For Quick Alerts
ALLOW NOTIFICATIONS  
For Daily Alerts
 

IPL 2025: ಮುಂಬೈ ಮಣಿಸಿ ಶುಭಾರಂಭ ಮಾಡಿದ ಸಿಎಸ್‌ಕೆ

ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಐಪಿಎಲ್ 2025ರ ಮೂರನೇ ಪಂದ್ಯ ನಡೆಯಿತು. ಈ ಹೈವೋಲ್ಟೇಜ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2025ರಲ್ಲಿ ಭರ್ಜರಿ ಆರಂಭ ಪಡೆದಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ, ಮುಂಬೈ 2012 ರ ನಂತರ ಸೀಸನ್‌ನ ಮೊದಲ ಪಂದ್ಯವನ್ನು ಗೆಲುವಿನೊಂದಿಗೆ ಪ್ರಾರಂಭಿಸುವಲ್ಲಿ ಮತ್ತೊಮ್ಮೆ ವಿಫಲವಾಯಿತು.

ಈ ಪಂದ್ಯದಲ್ಲಿ ಟಾಸ್ ಸೋತ ಮುಂಬೈ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 155 ರನ್ ಗಳಿಸಿತು. 156 ರನ್‌ಗಳ ಗುರಿಯನ್ನು ಸಿಎಸ್‌ಕೆ 19.1 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 158 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ಚೆನ್ನೈ ತಂಡದ ಗೆಲುವಿನಲ್ಲಿ ರುತುರಾಜ್ ಗಾಯಕ್ವಾಡ್ (53) ಮತ್ತು ರಾಚಿನ್ ರವೀಂದ್ರ (65*) ಪ್ರಮುಖ ಪಾತ್ರವಹಿಸಿದರು. ಮುಂಬೈ ಪರ ವಿಘ್ನೇಶ್ ಪುತ್ತೂರು ಮೂರು ವಿಕೆಟ್ ಪಡೆಯುವ ಮೂಲಕ ಚೆನ್ನೈ ತಂಡದ ಗೆಲುವನ್ನು ತಡೆಯಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ.

IPL 2025 Chennai Super Kings beat Mumbai Indians by 5 wickets

ಮುಂಬೈ ಇಂಡಿಯನ್ಸ್ ನೀಡಿದ್ದ 156 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಪರ ರಾಹುಲ್ ತ್ರಿಪಾಠಿ ಮತ್ತು ರಾಚಿನ್ ರವೀಂದ್ರ ಇನಿಂಗ್ಸ್ ಆರಂಭಿಸಿದರು. ಇಬ್ಬರೂ ಮೊದಲ ವಿಕೆಟ್‌ಗೆ ಕೇವಲ 11 ರನ್‌ಗಳನ್ನು ಸೇರಿಸಿದರು. ರಾಹುಲ್ ತ್ರಿಪಾಠಿ ಕೇವಲ 2 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು. ಇದಾದ ನಂತರ, ರುತುರಾಜ್ ಗಾಯಕ್ವಾಡ್ ಮತ್ತು ರಚಿನ್ ರವೀಂದ್ರ ಅದ್ಭುತ ಜೊತೆಯಾಟ ಆಡಿದರು. ಈ ಮೂಲಕ ತಂಡದ ಸ್ಕೋರ್ ಅನ್ನು 78 ರನ್‌ಗಳಿಗೆ ಕೊಂಡೊಯ್ದರು.

