IPL 2024: RCB vs CSK ಪಂದ್ಯದ ಮಧ್ಯೆ ಹೃದಯಸ್ಪರ್ಶಿ ಕ್ಷಣ ಹಂಚಿಕೊಂಡ ಕೊಹ್ಲಿ-ಧೋನಿ
ಶುಕ್ರವಾರ, ಮಾರ್ಚ್ 22ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ 2024ರ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾದವು.
ಇದೇ ವೇಳೆ ಎಂಎಸ್ ಧೋನಿ ನಂತರ ಸಿಎಸ್‌ಕೆ ತಂಡದ ಹೊಸ ನಾಯಕರಾಗಿ ರುತುರಾಜ್ ಗಾಯಕ್ವಾಡ್ ನೇಮಕ ಮತ್ತು ಅವರ ನಾಯಕತ್ವದಲ್ಲಿ ತಂಡದ ಪ್ರದರ್ಶನದ ಸುತ್ತಲಿನ ನಿರೀಕ್ಷೆಯ ಸುತ್ತ ಕೇಂದ್ರೀಕೃತವಾಗಿದೆ.

ಆದಾಗ್ಯೂ, ಆರಂಭಿಕ ಪಂದ್ಯ ಶುರುವಾದ ಕೇವಲ ಮೂವತ್ತು ನಿಮಿಷಗಳ ನಂತರ, ಸಾಮಾಜಿಕ ಮಾಧ್ಯಮದಲ್ಲಿ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಅವರನ್ನು ಒಳಗೊಂಡ ವೈರಲ್ ಕ್ಷಣವು ಗಮನ ಸೆಳೆಯಿತು.
ಬರೋಬ್ಬರಿ 10 ತಿಂಗಳ ಬಳಿಕ ಇಬ್ಬರು ದಿಗ್ಗಜ ಕ್ರಿಕೆಟಿಗರು ಮುಖಾಮುಖಿಯಾದರು. ಸಿಎಸ್‌ಕೆ ಮಾಜಿ ನಾಯಕ ಎಂಎಸ್ ಧೋನಿ ಅವರ ಹೆಗಲ ಮೇಲೆ ಕೈ ಹಾಕಿದ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ನಗುತ್ತಾ ಉಭಯ ಕುಶಲೋಪರಿ ನಡೆಸಿದರು. ಪಂದ್ಯಕ್ಕೂ ಒಂದು ದಿನದ ಮೊದಲು ಸಿಎಸ್‌ಕೆ ನಾಯಕತ್ವದಿಂದ ಕೆಳಗಿಳಿದ ನಂತರ, ವಿರಾಟ್ ಕೊಹ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ್ದರು.
ಶುಕ್ರವಾರದ ಪಂದ್ಯದಲ್ಲಿ ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 12,000 ಟಿ20 ರನ್ ಗಳಿಸಿದ ಮೊದಲ ಭಾರತೀಯ ಹಾಗೂ ವಿಶ್ವದ ಆರನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಈ ಸಾಧನೆಯೊಂದಿಗೆ ವಿರಾಟ್ ಕೊಹ್ಲಿ ಅವರು ಟಿ20 ದಿಗ್ಗಜರಾದ ಕ್ರಿಸ್ ಗೇಲ್, ಶೋಯೆಬ್ ಮಲಿಕ್, ಕೀರಾನ್ ಪೊಲಾರ್ಡ್, ಅಲೆಕ್ಸ್ ಹೇಲ್ಸ್ ಮತ್ತು ಡೇವಿಡ್ ವಾರ್ನರ್ ನಂತರ 12,000 ರನ್‌ಗಳ ಮೈಲಿಗಲ್ಲನ್ನು ತಲುಪಿದ ಆರನೇ ಆಟಗಾರರಾದರು.
ಇನ್ನಿಂಗ್ಸ್‌ನ ಏಳನೇ ಓವರ್‌ನಲ್ಲಿ ರವೀಂದ್ರ ಜಡೇಜಾ ಅವರ ಫುಲ್ ಬಾಲ್ ಅನ್ನು ಲೆಗ್ ಸೈಡ್‌ನಲ್ಲಿ ಸ್ಕ್ವೇರ್‌ನ ಹಿಂಭಾಗದಲ್ಲಿ ಸಿಂಗಲ್‌ಗೆ ಸ್ವೈಪ್ ಮಾಡಿದ ಬಳಿಕ ವಿರಾಟ್ ಕೊಹ್ಲಿ ಬೃಹತ್ ಸಾಧನೆ ತಲುಪಿದರು.
ಇದೇ ವೇಳೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತೊಂದು ಸಾಧನೆ ಮಾಡಿದರು.
ಐಪಿಎಲ್ ಇತಿಹಾಸದಲ್ಲಿ ಪ್ರತ್ಯೇಕ ಎರಡು ತಂಡಗಳ ವಿರುದ್ಧ 1000 ರನ್ ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.
ಕಳೆದ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 1 ಸಾವಿರ ರನ್ ಪೂರ್ಣಗೊಳಿಸಿದ್ದ ವಿರಾಟ್ ಕೊಹ್ಲಿ, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ತಮ್ಮ ಇನ್ನಿಂಗ್ಸ್‌ನಲ್ಲಿ 15ನೇ ರನ್ ಗಳಿಸಿದ ನಂತರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸಾವಿರ ರನ್‌ಗಳ ಗಡಿ ತಲುಪಿದರು.
ಎರಡು ತಂಡಗಳ ವಿರುದ್ಧ 1000 ರನ್ ಸಾಧನೆ ಮಾಡಿದ ಮೊದಲ ಆಟಗಾರ ವಿರಾಟ್ ಕೊಹ್ಲಿ ಅಲ್ಲ. ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್ ಡೇವಿಡ್ ವಾರ್ನರ್ ನಂತರ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಎರಡು ಪ್ರತ್ಯೇಕ ತಂಡಗಳ ವಿರುದ್ಧ 1000 ರನ್ ಗಳಿಸಿದ ಏಕೈಕ ಬ್ಯಾಟರ್ ಎನಿಸಿದರು.
ವಿರಾಟ್ ಕೊಹ್ಲಿ ತಮ್ಮ 12,000 ರನ್‌ಗಳಲ್ಲಿ ಅವರು ಆರ್‌ಸಿಬಿ ತಂಡಕ್ಕಾಗಿ ಐಪಿಎಲ್ ಮತ್ತು ಸದ್ಯ ನಿಷ್ಕ್ರಿಯಗೊಂಡಿರುವ ಚಾಂಪಿಯನ್ಸ್ ಲೀಗ್, ದೇಶೀಯ ಟಿ20 ಕ್ರಿಕೆಟ್‌ನಲ್ಲಿ ದೆಹಲಿಗಾಗಿ ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತಕ್ಕಾಗಿ ಗಳಿಸಿದರು.
426 ಪಂದ್ಯಗಳಲ್ಲಿ 11,156 ರನ್ ಗಳಿಸಿರುವ ರೋಹಿತ್ ಶರ್ಮಾ ನಂತರದ ಭಾರತೀಯರಾಗಿದ್ದು, 329 ಪಂದ್ಯಗಳಲ್ಲಿ 9645 ರನ್ ಗಳಿಸಿರುವ ಶಿಖರ್ ಧವನ್ ಮೂರನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications