IPL 2024: ಆರ್‌ಸಿಬಿಗೆ ಎಂಟ್ರಿ ನೀಡಲಿದ್ದಾರೆ ಯುವ ಮ್ಯಾಚ್ ಫಿನಿಶರ್?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಶತಾಯ ಗತಾಯ ಐಪಿಎಲ್ ಗೆಲ್ಲಲು ಪ್ಲ್ಯಾನ್ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಸಮತೋಲಿತ ತಂಡವನ್ನು ಕಟ್ಟಲು ಸಜ್ಜಾಗಿದೆ. ಆರ್‌ಸಿಬಿ ತಂಡದಲ್ಲಿ ಈಗ ಒಂದು ಸ್ಲಾಟ್ ಖಾಲಿ ಆಗುವ ಸಾಧ್ಯತೆ ಹೆಚ್ಚಿದೆ. ಈ ಸ್ಲಾಟ್ ಫಿಲ್ ಮಾಡಲು ಆರ್‌ಸಿಬಿ ಭರ್ಜರಿ ಪ್ಲ್ಯಾನ್ ಹಾಕಿಕೊಂಡಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಬಿಪಿಎಲ್ ಋತುವಿನಲ್ಲಿ ಟಾಮ್ ಕರ್ರಾನ್ ಮೊಣಕಾಲು ಗಾಯಗೊಂಡರು. ಟಾಮ್ ಕರನ್ ಅವರ ಗಾಯವು ತುಂಬಾ ಗಂಭೀರವಾಗಿದೆ ಮತ್ತು ಅವರು ಐಪಿಎಲ್ 17 ನೇ ಋತುವಿನಿಂದ ಹೊರಗುಳಿಯುವುದು ಖಚಿತವೆಂದು ಪರಿಗಣಿಸಲಾಗಿದೆ. ಹೀಗಾಗಿ ಆರ್‌ಸಿಬಿ ಈ ಪ್ಲೇಯರ್‌ಗೆ ಪರ್ಯಾಯ ಆಟಗಾರನ ಹುಡುಕಾಟವನ್ನು ನಡೆಸಿದೆ.

ಆರ್‌ಸಿಬಿ ಟಾಮ್ ಕರನ್ ರೀತಿ ಆಲ್‌ರೌಂಡರ್‌ನನ್ನು ಹುಡುಕು ಯತ್ನದಲ್ಲಿದೆ. ಆದರೆ ಆರ್‌ಸಿಬಿ ತಂಡದ ಚಿಂತೆಯನ್ನು ಕೊಂಚ ಹೆಚ್ಚಿಸಿರುವ ಬೌಲಿಂಗ್ ವಿಭಾಗವನ್ನು ಸರಿದೂಗಿಸಲು ಒಬ್ಬ ಸ್ಟಾರ್ ಪ್ಲೇಯರ್ ಅವಶ್ಯಕತೆ ಇದೆ. ಹೀಗಾಗಿ ಯುವ ಆಟಗಾರನತ್ತ ಆರ್‌ಸಿಬಿ ದೃಷ್ಟಿ ನೆಟ್ಟಿದೆ. ಅಂದಹಾಗೆ ಈ ಪೇಸ್ ಬೌಲರ್ ಒಂದೊಮ್ಮೆ ಆರ್‌ಸಿಬಿ ಜೆರ್ಸಿಯಲ್ಲಿ ಕಂಗೊಳಿಸಿದ್ದೇ ಆದಲ್ಲಿ ಖಂಡಿತವಾಗಿಯೂ ಆರ್‌ಸಿಬಿಯ ಐಪಿಎಲ್ ಕಪ್ ಗೆಲುವಿನ ಕನಸಿಗೆ ರೆಕ್ಕೆ ಬರುತ್ತದೆ.
ಈ ಬಾರಿ ಆರ್‌ಸಿಬಿ ಯುವ ಆಟಗಾರನಿಗೆ ಮಣೆ ಹಾಕುವ ಸಾಧ್ಯತೆ ಇದೆ. ಮುಂಬೈ ಇಂಡಿಯನ್ಸ್ ಮಾಡಿದ ಪ್ಲ್ಯಾನ್‌ನನ್ನೇ ಆರ್‌ಸಿಬಿ ಮಾಡಲು ಚಿಂತನೆ ನಡೆಸಿದೆ. ಮುಂಬೈ ಇಂಡಿಯನ್ಸ್ ಯುವ ಆಟಗಾರರಿಗೆ ಅವಕಾಶ ನೀಡಿ, ಅವರನ್ನೇ ತಂಡದ ಆಸ್ತಿಯನ್ನಾಗಿ ಮಾಡುತ್ತದೆ. ಈ ನಿಟ್ಟಿನಲ್ಲಿಯೇ ಆರ್‌ಸಿಬಿ ದಿಟ್ಟ ಹೆಜ್ಜೆ ಇಟ್ಟಂತೆ ಕಾಣುತ್ತದೆ. ಟಾಮ್ ಕರನ್ ಸ್ಥಾನ ತುಂಬಲು ಆರ್‌ಸಿಬಿ ಈ ಬಾರಿ ವೆಸ್ಟ್ ಇಂಡಿಸ್ ತಂಡದ ಯುವ ವೇಗದ ಬೌಲರ್ ಶಮರ್ ಜೋಸೆಫ್‌ಗೆ ಮಣೆ ಹಾಕುವ ಸಾಧ್ಯತೆ ಇದೆ.

ಟಾಮ್ ಕರನ್ ಬದಲಿಗೆ ಯಾರಿಗೆ ಸ್ಥಾನ?
