Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಈ ತಂಡವೇ ಅತಿ ಹೆಚ್ಚು ನಾಯಕರನ್ನು ಬದಲಿಸಿದೆ; ಈ ಪಟ್ಟಿಯಲ್ಲಿ ಆರ್‌ಸಿಬಿಗೆ ಎಷ್ಟನೇ ಸ್ಥಾನ

ಶುಕ್ರವಾರ (ಮಾರ್ಚ್ 22) 17ನೇ ಆವೃತ್ತಿ ಐಪಿಎಲ್‌ಗೆ ಚಾಲನೆ ಸಿಕ್ಕಿದೆ. ಟೂರ್ನಿ ಆರಂಭಕ್ಕೂ ಒಂದು ದಿನ ಮೊದಲೇ ಚೆನ್ನೈ ಸೂಪರ್‌ ಕಿಂಗ್ಸ್‌ ತನ್ನ ನಾಯಕನನ್ನು ಬದಲಾವಣೆ ಮಾಡಿತು. ಐದು ಬಾರಿ ತಂಡಕ್ಕೆ ಚಾಂಪಿಯನ್ ಮುಕುಟ ತೊಡಿಸಿದ ಎಂಎಸ್‌ ಧೋನಿ ನಾಯಕತ್ವದಿಂದ ಕೆಳಗಿಳಿದಿದ್ದು, ಯುವ ಆಟಗಾರ ರುತುರಾಜ್ ಗಾಯಕ್ವಾಡ್‌ ಅವರಿಗೆ ಪಟ್ಟವನ್ನು ಕಟ್ಟಲಾಗಿದೆ.

ಈ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ ಬಹು ದಿನಗಳಿಂದ ಎದ್ದಿದ್ದ ಒಂದು ಪ್ರಶ್ನೆಗೆ ಉತ್ತರ ನೀಡಿದೆ. ಧೋನಿಯ ನಂತರ ಟೀಮ್ ಮುನ್ನಡೆಸುವವರು ಯಾರು ಎಂಬ ಪ್ರಶ್ನೆಗೆ, ಮ್ಯಾನೇಜ್ಮೆಂಟ್‌ ರುತುರಾಜ್ ಗಾಯಕ್ವಾಡ್‌ ಎಂದು ಉತ್ತರಿಸಿದೆ. ಹಾಗಿದ್ದರೆ, ಚೆನ್ನೈ ತಂಡವನ್ನು ಮುನ್ನಡೆಸಿದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆ ರುತುರಾಜ್ ಗಾಯಕ್ವಾಡ್‌ ಪಾತ್ರರಾಗಲಿದ್ದಾರೆ.

IPL 2024 This team has changed the most captains What is the position of RCB in this list

ಇದರೊಂದಿಗೆ ವರ್ಷಗಳ ನಂತರ ಸಿಎಸ್ ಕೆಗೆ ಹೊಸ ನಾಯಕ ಸಿಕ್ಕಿದ್ದಾರೆ. ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ತಂಡವು ತನ್ನ ಮೊದಲ ಪಂದ್ಯವನ್ನು ಗೆದ್ದು ಆರ್‌ಸಿಬಿ ಶಾಕ್ ನೀಡಿದೆ. ರುತುರಾಜ್ ಗಾಯಕ್ವಾಡ್‌ ಗೆಲುವಿನ ಮೂಲಕ ನಾಯಕತ್ವದ ಗುಣಗಳನ್ನು ಸಾರಿ ಹೇಳಿದ್ದಾರೆ. ಮೈದಾನದಲ್ಲಿ ಧೋನಿ ಇದ್ದರೂ ಸಹ ಸರಿಯಾದ ಸಮಯದಲ್ಲಿ ಬೌಲಿಂಗ್ ಬದಲಾವಣೆ ಮಾಡಿ ಗಾಯಕ್ವಾಡ್ ಸೂ ಎನಿಸಿಕೊಂಡರು.

ಐಪಿಎಲ್‌ನಲ್ಲಿ ಕನಿಷ್ಠ ನಾಯಕತ್ವ ಬದಲಾವಣೆ ಮಾಡುವ ವಿಚಾರದಲ್ಲಿ ಸಿಎಸ್‌ಕೆ ಹೆಸರು ಮುಂಚೂಣಿಯಲ್ಲಿದೆ. ಈ ಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಹೆಸರುಗಳು ಸಿಎಸ್‌ಕೆಗಿಂತ ಮುಂದಿದ್ದರೂ, ಈ ಎರಡೂ ತಂಡಗಳು 2022 ರಿಂದ ಐಪಿಎಲ್ ಆಡಲು ಪ್ರಾರಂಭಿಸಿವೆ.

IPL 2024 This team has changed the most captains What is the position of RCB in this list

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಅಂಗಳಕ್ಕೆ ಪ್ರವೇಶಿಸುತ್ತಿದ್ದಂತೆ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಲ್ಕನೇ ನಾಯಕರಾದರು. ಇದಕ್ಕೂ ಮುನ್ನ ಸಿಎಸ್‌ಕೆ ನಾಯಕ ಎಂಎಸ್ ಧೋನಿ, ಸುರೇಶ್ ರೈನಾ ಮತ್ತು ರವೀಂದ್ರ ಜಡೇಜಾ ಚೆನ್ನೈ ತಂಡವನ್ನು ಮುನ್ನಡೆಸಿದ್ದರು. ಇವರನ್ನು ಬಿಟ್ಟರೆ ಇಲ್ಲಿಯವರೆಗೂ ಸಿಎಸ್‌ಕೆ ನಾಯಕತ್ವವನ್ನು ಬೇರೆ ಯಾವ ಆಟಗಾರರೂ ವಹಿಸಿ ಕೊಂಡಿರಲಿಲ್ಲ.

ಯಾರು ಅತಿ ಹೆಚ್ಚು ಬಾರಿ ನಾಯಕರನ್ನು ಬದಲಾವಣೆ ಮಾಡಿದ್ದಾರೆ?

ನಾಯಕರನ್ನು ಅತಿ ಹೆಚ್ಚು ಬದಲಾವಣೆ ಮಾಡಿರುವ ಕೀರ್ತಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಸಲ್ಲುತ್ತದೆ. 17ನೇ ಆವೃತ್ತಿಯ ಐಪಿಎಲ್‌ ನಡೆಯುತ್ತಿದ್ದು, ಪಂಜಾಬ್ ಈಗಾಗಲೇ 15 ನಾಯಕರನ್ನು ಬದಲಾವಣೆ ಮಾಡಿ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.

ಒಮ್ಮೆಯೂ ಕಪ್‌ ಗೆಲ್ಲದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಡೆಲ್ಲಿ 12 ಬಾರಿ ನಾಯಕರನ್ನು ಬದಲಾವಣೆ ಮಾಡಿದೆ. ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಇದ್ದು ಸನ್ ತಂಡ 10 ಕ್ಯಾಪ್ಟನ್‌ ಬದಲಾವಣೆ ಮಾಡಿದೆ. ನಾಲ್ಕನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ಇದ್ದು 09 ನಾಯಕರನ್ನು ಕಂಡಿದೆ. ಐದನೇ ಸ್ಥಾನದಲ್ಲಿರುವ ಕೆಕೆಆರ್‌ 7 ಹೊಸ ನಾಯಕರನ್ನು ಕಂಡಿದೆ.

ಆರನೇ ಸ್ಥಾನದಲ್ಲಿ ಆರ್‌ಸಿಬಿ (7), ರಾಜಸ್ಥಾನ ರಾಯಲ್ಸ್‌ (6), ಚೆನ್ನೈ ಸೂಪರ್ ಕಿಂಗ್ಸ್ (4), ಗುಜರಾತ್‌ ಟೈಟನ್ಸ್‌ (3), ಲಖ್ನೋ ಸೂಪರ್ ಜೇಂಟ್ಸ್ (2) ಈ ಪಟ್ಟಿಯ ಕೊನೆಯಲ್ಲಿ ಕಾಣಿಸಿಕೊಳ್ಳುತ್ತವೆ.

Story first published: Saturday, March 23, 2024, 10:01 [IST]
Other articles published on Mar 23, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+