For Quick Alerts
ALLOW NOTIFICATIONS  
For Daily Alerts
 

IPL 2024: ಸಿಎಸ್‌ಕೆ ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ಮುನ್ನ ಆರ್‌ಸಿಬಿಗೆ 'ಡಬಲ್' ಆಘಾತ!

2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿ ಮುಕ್ತಾಯದ ಹಂತಕ್ಕೆ ಬಂದಿದ್ದು, ಲೀಗ್ ಹಂತದ ಕೊನೆಯ ಪಂದ್ಯಗಳು ನಡೆಯುತ್ತಿವೆ. ಆದರೂ, ಅಂಕಪಟ್ಟಿ ಮತ್ತು ಪ್ಲೇಆಫ್ ರೇಸ್‌ನ ಗೊಂದಲಗಳು ಭಾರೀ ಕುತೂಹಲ ಮೂಡಿಸಿವೆ.

ಇನ್ನು ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತನ್ನ ಕೊನೆಯ 5 ಪಂದ್ಯಗಳನ್ನು ಸತತವಾಗಿ ಗೆಲ್ಲುವ ಮೂಲಕ ಪ್ಲೇಆಫ್ ರೇಸ್‌ನಲ್ಲಿರುವ ತಂಡಗಳಲ್ಲಿ ಒಂದಾಗಿದೆ. ಐಪಿಎಲ್ 2024ರಲ್ಲಿ ಈವರೆಗೆ ಆಡಿದ 13 ಪಂದ್ಯಗಳಲ್ಲಿ 6 ಗೆಲುವು ಮತ್ತು 7 ಸೋಲು ಕಂಡಿದ್ದು, 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

IPL 2024 Two England Players Quit RCB Squad Ahead of Crucial Match Against CSK

ಶನಿವಾರ, ಮೇ 18ರಂದು ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆರ್‌ಸಿಬಿ ಸೆಣಸಾಡಲಿದೆ. ಇಲ್ಲಿ ಗೆದ್ದ ತಂಡ ಪ್ಲೇಆಫ್‌ನಲ್ಲಿ ತಮ್ಮ ಸ್ಥಾನ ಖಚಿತಪಡಿಸಿಕೊಳ್ಳುತ್ತದೆ. ಆದರೆ, ಈ ಪಂದ್ಯಕ್ಕೂ ಆರ್‌ಸಿಬಿ ತಂಡ ಭಾರೀ ಹಿನ್ನಡೆ ಅನುಭವಿಸಿದೆ.

ಹೌದು. ಇಂಗ್ಲೆಂಡ್ ಕ್ರಿಕೆಟಿಗರು 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಪ್ಲೇಆಫ್ ಪಂದ್ಯಗಳಿಗೆ ಮುನ್ನ ಪ್ರಸಕ್ತ ಪಂದ್ಯಾವಳಿಗೆ ವಿದಾಯ ಹೇಳಲು ಪ್ರಾರಂಭಿಸಿದ್ದಾರೆ.

ಇಂಗ್ಲೆಂಡ್ ತಂಡ ಮೇ 22ರಿಂದ 4 ಪಂದ್ಯಗಳ ಟಿ20 ಸರಣಿಯಲ್ಲಿ ಪಾಕಿಸ್ತಾನ ವಿರುದ್ಧ ಸೆಣಸಾಡಲು ಸಜ್ಜಾಗಿದೆ. ಮುಂದಿನ ತಿಂಗಳು ಯುಎಸ್‌ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ತಯಾರಾಗಲು ಆಂಗ್ಲ ಕ್ರಿಕೆಟಿಗರು ಐಪಿಎಲ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

IPL 2024 Two England Players Quit RCB Squad Ahead of Crucial Match Against CSK

ಜೋಸ್ ಬಟ್ಲರ್ ಈಗಾಗಲೇ ರಾಜಸ್ಥಾನ್ ರಾಯಲ್ಸ್ ತಂಡವನ್ನು ತೊರೆದಿದ್ದಾರೆ ಮತ್ತು ಈ ಬೆಳವಣಿಗೆ 2008ರ ಚಾಂಪಿಯನ್ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ.

ಜೋಸ್ ಬಟ್ಲರ್ 11 ಪಂದ್ಯಗಳಿಂದ 39.88ರ ಸರಾಸರಿ ಮತ್ತು 140.78ರ ಸ್ಟ್ರೈಕ್ ರೇಟ್‌ನಲ್ಲಿ 2 ಶತಕಗಳೊಂದಿಗೆ 359 ರನ್ ಗಳಿಸಿ ರಾಜಸ್ಥಾನ್ ತಂಡಕ್ಕೆ ಅದ್ಭುತ ಫಾರ್ಮ್‌ನಲ್ಲಿದ್ದರು. ಅವರ ಒಂದು ಶತಕವು ರಾಜಸ್ಥಾನ್ ರಾಯಲ್ಸ್ ಐಪಿಎಲ್ ಇತಿಹಾಸದಲ್ಲಿ ಜಂಟಿ ಅತ್ಯಧಿಕ ಯಶಸ್ವಿ ರನ್-ಚೇಸ್ ಮಾಡಲು ಸಹಾಯ ಮಾಡಿತು.

ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಇನ್ನೂ ಪ್ಲೇಆಫ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿಲ್ಲ. ಆದರೆ ತಮ್ಮ ಮೊದಲ 9 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದ ನಂತರ, ಸತತ 3-ಪಂದ್ಯಗಳ ಸೋಲಿನ ಸರಣಿಯಲ್ಲಿರುವ ಕಾರಣ ಪ್ಲೇಆಫ್ ಪಡೆಯುವುದು ಪಕ್ಕಾ ಆಗಿದೆ.

IPL 2024 Two England Players Quit RCB Squad Ahead of Crucial Match Against CSK

ಆರ್‌ಸಿಬಿ ತೊರೆದ ವಿಲ್ ಜ್ಯಾಕ್ಸ್, ರೀಸ್ ಟೋಪ್ಲೆ

ಪ್ಲೇಆಫ್ ರೇಸ್‌ನಲ್ಲಿರುವ ತಂಡಗಳಲ್ಲಿ ಆರ್‌ಸಿಬಿ ಕೂಡ ಒಂದಾಗಿದ್ದು, ಇಬ್ಬರು ಇಂಗ್ಲೆಂಡ್ ಆಟಗಾರರು ಆರ್‌ಸಿಬಿ ತಂಡವನ್ನು ತೊರೆದು ತವರಿಗೆ ಮರಳಿದ್ದಾರೆ.

ಮೇ 18 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರುತುರಾಜ್ ಗಾಯಕ್ವಾಡ್ ನಾಯಕತ್ವದ ಸಿಎಸ್‌ಕೆ ವಿರುದ್ಧದ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಸ್ಫೋಟಕ ಬ್ಯಾಟರ್ ವಿಲ್ ಜ್ಯಾಕ್ಸ್ ಮತ್ತು ವೇಗಿ ರೀಸ್ ಟೋಪ್ಲೆ ಅವರ ಸೇವೆಯನ್ನು ಆರ್‌ಸಿಬಿ ಕಳೆದುಕೊಳ್ಳಲಿದೆ.

ಐಪಿಎಲ್ 2024ರ ಮೊದಲಾರ್ಧದಲ್ಲಿ ಅಂಕಪಟ್ಟಿಯ ಕೆಳಭಾಗದಲ್ಲಿ ಸೊರಗಿದ್ದ ಆರ್‌ಸಿಬಿ ಸತತವಾಗಿ 5 ಪಂದ್ಯಗಳನ್ನು ಗೆದ್ದು ತಮ್ಮ ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಇನ್ನು ಲಿಯಾಮ್ ಲಿವಿಂಗ್‌ಸ್ಟೋನ್ ಸಹ ಭಾರತವನ್ನು ತೊರೆದಿದ್ದಾರೆ, ಆದರೂ ಪಂಜಾಬ್ ಕಿಂಗ್ಸ್ ತಂಡ ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿರುವುದರಿಂದ ದೊಡ್ಡ ವ್ಯತ್ಯಾಸವಾಗುವುದಿಲ್ಲ. ಟಿ20 ವಿಶ್ವಕಪ್‌ಗೆ ಮುನ್ನ ಮೊಣಕಾಲು ಚಿಕಿತ್ಸೆ ಪಡೆಯಲು ಬೇಗನೆ ತೆರಳಿದ್ದಾರೆ.

Story first published: Tuesday, May 14, 2024, 6:35 [IST]
Other articles published on May 14, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+