For Quick Alerts
ALLOW NOTIFICATIONS  
For Daily Alerts
 

IPL 2024: ಈ ಬಾರಿಯ ಆವೃತ್ತಿಗಾಗಿ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ ಕೊಟ್ಟ ಐಪಿಎಲ್ ಅಧ್ಯಕ್ಷ

ಬಹು ನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 17ನೇ ಆವೃತ್ತಿಯ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಮಾರ್ಚ್ 22ರಿಂದ ಮೊದಲ ಹಂತದ ಪಂದ್ಯಗಳು ನಡೆಯಲಿವೆ.

ಈಗಾಗಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇನ್ನು ಲೋಕಸಭೆ ಚುನಾವಣೆಯ ವೇಳಾಪಟ್ಟಿ ಹೊರಬಂದ ನಂತರ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.

IPL 2024 To Have More Double-header Matches Says IPL Chairman Arun Dhumal

ಐಪಿಎಲ್ ಆಡಳಿತ ಮಂಡಳಿಯು ಸಾರ್ವತ್ರಿಕ ಚುನಾವಣೆಗಳಿಂದ ಉಲ್ಬಣಗೊಂಡ ನಿರ್ವಹಣಾ ಸಮಸ್ಯೆಗಳಿಂದಾಗಿ ಪಂದ್ಯಾವಳಿಯನ್ನು ತವರಿನ ಮತ್ತು ಹೊರ ಮೈದಾನದ ಮಾದರಿಯಲ್ಲಿ ನಡೆಸುವ ಸವಾಲನ್ನು ಎದುರಿಸುತ್ತಿದೆ.

ಆದಾಗ್ಯೂ, ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಅರುಣ್ ಧುಮಾಲ್ ಅವರು 2019ರ ಸಾರ್ವತ್ರಿಕ ಚುನಾವಣೆಯಂತೆ ಯಾವುದೇ ತೊಂದರೆಯಿಲ್ಲದೆ ಇಡೀ ಪಂದ್ಯಾವಳಿಯನ್ನು ನಡೆಸುವ ವಿಶ್ವಾಸ ಹೊಂದಿದ್ದಾರೆ.

ಇತ್ತೀಚೆಗೆ, ಅರುಣ್ ಧುಮಾಲ್ ಅವರು ಮೇ 25 ಅಥವಾ 26ರೊಳಗೆ ಐಪಿಎಲ್ ಪಂದ್ಯಾವಳಿಯನ್ನು ಮುಗಿಸಲು ಯೋಜಿಸುತ್ತಿರುವುದಾಗಿ ಎಂದು ಬಹಿರಂಗಪಡಿಸಿದರು. ಹೀಗಾಗಿ ಡಬಲ್-ಹೆಡರ್‌ ಪಂದ್ಯಗಳನ್ನು ಹೆಚ್ಚಿಸಬೇಕಾಗುತ್ತದೆ ಎಂದರು.

IPL 2024 To Have More Double-header Matches Says IPL Chairman Arun Dhumal

"ಈ ಬಾರಿಯ ಸವಾಲು ಏನೆಂದರೆ, ನಾವು ಜೂನ್ ಮೊದಲ ವಾರದಲ್ಲಿ ಟಿ20 ವಿಶ್ವಕಪ್‌ನೊಂದಿಗೆ ಪ್ರಾರಂಭಿಸುತ್ತಿದ್ದೇವೆ ಮತ್ತು ಭಾರತ ತಂಡವು ಯುಎಸ್‌ಗೆ ಪ್ರಯಾಣಿಸಬೇಕಾಗಿರುವುದರಿಂದ ಮೇ 25 ಅಥವಾ ಮೇ 26ರೊಳಗೆ ಪಂದ್ಯಾವಳಿಯನ್ನು ಕೊನೆಗೊಳಿಸಲು ನಾವು ಯೋಜಿಸಿದ್ದೇವೆ. ಆಟದ ಸ್ಥಳಗಳು ಸಂಪೂರ್ಣವಾಗಿ ವಿಭಿನ್ನವಾಗಿರಲಿವೆ," ಎಂದು ಅರುಣ್ ಧುಮಾಲ್ ಹೇಳಿರುವುದನ್ನು ಸ್ಪೋರ್ಟ್‌ಸ್ಟಾರ್ ವರದಿ ಮಾಡಿದೆ.

