Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: CSK ತಂಡಕ್ಕೆ ಮಾರಕವಾಗುತ್ತಾರಾ ಧೋನಿ ಸ್ನೇಹಿತ RCB ಪ್ಲೇಯರ್‌?

17ನೇ ಆವೃತ್ತಿ ಐಪಿಎಲ್‌ಗೆ ಇಂದು ಚಾಲನೆ ಸಿಗಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಚೆನ್ನೈ ತಂಡಗಳು ಕಾದಾಟ ನಡೆಸಲಿವೆ. ಗೆಲುವಿನೊಂದಿಗೆ ಟೂರ್ನಿಯನ್ನು ಆರಂಭಿಸುವ ಕನಸು ಉಭಯ ತಂಡಗಳದ್ದಾಗಿದೆ. ತವರಿನಲ್ಲಿ ಚೆನ್ನೈ ತಂಡದ ದಾಖಲೆ ಅಮೋಘವಾಗಿದೆ. ಆದರೆ ಆರ್‌ಸಿಬಿ ತಂಡದಲ್ಲಿರುವ ಎಂಎಸ್‌ ಧೋನಿಯ ಸ್ನೇಹಿತ್ ಚೆನ್ನೈ ತಂಡಕ್ಕೆ ಮಾರಕವಾಗಬಹುದು.

ಮಹೇಂದ್ರ ಸಿಂಗ್ ಧೋನಿ ಚೆನ್ನೈ ತಂಡದ ಸ್ಟಾರ್‌ ನಾಯಕ. ಇವರ ಗರಡಿಯಲ್ಲಿ ಅದೆಷ್ಟೋ ಸ್ಟಾರ್ ಆಟಗಾರರು ಬೆಳೆದಿದ್ದಾರೆ. ಅನುಭವಿಗಳು ಇವರ ಮುಂದಾಳತ್ವದಲ್ಲಿ ಆಡಿ ತಮ್ಮ ಅನುಭವವನ್ನು ಸುಧಾರಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅಂತಾರಾಷ್ಟ್ರೀಯ ಆಟಗಾರರು ಇದ್ದಾರೆ. ಈ ಸಾಲಿನಲ್ಲಿ ಕಾಣಿಸಿಕೊಳ್ಳುವ ಆಟಗಾರ ಆರ್‌ಸಿಬಿ ತಂಡದ ನಾಯಕ ಫಾಫ್‌ ಡುಪ್ಲೇಸಿಸ್‌.

IPL 2024 Will Dhoni s friend RCB player be deadly for CSK team

ಚೆನ್ನೈ ಸೂಪರ್‌ ಕಿಂಗ್ಸ್‌ ಡ್ರೆಸ್ಸಿಂಗ್‌ ರೂಮ್‌ ಸದಸ್ಯ ಕಳೆದ ಕೆಲವು ವರ್ಷಗಳ ಹಿಂದೆ ಚೆನ್ನೈ ತಂಡವನ್ನು ತೊರೆದು ಆರ್‌ಸಿಬಿ ಕ್ಯಾಂಪ್‌ ಸೇರಿದರು. ಅಲ್ಲದೆ ಫಾಫ್‌ ಡುಪ್ಲೇಸಿಸ್ ಆರ್‌ಸಿಬಿ ತಂಡದ ಚುಕ್ಕಾಣಿಯನ್ನು ಹಿಡಿದಿದ್ದಾರೆ. ಇವರ ಮುಂದಾಳತ್ವದಲ್ಲಿ ತಂಡ ಚೊಚ್ಚಲ ಪ್ರಶಸ್ತಿಯ ಕನಸು ಕಾಣುತ್ತಿದೆ. ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕನ ಮಿತ್ರ ಫಾಫ್‌, ಆರ್‌ಸಿಬಿ ಗೆಲುವಿನಲ್ಲಿ ಮಿಂಚುತ್ತಾರಾ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಹೇಗಿದೆ ಚೆನ್ನೈನಲ್ಲಿ ಫಾಫ್ ದಾಖಲೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಚೆನ್ನೈನಲ್ಲಿ ಹಲವು ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಸಿಎಸ್‌ಕೆ ತಂಡದ ಪರವಾಗಿಯೂ ಇವರು ಇನ್ನಿಂಗ್ಸ್ ಆರಂಭಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಇವರ ದಾಖಲೆ ಈ ಅಂಗಳದಲ್ಲಿ ಮನಮೋಹಕ. RCB ಮೊದಲ ಬಾರಿಗೆ ಪ್ರಶಸ್ತಿಯನ್ನು ಗೆಲ್ಲಲು ಪ್ರಯತ್ನಿಸುತ್ತದೆ ಮತ್ತು ಸೀಸನ್ ಅನ್ನು ಗೆಲುವಿನೊಂದಿಗೆ ಪ್ರಾರಂಭಿಸಲು ಬಯಸುತ್ತದೆ.