ಸಿಎಸ್‌ಕೆ ಪರ ರುತುರಾಜ್ ಮತ್ತು ರಚಿನ್ ರವೀಂದ್ರ ಮಿಂಚಿನ ಅರ್ಧಶತಕಗಳನ್ನು ಬಾರಿಸುವ ಮೂಲಕ ಸಂಭ್ರಮಿಸಿದರು. ರುತುರಾಜ್ ಗಾಯಕ್ವಾಡ್ 26 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 53 ರನ್ ಗಳಿಸಿದರು. ಶಿವಂ ದುಬೆ 9 ರನ್, ದೀಪಕ್ ಹೂಡಾ 3 ಮತ್ತು ಸ್ಯಾಮ್ ಕರನ್ 4 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಆದರೆ ರಚಿನ್ ರವೀಂದ್ರ ಒಂದು ತುದಿಯಲ್ಲಿ ಕಚ್ಚಿ ನಿಂತು ಅರ್ಧಶತಕ ಪೂರೈಸಿದರು. ಅವರು 42 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ ಅರ್ಧಶತಕ ಪೂರೈಸಿದರು.

ಚೆನ್ನೈ ಪರ 17 ರನ್‌ಗಳಿಸಿ ಉತ್ತಮವಾಗಿ ಆಡುತ್ತಿದ್ದ ರವೀಂದ್ರ ಜಡೇಜಾ ರನೌಟ್‌ಗೆ ಬಲಿಯಾದರು. ಅಂತಿಮವಾಗಿ ರಚಿನ್ ರವೀಂದ್ರ 45 ಎಸೆತಗಳಲ್ಲಿ 65 ರನ್ ಗಳಿಸಿದರೆ, ಎಂ ಎಸ್ ಧೋನಿ 2 ಎಸೆತಗಳಲ್ಲಿ ಖಾತೆ ತೆರೆಯದೆ ಅಜೇಯರಾಗಿ ಉಳಿದರು.

ಮುಂಬೈಗೆ ಕಳಪೆ ಆರಂಭ

ಮುಂಬೈ ತಂಡದ ಅಗ್ರ ಕ್ರಮಾಂಕ ಕಡಿಮೆ ರನ್‌ಗಳಿಗೆ ಪೆವಿಲಿಯನ್‌ಗೆ ಮರಳಿತು. ಮೊದಲು, ರೋಹಿತ್ ಶರ್ಮಾ ಮತ್ತು ರಯಾನ್ ರಿಕಲ್ಟನ್ ಮುಂಬೈ ಇಂಡಿಯನ್ಸ್ ಪರ ಇನ್ನಿಂಗ್ಸ್ ಆರಂಭಿಸಲು ಬಂದರು. ರೋಹಿತ್ ಅವರನ್ನು ಖಲೀಲ್ ಅಹ್ಮದ್ ಶೂನ್ಯಕ್ಕೆ ಔಟ್ ಮಾಡಿದರು. ಇದಾದ ನಂತರ, ರಿಕಲ್ಟನ್ ಅವರನ್ನು ಖಲೀಲ್ 13 ರನ್‌ಗಳಿಗೆ ಪೆವಿಲಿಯನ್‌ಗೆ ಕಳುಹಿಸಿದರು. ವಿಲ್ ಜ್ಯಾಕ್ಸ್ ಕೂಡ 11 ರನ್ ಗಳಿಸಿವ ಔಟಾದರು.

ಸೂರ್ಯ-ತಿಲಕ್ ಆಸರೆ

ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಮುಂಬೈ ಪರ ಅತಿ ಹೆಚ್ಚು ರನ್ ಗಳಿಸಿದರು. ಸೂರ್ಯ 25 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 31 ರನ್ ಗಳಿಸಿದರೆ, ತಿಲಕ್ 26 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 29 ರನ್ ಗಳಿಸಿದರು. ಈ ಇಬ್ಬರು ಸಂಕಷ್ಟದಲ್ಲಿದ ಮುಂಬೈ ತಂಡಕ್ಕೆ ನೆರವಾದರು. ಆದರೆ ಸಿಎಸ್‌ಕೆ ಯುವ ಸ್ಪಿನ್ನರ್ ನೂರ್ ಅಹ್ಮದ್ ಅವರಿಬ್ಬರನ್ನೂ ಔಟ್ ಮಾಡಿದರು.

Story first published: Sunday, March 23, 2025, 23:21 [IST]
Other articles published on Mar 23, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+