IPL 2025: ಎಂಎಸ್ ಧೋನಿಯ 0.12 ಸೆಕೆಂಡ್ ಸ್ಟಂಪಿಂಗ್ ವೈರಲ್!
ಕಳೆದ ಐದು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡದ ಕಾರಣ ಅನ್‌ಕ್ಯಾಪ್ಡ್ ಪ್ಲೇಯರ್ ಆಗಿ ಐಪಿಎಲ್ 2025 ರಲ್ಲಿ ಆಡುತ್ತಿರುವ ಭಾರತ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಲೆಜೆಂಡರಿ ವಿಕೆಟ್ ಕೀಪರ್ ಎಂಎಸ್ ಧೋನಿ ಮೊದಲ ಪಂದ್ಯದಲ್ಲಿ ಸದ್ದು ಮಾಡಿದ್ದಾರೆ. ಧೋನಿ ತಮ್ಮ ಸ್ಟಂಪಿಂಗ್ ಮೂಲಕ ಜಗತ್ತನ್ನು ಅಚ್ಚರಿಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಭಾನುವಾರ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಧೋನಿ ಮತ್ತೊಮ್ಮೆ ತಮ್ಮ ಸ್ಟಂಪಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಮುಂಬೈ ಇಂಡಿಯನ್ಸ್ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಮಿಂಚಿನ ವೇಗದ ಸ್ಟಂಪಿಂಗ್ ಮೂಲಕ ಔಟ್ ಮಾಡಿದ್ದಾರೆ. ಸೂರ್ಯಕುಮಾರ್ ಯಾವದ್ ವಿಕೆಟ್ ಕಳೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಳೆದ ಸೀಸನ್‌ನಲ್ಲಿ ನಿಧಾನಗತಿಯ ಓವರ್‌ರೇಟ್ ಉಲ್ಲಂಘನೆಗಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಒಂದು ಪಂದ್ಯಕ್ಕೆ ನಿಷೇಧ ಮಾಡಲಾಗಿತ್ತು. ಹೀಗಾಗಿ ಸಿಎಸ್‌ಕೆ ವಿರುದ್ಧದ ಮೊದಲ ಪಂದ್ಯದಲ್ಲಿ ಸೂರ್ಯಕುಮಾರ್ ಮುಂಬೈ ನಾಯಕರಾಗಿದ್ದರು.

ಮುಂಬೈ ಇಂಡಿಯನ್ಸ್ ತಂಡದ ಇನ್ನಿಂಗ್ಸ್‌ನ 10.3 ನೇ ಓವರ್‌ನಲ್ಲಿ ವಯಸ್ಸು ಮತ್ತು ದೈಹಿಕ ಸಾಮರ್ಥ್ಯ ಎರಡನ್ನೂ ಲೆಕ್ಕಿಸದ ಧೋನಿ ಕೇವಲ 0.12 ಸೆಕೆಂಡುಗಳಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಸ್ಟಂಪ್ ಔಟ್ ಮಾಡುವಲ್ಲಿ ಯಶಸ್ವಿಯಾದರು. ಪಂದ್ಯದ10.3 ನೇ ಓವರ್‌ನಲ್ಲಿ ನೂರ್ ಅಹ್ಮದ್ ಸೂರ್ಯಕುಮಾರ್ ಯಾದವ್‌ಗೆ ಗೂಗ್ಲಿ ಹಾಕಿದರು. ಸೂರ್ಯಕುಮಾರ್ ಯಾದವ್ ಕ್ರೀಸ್‌ನಿಂದ ಹೊರಗೆ ಬಂದು ಚೆಂಡನ್ನು ಹೊಡೆಯಲು ಪ್ರಯತ್ನಿಸಿದರು. ಆದರೆ ಚೆಂಡು ಹೊಡೆಯುವುದನ್ನು ಸೂರ್ಯ ಮಿಸ್ ಮಾಡಿಕೊಂಡರು. ಆದರೆ ವಿಕೆಟ್ ಹಿಂದೆ ಇದ್ದ ಧೋನಿ ಯಾವುದೇ ತಪ್ಪು ಮಾಡಲಿಲ್ಲ.
ಸೂರ್ಯ ಕ್ರೀಸ್‌ಗೆ ಕಾಲಿಡುವ ಮೊದಲೇ ಧೋನಿ ಸ್ಟಂಪ್ ಔಟ್ ಮಾಡಿದರು. ಇದನ್ನು ಸೂರ್ಯ ಅವರಿಂದ ನಂಬಲು ಸಾಧ್ಯವಾಗಲಿಲ್ಲ. ಧೋನಿ ಒಂದು ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ಈ ಸ್ಟಂಪ್ ಔಟ್ ಮಾಡಿದರು. ಧೋನಿ ಕೇವಲ 0.12 ಸೆಕೆಂಡುಗಳಲ್ಲಿ ಸ್ಟಂಪ್ ಔಟ್ ಮಾಡುವಲ್ಲಿ ಯಶ್ವಸಿಯಾದರು. ಸೂರ್ಯ 25 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 29 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಮಿಂಚಿಗಿಂತ ವೇಗವಾಗಿ ಸ್ಟಂಪಿಂಗ್ ಮಾಡಿದ ಧೋನಿ ವಿಡಿಯೋ ವೈರಲ್ ಆಗುತ್ತಿದೆ.
ಟಾಸ್ ಸೋತ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 155 ರನ್‌ಗಳನ್ನು ಗಳಿಸಲಷ್ಟೇ ಶಕ್ತರಾಯಿತು. ಮುಂಬೈ ನೀಡಿದ 156 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಸಿಎಸ್‌ಕೆ 19.1 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 158 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು. ಸಿಎಸ್‌ಕೆ ಗೆಲುವಿನಲ್ಲಿ ನಾಯಕ ರುತುರಾಜ್ ಗಾಯಕ್ವಾಡ್ (53) ಮತ್ತು ರಚಿನ್ ರವೀಂದ್ರ (65*) ಪ್ರಮುಖ ಪಾತ್ರವಹಿಸಿದರು. ಮುಂಬೈ ಪರ ಐಪಿಎಲ್‌ಗೆ ಪಾದರ್ಪಣೆ ಮಾಡಿದ ವಿಘ್ನೇಶ್ ಪುತ್ತೂರು ಮೂರು ವಿಕೆಟ್ ಪಡೆದು ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications