For Quick Alerts
ALLOW NOTIFICATIONS  
For Daily Alerts
 

IPL 2024: RCB ವಿರುದ್ಧ ಈ ಒಂದು ದಾಖಲೆಯನ್ನು ಯಾರು ಬೇಗ ನಿರ್ಮಿಸುತ್ತಾರೆ?

17ನೇ ಆವೃತ್ತಿಯ ಐಪಿಎಲ್‌ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ದೇಶವ್ಯಾಪಿ ಆರ್‌ಸಿಬಿ ಗುಂಗು ಆರಂಭವಾಗಲಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ತಂಡವನ್ನು ಬೆಂಬಿಲಿಸಲು ಸಜ್ಜಾಗಿದ್ದಾರೆ. ಈ ಮಧ್ಯೆ ಆ ಒಂದು ದಾಖಲೆಯನ್ನು ಯಾರು ಬೇಗ ನಿರ್ಮಿಸುತ್ತಾರೆ ಎಂಬ ಚರ್ಚೆ ಆರಂಭವಾಗಿದೆ. ಹಾಗಿದ್ದರೆ ಆ ದಾಖಲೆ ಯಾದು?, ಯಾರ ಯಾರ ನಡುವೆ ಪೈಪೋಟಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಮಾರ್ಚ್‌ 22ರಿಂದ ಐಪಿಎಲ್ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಕಾದಾಟ ನಡೆಯಲಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಹಾಲಿ ಚಾಂಪಿಯನ್‌ ಎಂಬ ಹಣೆ ಪಟ್ಟೆಯಿಂದ ಕಣಕ್ಕೆ ಇಳಿಯಲಿದೆ. ಆರ್‌ಸಿಬಿ ಈ ಬಾರಿ ಚೊಚ್ಚಲ ಪ್ರಶಸ್ತಿಯ ಕನಸಿನಲ್ಲಿ ಅಖಾಡಕ್ಕೆ ಇಳಿಯಲಿದೆ. ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ವಿಶೇಷ ದಾಖಲೆಯನ್ನು ನಿರ್ಮಿಸುವ ಹೊಸ್ತಿಲಲ್ಲಿ ಇದ್ದಾರೆ. ಇವರಿಗೆ ಇನ್ನೋಬ್ಬ ಸ್ಟಾರ್ ಪ್ಲೇಯರ್‌ ಪೈಪೋಟಿ ನೀಡಲು ಸನ್ನದ್ಧರಾಗಿದ್ದಾರೆ.

IPL 2024 Who will set this record first

ಅಗ್ರ ಸ್ಥಾನಕ್ಕೆ ಫೈಟ್

ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾ RCB ವಿರುದ್ಧ ಹೆಚ್ಚು ರನ್ ಗಳಿಸುವ ವಿಷಯದಲ್ಲಿ ಮೊದಲ ಸ್ಥಾನವನ್ನು ತಲುಪುವ ಅವಕಾಶವನ್ನು ಹೊಂದಿದ್ದಾರೆ. ಆರ್‌ಸಿಬಿ ವಿರುದ್ಧ ಗರಿಷ್ಠ ರನ್ ಬಾರಿಸಿದ ಆಟಗಾರ ಎಂಬ ಹಣೆ ಪಟ್ಟಿಯನ್ನು ಸದ್ಯ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಹೊಂದಿದ್ದಾರೆ. ಆರ್‌ಸಿಬಿ ವಿರುದ್ಧ ವಾರ್ನರ್ 861 ರನ್ ಗಳಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಎರಡನೇ ಸ್ಥಾನದಲ್ಲಿದ್ದಾರೆ. ಆರ್‌ಸಿಬಿ ವಿರುದ್ಧ ಇಲ್ಲಿಯವರೆಗೆ ಮಾಹಿ 839 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ RCB ವಿರುದ್ಧ 793 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಆರ್‌ಸಿಬಿ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ವಿಷಯದಲ್ಲಿ ಮಹೇಂದ್ರ ಸಿಂಗ್ ಧೋನಿ ಡೇವಿಡ್ ವಾರ್ನರ್ ಅವರಿಗಿಂತ 22 ರನ್ ಹಿಂದಿದ್ದಾರೆ. ಮಾರ್ಚ್ 22 ರಂದು RCB ವಿರುದ್ಧದ ಪಂದ್ಯದಲ್ಲಿ ಅವರು 23 ರನ್ ಗಳಿಸಿದರೆ, ಅವರು ಡೇವಿಡ್ ವಾರ್ನರ್ ಅವರನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನವನ್ನು ಅಲಂಕರಿಸುತ್ತಾರೆ. ರೋಹಿತ್ ಶರ್ಮಾ ಕೂಡ ಮಹೇಂದ್ರ ಸಿಂಗ್ ಧೋನಿಗಿಂತ ತುಂಬಾ ಏನು ಹಿಂದೆ ಉಳಿದಿಲ್ಲ ಮತ್ತು ಅವರು ಧೋನಿಗಿಂತ ಕೇವಲ 46 ರನ್ ಮತ್ತು ಡೇವಿಡ್ ವಾರ್ನರ್ ಅವರಿಗಿಂತ 68 ರನ್ ಹಿಂದಿದ್ದಾರೆ.

IPL 2024 Who will set this record first

ಐಪಿಎಲ್‌ನಲ್ಲಿ ಧೋನಿ ದಾಖಲೆ

ಮಹೇಂದ್ರ ಸಿಂಗ್ ಧೋನಿ 2008 ರಿಂದ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಇದುವರೆಗೆ ಅವರು ಐಪಿಎಲ್‌ನ 250 ಪಂದ್ಯಗಳನ್ನು ಆಡಿದ್ದು, 135.92 ಸ್ಟ್ರೈಕ್ ರೇಟ್‌ನಲ್ಲಿ 3739 ರನ್ ಗಳಿಸಿದ್ದಾರೆ. ಧೋನಿ ಐಪಿಎಲ್‌ನಲ್ಲಿ 24 ಅರ್ಧಶತಕಗಳನ್ನು ಹೊಂದಿದ್ದಾರೆ.

ರೋಹಿತ್ ಸಾಧನೆ

ರೋಹಿತ್ ಶರ್ಮಾ 243 ಟಿ20 ಪಂದ್ಯಗಳಲ್ಲಿ 29.58ರ ಸರಾಸರಿಯಲ್ಲಿ 6211 ರನ್ ಸಿಡಿಸಿದ್ದಾರೆ. ಈ ವೇಳೆ ರೋಹಿತ್ ಶರ್ಮಾ 1 ಶತಕ ಹಾಗೂ 42 ಅರ್ಧಶತಕ ಬಾರಿಸಿದ್ದಾರೆ.

Story first published: Tuesday, March 19, 2024, 14:54 [IST]
Other articles published on Mar 19, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+