"ದೇಶದ ಸಾರ್ವತ್ರಿಕ ಚುನಾವಣೆ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು, ನಾವು ಸ್ವಲ್ಪ ಅಂತರವನ್ನು ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಬಹುದು. ನಾವು ಡಬಲ್-ಹೆಡರ್‌ ಪಂದ್ಯಗಳನ್ನು ಹೆಚ್ಚಿಸಬೇಕಾಗಬಹುದು. ಹೀಗಾಗಿ ಚುನಾವಣೆಗಳು ಮುಗಿದ ನಂತರ ನಾವು ಉತ್ತಮ ಸ್ಪಷ್ಟತೆಯನ್ನು ನೀಡಲು ಸಾಧ್ಯವಾಗುತ್ತದೆ," ಎಂದು ಹೇಳಿದರು.

ಈ ಬಾರಿ ಹೆಚ್ಚು ಡಬಲ್-ಹೆಡರ್‌ ಪಂದ್ಯಗಳಿಂದಾಗಿ ಪಂದ್ಯಾವಳಿಯ ಸಮಯದಲ್ಲಿ ಆಟಗಾರರ ಬಳಲಿಕೆಯ ಬಗ್ಗೆ ಮಾತನಾಡಿದ ಅವರು, ಆಟಗಾರರ ವಿಶ್ರಾಂತಿಯನ್ನು ಗಮನದಲ್ಲಿಟ್ಟುಕೊಂಡು ವೇಳಾಪಟ್ಟಿಯನ್ನು ರಚಿಸಲಾಗುವುದು ಎಂದು ಅರುಣ್ ಧುಮಾಲ್ ಖಚಿತಪಡಿಸಿದರು.

"ನಾವು ಐಪಿಎಲ್‌ನಲ್ಲಿ ಹೆಚ್ಚಿನ ಡಬಲ್-ಹೆಡರ್‌ಗಳನ್ನು ಹೊಂದಿದ್ದೇವೆ. ಆದ್ದರಿಂದ ಅವರು ಉತ್ತಮ ವೇಳಾಪಟ್ಟಿಯೊಂದಿಗೆ ಆಡುವ ವಿಶ್ವಾಸ ಹೊಂದಿದ್ದೇವೆ. ಅಲ್ಲಿ ಅವರು ಉತ್ತಮ ವಿಶ್ರಾಂತಿ ಪಡೆಯುತ್ತಾರೆ ಮತ್ತು ದೇಶದ ವಿವಿಧ ಸ್ಥಳಗಳಲ್ಲಿ ಅವರ ಆಟಗಳಿಗೆ ಸಾಕಷ್ಟು ಸಮಯವನ್ನು ಹೊಂದಿದ್ದಾರೆ," ಎಂದು ಅರುಣ್ ಧುಮಾಲ್ ತಿಳಿಸಿದರು.

IPL 2024 To Have More Double-header Matches Says IPL Chairman Arun Dhumal

ಆರಂಭಿಕ ಪಂದ್ಯದಲ್ಲಿ ಸಿಎಸ್‌ಕೆ vs ಆರ್‌ಸಿಬಿ ಕಾಳಗ

ಗಮನಾರ್ಹವಾಗಿ, 17ನೇ ಆವೃತ್ತಿಯ ಐಪಿಎಲ್‌ಗೆ ಮಾರ್ಚ್ 22ರ ಶುಕ್ರವಾರದಂದು ಚಾಲನೆ ಸಿಗಲಿದ್ದು, ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಕಾಳಗ ನಡೆಸಲು ಸಜ್ಜಾಗಿವೆ.

ಮೊದಲ ಹಂತದ ವೇಳಾಪಟ್ಟಿಯಲ್ಲಿ ಗುಜರಾತ್ ಟೈಟನ್ಸ್, ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಅತಿ ಹೆಚ್ಚು ಅಂದರೆ, ಐದು ಪಂದ್ಯಗಳನ್ನು ಆಡಲಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ಕನಿಷ್ಠ ಮೂರು ಪಂದ್ಯಗಳನ್ನು ಆಡಲಿದೆ. ಉಳಿದ ಆರು ತಂಡಗಳು ಮೊದಲ ಹಂತದಲ್ಲಿ ತಲಾ ನಾಲ್ಕು ಪಂದ್ಯಗಳನ್ನು ಆಡಲಿವೆ.

Story first published: Sunday, March 10, 2024, 8:00 [IST]
Other articles published on Mar 10, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+