IPL 2024 Will Dhoni s friend RCB player be deadly for CSK team

ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಫಾಫ್ ಡು ಪ್ಲೆಸಿಸ್ 19 ಪಂದ್ಯಗಳನ್ನು ಆಡಿದ್ದು 36.87 ರ ಸರಾಸರಿಯಲ್ಲಿ 553 ರನ್ ಗಳಿಸಿದ್ದಾರೆ, ಈ ಸಮಯದಲ್ಲಿ 4 ಅರ್ಧ ಶತಕಗಳನ್ನು ಸಹ ಸಿಡಿಸಿದ್ದಾರೆ. ಡು ಪ್ಲೆಸಿಸ್ ಅವರ ಸ್ಟ್ರೈಕ್ ರೇಟ್ ಚೆಪಾಕ್ ಸ್ಟೇಡಿಯಂನಲ್ಲಿ 119.44 ರಲ್ಲಿ ಆಗಿದೆ. ಫಾಫ್ CSK ವಿರುದ್ಧ 3 ಪಂದ್ಯಗಳನ್ನು ಆಡಿದ್ದು 36 ರ ಸರಾಸರಿಯಲ್ಲಿ 108 ರನ್ ಗಳಿಸಿದ್ದಾರೆ.

ಚೆನ್ನೈ ಪರ ಆಡಿದ ಅನುಭವ ಹೊಂದಿರುವ ಪ್ಲೇಯರ್

ಫಾಫ್ ಡು ಪ್ಲೆಸಿಸ್ ಅಲ್ಲದೆ ಇನ್ನೊಬ್ಬ ಸ್ಟಾರ್ ಆಟಗಾರ ಸಹ ಹಳದಿ ಜೆರ್ಸಿ ತೊಟ್ಟು ಮಿಂಚಿದ್ದಾರೆ. ಸದ್ಯ ಬೆಂಗಳೂರು ತಂಡದ ಭಾಗವಾಗಿರುವ ಕರ್ಣ್ ಶರ್ಮಾ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದಾರೆ, ಆದ್ದರಿಂದ ಅವರು ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಡಿದ ಅನುಭವವನ್ನೂ ಹೊಂದಿದ್ದಾರೆ. ಸಿಎಸ್‌ಕೆ ವಿರುದ್ಧದ 6 ಪಂದ್ಯಗಳಲ್ಲಿ 50.33 ಸರಾಸರಿಯಲ್ಲಿ 3 ವಿಕೆಟ್‌ ಪಡೆದಿದ್ದಾರೆ.

ಇನ್ನು ಚೆನ್ನೈ ತಂಡದ ಪರ ರಣಜಿ ಕ್ರಿಕೆಟ್‌ ಆಡುವ ದಿನೇಶ್ ಕಾರ್ತಿಕ್‌ಗೂ ಚಿದಂಬರಂ ಅಂಗಳದಲ್ಲಿ ಆಡಿದ ಅಪಾರ ಅನುಭವಿದೆ. ಹೀಗಾಗಿ ಇವರು ಸಹ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ. ಇವರು ಋತುರಾಜ್ ಗಾಯತ್ವಾಡ್ ಅವರ ತಂತ್ರವನ್ನು ಅರಿತು ಆಡಿದಲ್ಲಿ ತವರಿನಲ್ಲಿ ಅಬ್ಬರಿಸಿ, ಆರ್‌ಸಿಬಿ ತಂಡಕ್ಕೆ ನೆರವಾಗಬಲ್ಲರು.

Story first published: Friday, March 22, 2024, 12:30 [IST]
Other articles published on Mar 22, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+