CSK Retention: ರುತುರಾಜ್ ಗಾಯಕ್ವಾಡ್ ಮೊದಲ ಆಯ್ಕೆಯ ಆಟಗಾರ: ಧೋನಿಗೂ ಸ್ಥಾನ
ರುತುರಾಜ್ ಗಾಯಕ್ವಾಡ್ 18 ಕೋಟಿ ರೂ.
ರವೀಂದ್ರ ಜಡೇಜಾ 18 ಕೋಟಿ ರೂ.
ಮಹೇಂದ್ರ ಸಿಂಗ್ 4 ಕೋಟಿ ರೂ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ರಿಟೇನ್ ಲೀಸ್ಟ್ ಫೈನಲ್ ಆಗಿದೆ. ಅಳೆದು ತೂಗಿ ಆಟಗಾರರನ್ನು ಉಳಿಸಿಕೊಂಡಿದೆ. ಉಳಿಸಿಕೊಂಡ ಆಟಗಾರರ ಪಟ್ಟಿಯಲ್ಲಿ ಒಬ್ಬನೇ ವಿದೇಶಿ ಆಟಗಾರನಿಗೆ ಸ್ಥಾನ ನೀಡಲಾಗಿದೆ. ಅಲ್ಲದೆ ಈ ತಂಡದಲ್ಲಿ ಅನ್‌ಕ್ಯಾಪ್ಡ್ ಪ್ಲೇಯರ್ ರೂಪದಲ್ಲಿ ಮಹೇಂದ್ರ ಸಿಂಗ್ ಧೋನಿ ಸ್ಥಾನ ಪಡೆದಿದ್ದಾರೆ.

ಕಳೆದ ಬಾರಿ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲವಾಗಿದ್ದ ಚೆನ್ನೈ ತಂಡ ಈ ಬಾರಿ ಸ್ಟಾರ್ ಆಟಗಾರರಿಗೆ ಮಣೆ ಹಾಕಿದೆ. ಸಿಎಸ್‌ಕೆ ತಂಡದ ಯುವ ಆಟಗಾರ ರುತುರಾಜ್ ಗಾಯಕ್ವಾಡ್ ಅವರನ್ನು 18 ಕೋಟಿ ರೂ. ನೀಡಿ ತಂಡದಲ್ಲಿ ಉಳಿಸಿಕೊಂಡಿದೆ. ಇನ್ನು ರವೀಂದ್ರ ಜಡಜೇ ಅವರಿಗೂ ತಂಡ ಇಷ್ಟೇ ಹಣವನ್ನು ನೀಡಿದೆ. ಉಳಿದಂತೆ ಶಿವಂ ದುಬೆ ಅವರನ್ನು 12 ಕೋಟಿ ರೂ.ಗೆ ಉಳಿಸಿಕೊಂಡರೆ, ಧೋನಿ ಅವರನ್ನು 4 ಕೋಟಿ ರೂ.ಗೆ ಉಳಿಸಿಕೊಳ್ಳಲಾಗಿದೆ.
ಕಳೆದ ಐದು ವರ್ಷಗಳಲ್ಲಿ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನು ಆಡದ ಆಟಗಾರನನ್ನು ಅನ್‌ಕ್ಯಾಪ್ಡ್ ಪ್ಲೇಯರ್ ಎಂದು ಪರಿಗಣಿಸಬಹುದು ಎಂದು ಬಿಸಿಸಿಐ ನಿಯಮ ಚೆನ್ನೈಗೆ ವರದಾನವಾಗಿದೆ.
ಒಬ್ಬ ವಿದೇಶಿ ಆಟಗಾರನಿಗೆ ಮಣೆ
ಶ್ರೀಲಂಕಾದ ಸ್ಟಾರ್ ಆಟಗಾರ ಮಹೇಶ್ ಪತಿರಾಣ್ ಅವರನ್ನು ಉಳಿಸಿಕೊಳ್ಳುವಲ್ಲಿ ಸಿಎಸ್‌ಕೆ ಸಫಲವಾಗಿದೆ. ಇವರು ಕಳೆದ ಬಾರಿ ಐಪಿಎಲ್‌ನಲ್ಲಿ ತಮ್ಮ ಅಮೋಘ ಯಾರ್ಕರ್ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಯಾವ ಆಟಗಾರನಿಗೆ RTM ಅನ್ನು ಬಳಸಲಾಗುತ್ತದೆ?
ಚೆನ್ನೈ ಸೂಪರ್ ಕಿಂಗ್ಸ್ ಕೂಡ ರೈಟ್ ಟು ಮ್ಯಾಚ್ ಕಾರ್ಡ್ ಆಯ್ಕೆಯನ್ನು ಹೊಂದಿದೆ. ಈ ಅವಕಾಶವನ್ನು ನ್ಯೂಜಿಲೆಂಡ್ ಆಟಗಾರ ರಚಿನ್ ರವೀಂದ್ರ ಬಳಸಬಹುದು. ರಚಿನ್ ರವೀಂದ್ರ ಪ್ರಸ್ತುತ ಅಂತಾರಾಷ್ಟ್ರೀಯ ಆಟಗಾರರಲ್ಲಿ ಒಬ್ಬರು. ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸುತ್ತಾರೆ. ಕಳೆದ ಆವೃತ್ತಿಯಲ್ಲಿ ರಚಿನ್ ರವೀಂದ್ರ ಆಡಿದ 10 ಪಂದ್ಯಗಳಲ್ಲಿ 222 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
ಚೆನ್ನೈ ತಂಡ ಕೈ ಬಿಟ್ಟ ಆಟಗಾರರು ಯಾರು?
ನ್ಯೂಜಿಲೆಂಡ್ ತಂಡದ ಡೆವೊನ್ ಕಾನ್ವೆ, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಮೊಯಿನ್ ಅಲಿ, ನಿಶಾಂತ್ ಸಿಂಧು, ಅಜಯ್ ಮಂಡಲ್, ರಾಜ್ಯವರ್ಧನ್ ಹಂಗೇರ್ಕರ್, ದೀಪಕ್ ಚಹರ್, ಮಹಿಷ್ ತೀಕ್ಷಣ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ತುಷಾರ್ಜೀತ್ ಸಿಂಗ್, ಅಜಿಂಕ್ಯ ರಹಾನೆ, ಶೇಖ್ ರಶೀದ್, ಇವರನ್ನು ಚೆನ್ನೈ ತಂಡ ರಿಲೀಸ್ ಮಾಡಿದೆ.
ಇನ್ನು ಚೆನ್ನೈ ತಂಡ ಐದು ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿದ್ದು ಆರನೇ ಟ್ರೋಫಿಯ ಕನಸು ಕಾಣುತ್ತಿದೆ. ಈ ನಿಟ್ಟಿನಲ್ಲಿ ಬಲಿಷ್ಠ ತಂಡವನ್ನು ಅಂಗಳಕ್ಕೆ ಇಳಿಸುವ ಪ್ಲ್ಯಾನ್ ಮ್ಯಾನೇಜ್ಮೆಂಟ್ ನದ್ದಾಗಿದೆ. ಹೀಗಾಗಿಯೇ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದೆ. ಐಪಿಎಲ್ ಮೆಗಾ ಹರಾಜಿನಲ್ಲಿ ಈ ಬಾರಿ ಚೆನ್ನೈ ದೇಶೀಯ ಬೌಲರ್ಸ್ ಹಾಗೂ ಆಲ್‌ರೌಂಡರ್‌ಗಳನ್ನು ಟಾರ್ಗೆಟ್ ಮಾಡುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications