾವಿಸುತ್ತೇನೆ. ನೀವು ಬೇರೆ ಯಾವುದೇ ತಂಡದ ಬಗ್ಗೆ ಕೇಳಿದರೆ, ಖಂಡಿತವಾಗಿಯೂ ಹೌದು ಎಂದು ಫೇವರಿಟ್ ಎಂದು ಹೇಳಲು ಸಾಧ್ಯವಿಲ್ಲ".
"ಆದರೆ, ಇಷ್ಟು ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರದರ್ಶನ ನೀಡಿದ ರೀತಿ ನೋಡಿದರೆ, 16 ಆವೃತ್ತಿಗಳಲ್ಲಿ 12ರಲ್ಲಿ ಪ್ಲೇಆಫ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಆದ್ದರಿಂದ ಇದು 13ನೇ ಬಾರಿಗೆ ಸಂಭವಿಸುವ ಸಾಧ್ಯತೆಯಿದೆ," ಎಂದು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ತಿಳಿಸಿದರು.
ಮಾತು ಮುಂದುವರೆಸಿದ ಮಾಜಿ ಕ್ರಿಕೆಟಿಗ, ಯುವ ಆಟಗಾರರು ಮತ್ತು ಅನುಭವದ ಪರಿಪೂರ್ಣ ಮಿಶ್ರಣದೊಂದಿಗೆ ಪ್ರಬಲ ತಂಡವನ್ನು ನಿರ್ಮಿಸಲು ಸಿಎಸ್‌ಕೆ ಮ್ಯಾನೇಜ್‌ಮೆಂಟ್‌ಗೆ ಅವಕಾಶವಿದೆ ಎಂದು ಸುನಿಲ್ ಗವಾಸ್ಕರ್ ಗಮನ ಸೆಳೆದರು.

"ಹರಾಜು ಟೇಬಲ್‌ನಲ್ಲಿ ಸಿಎಸ್‌ಕೆ ಮಾಡಿದ ಖರೀದಿಗಳನ್ನು ನೀವು ನೋಡಿದರೆ, ಅವರಿಗೆ ಬಲಪಡಿಸಬೇಕಾದ ಅಂಶಗಳು ಸಿಕ್ಕಿವೆ. ಕಳೆದ ವರ್ಷ ಬೌಲಿಂಗ್‌ನಲ್ಲಿ ಸ್ವಲ್ಪ ಕೊರತೆ ಇದ್ದಂತೆ ತೋರುತ್ತಿತ್ತು ಮತ್ತು ಅಂಬಟಿ ರಾಯುಡು ಅವರ ನಿವೃತ್ತಿಯ ನಂತರ ಅವರು ಬ್ಯಾಟಿಂಗ್‌ನಲ್ಲಿಯೂ ಮಧ್ಯಮ ಕ್ರಮಾಂಕವನ್ನು ಸ್ವಲ್ಪ ಬಲಪಡಿಸಬೇಕಾಯಿತು. ಇದೀಗ ಅದೆಲ್ಲವನ್ನೂ ಮಾಡಿದ್ದಾರೆ. ಯುವ ಮತ್ತು ಅನುಭವದ ಉತ್ತಮ ಮಿಶ್ರಣವನ್ನು ಹೊಂದಿದ್ದಾರೆ," ಎಂದು ಸುನಿಲ್ ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಳಿದರು.
ಗಮನಾರ್ಹವಾಗಿ, ಮುಂಬರುವ ಐಪಿಎಲ್ ಆವೃತ್ತಿಯು ಸಿಎಸ್‌ಕೆ ತಂಡಕ್ಕೆ ಇನ್ನಷ್ಟು ವಿಶೇಷವಾಗಿದೆ ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ, ಇದು ಸಿಎಸ್‌ಕೆ ಲೆಜೆಂಡ್ ನಾಯಕ ಎಂಎಸ್ ಧೋನಿ ಅವರಿಗೆ ಕೊನೆಯ ಸೀಸನ್ ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ.
ವಿಕೆಟ್‌ಕೀಪರ್-ಬ್ಯಾಟರ್ ಎಂಎಸ್ ಧೋನಿ 2008ರಲ್ಲಿ ತಮ್ಮ ಚೊಚ್ಚಲ ಋತುವಿನಿಂದ ಸಿಎಸ್‌ಕೆ ಫ್ರಾಂಚೈಸಿಯನ್ನು ಮುನ್ನಡೆಸಿದ್ದಾರೆ ಮತ್ತು ಸಿಎಸ್‌ಕೆ ತಂಡವು ಧೋನಿ ನಾಯಕತ್ವದಲ್ಲಿ ಜಂಟಿ-ಅತಿ ಹೆಚ್ಚು ಐದು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
ಹೀಗಾಗಿ, ಮುಂಬರುವ ಆವೃತ್ತಿಯಲ್ಲಿ ಮೈದಾನವು ಮತ್ತೊಮ್ಮೆ ಭರ್ತಿಯಾಗುವ ನಿರೀಕ್ಷೆಯಿದೆ. ಏಕೆಂದರೆ ಅಭಿಮಾನಿಗಳು ತಮ್ಮ ಪ್ರೀತಿಯ "ಥಲಾ' ರನ್ನು ಅಂತಿಮ ಬಾರಿಗೆ ನೋಡಲು ಕ್ರೀಡಾಂಗಣಗಳಿಗೆ ಸೇರಲಿದ್ದಾರೆ.