ಗಬ್ಬಾದಲ್ಲಿ ಆಸ್ಟ್ರೇಲಿಯಾದ ಬ್ಯಾಟಿಂಗ್‌ಗೆ ಪೆಟ್ಟು ನೀಡಿದ್ದ ವೆಸ್ಟ್ ಇಂಡೀಸ್‌ನ ಸ್ಟಾರ್ ವೇಗದ ಬೌಲರ್ ಶಮರ್ ಜೋಸೆಫ್ ಇಂಡಿಯನ್ ಪ್ರೀಮಿಯರ್ ಲೀಗ್‌ನ 17 ನೇ ಸೀಸನ್‌ನಲ್ಲಿ ತಮ್ಮ ಹವಾ ಕ್ರಿಯೇಟ್ ಮಾಡಿದ್ದಾರೆ. ಗಬ್ಬಾದಲ್ಲಿ ಶಮರ್ ಜೋಸೆಫ್ ಅವರ ಪ್ರದರ್ಶನ ನೋಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅವರ ಮೇಲೆ ದೊಡ್ಡ ಬೆಟ್ ಹಾಕಲು ತಯಾರಿ ನಡೆಸಿದೆ. ಆರ್‌ಸಿಬಿ ವೇಗದ ಬೌಲರ್ ಟಾಮ್ ಕರನ್ ಗಾಯಗೊಂಡಿದ್ದು, 17 ನೇ ಋತುವಿನಲ್ಲಿ ಆಡುವುದು ಅವರಿಗೆ ತುಂಬಾ ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಟಾಮ್ ಕರನ್ ಬದಲಿಗೆ ಶಮರ್ ಜೋಸೆಫ್ ಅವರಿಗೆ ಅವಕಾಶ ನೀಡುವ ಎಲ್ಲಾ ಸಾಧ್ಯತೆಗಳಿವೆ.
2024ರ ಮಿನಿ ಹರಾಜಿಗೂ ಮುನ್ನ ಆರ್‌ಸಿಬಿ ಅಚ್ಚರಿಯ ನಿರ್ಧಾರ ಕೈಗೊಂಡು ಅನುಭವಿ ಬೌಲರ್‌ಗಳಾದ ಹೇಜಲ್‌ವುಡ್, ಹಸರಂಗ ಮತ್ತು ಹರ್ಷಲ್ ಪಟೇಲ್ ಅವರನ್ನು ಬಿಡುಗಡೆಗೊಳಿಸಿತ್ತು. ಬೌಲಿಂಗ್ ದಾಳಿಯನ್ನು ಬಲಪಡಿಸುವ ಸವಾಲನ್ನು ಆರ್‌ಸಿಬಿ ಎದುರಿಸುತ್ತಿದೆ. ಮಿನಿ ಹರಾಜಿನಲ್ಲಿ, ಆರ್‌ಸಿಬಿ ಅಲ್ಜಾರಿ ಜೋಸೆಫ್, ಯಶ್ ದಯಾಲ್, ಟಾಮ್ ಕರನ್ ಮತ್ತು ಲಾಕಿ ಫರ್ಗುಸನ್ ಅವರಿಗೆ ಹಣದ ಹೊಳೆಯನ್ನು ಹರಿಸಿ ತಂಡಕ್ಕೆ ಬರಮಾಡಿಕೊಂಡಿತ್ತು.
ಯುವ ಆಟಗಾರ ಪರಿಪೂರ್ಣ ಆಯ್ಕೆ
ಈಗ ಆರ್‌ಸಿಬಿ ಟಾಮ್ ಕರನ್ ಬದಲಿಗೆ ಬೇರೆ ಆಟಗಾರನನ್ನು ಹುಡುಕುವ ಯತ್ನದಲ್ಲಿದೆ. ಅಂತಹ ಪರಿಸ್ಥಿತಿಯಲ್ಲಿ, ತಂಡಕ್ಕೆ ಪ್ರಸ್ತುತ ಶಮರ್ ಜೋಸೆಫ್ ಅವರಿಗಿಂತ ಉತ್ತಮ ಆಯ್ಕೆ ಇಲ್ಲ. ಆರ್‌ಸಿಬಿಯ ತವರು ಮೈದಾನದ ಪಿಚ್‌ಗಳಲ್ಲಿ ಸಾಕಷ್ಟು ರನ್‌ಗಳು ದಾಖಲಾಗುತ್ತವೆ. ಶಮರ್ ಜೋಸೆಫ್ ಅವರ ವೇಗ ಈ ಮೈದಾನದಲ್ಲಿ ಪರಿಣಾಮಕಾರಿಯಾಗಿದೆ. ಶಮರ್ ಗಂಟೆಗೆ 150 ಕಿಲೋಮೀಟರ್ ವೇಗದಲ್ಲಿ ಸುಲಭವಾಗಿ ಬೌಲಿಂಗ್ ಮಾಡಬಲ್ಲೆ ಎಂದು ತೋರಿಸಿಕೊಟ್ಟಿದ್ದಾರೆ.
ಶಮರ್ ಜೋಸೆಫ್ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 13 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದರು. ಶಮರ್ ಜೋಸೆಫ್ ಕೂಡ ಬ್ಯಾಟಿಂಗ್ ನಿಂದ 57 ರನ್ ಗಳಿಸುವಲ್ಲಿ ಯಶಸ್ವಿಯಾದರು. ಇದಲ್ಲದೇ ಹೆಬ್ಬೆರಳು ಮುರಿದು ಬೌಲಿಂಗ್ ಮಾಡುವ ಶಮರ್ ಅವರ ಉತ್ಸಾಹ ಚರ್ಚೆಗೆ ಗ್ರಾಸವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications