For Quick Alerts
ALLOW NOTIFICATIONS  
For Daily Alerts
 

GT vs DC IPL 2025: ಅಗ್ರ ಸ್ಥಾನಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಫೈಟ್‌

18ನೇ ಆವೃತ್ತಿಯ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್‌ ಜೈಂಟ್ಸ್ ತಂಡಗಳು ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ಕಾದಾಟ ನಡೆಸಲಿವೆ. ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ಡೆಲ್ಲಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವ ಪ್ಲ್ಯಾನ್ ಮಾಡಿಕೊಂಡಿದ್ದರೆ, ಗುಜರಾತ್‌ ಈ ಪಂದ್ಯವನ್ನು ಗೆದ್ದು ಅಗ್ರ ಸ್ಥಾನಕ್ಕೆ ಬಡ್ತಿ ಪಡೆಯುವ ಕನಸು ಕಾಣುತ್ತಿದೆ.

ಎರಡೂ ತಂಡಗಳಲ್ಲೂ ಸ್ಟಾರ್ ಆಟಗಾರರ ದಂಡೇ ಇದ್ದು, ಎಲ್ಲರ ಚಿತ್ತ ಕದ್ದಿದೆ. ಗುಜರಾತ್‌ ತವರಿನಲ್ಲಿ ಡೆಲ್ಲಿ ಅಜೇಯ ದಾಖಲೆಯನ್ನು ಹೊಂದಿದೆ. ಈ ಅಂಗಳದಲ್ಲಿ ಈ ಮೊದಲು ಆಡಿದ 2 ಪಂದ್ಯಗಳಲ್ಲೂ ಡೆಲ್ಲಿ ತಂಡ ಜಯ ಸಾಧಿಸಿದೆ. ಈ ಮೈದಾನದಲ್ಲಿ 18ನೇ ಆವೃತ್ತಿಯಲ್ಲಿ ಒಟ್ಟು ಮೂರು ಪಂದ್ಯಗಳಿ ಮೊದಲು ಬ್ಯಾಟ್ ಮಾಡಿದ ತಂಡ ಗೆಲುವು ಸಾಧಿಸಿದೆ. ಈ ಪಿಚ್‌ನಲ್ಲಿ ಟಾಸ್‌ ಗೆದ್ದ ತಂಡ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಮಾಡಲಿದೆ. ಈ ಪಿಚ್‌ ಆರಂಭದಲ್ಲಿ ಕೊಂಚ ಬ್ಯಾಟರ್‌ಗಳಿಗೆ ಸಹಾಯ ಮಾಡಲಿದ್ದು, ಚೆಂಡು ಹಳೆಯದಾದ ನಂತರ, ಬೌಲರ್‌ಗಳು ಮೇಲುಗೈ ಸಾಧಿಸುತ್ತಾರೆ.

IPL 2025 Delhi Capitals and Gujarat Titans Clash for Top Spot at Narendra Modi Stadium

ಟಾಪ್ ಆರ್ಡರ್ ಲಯ

ಗುಜರಾತ್ ಜೈಂಟ್ಸ್ ತಂಡದ ಆರಂಭಿಕರಾದ ಶುಭಮನ್‌ ಗಿಲ್ ಹಾಗೂ ಬಿ ಸಾಯಿ ಸುದರ್ಶನ್‌ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಈ ಇಬ್ಬರೂ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಡುವ ಕನಸು ಕಾಣುತ್ತಿದ್ದಾರೆ. ಸಾಯಿ ಸುದರ್ಶನ್‌ ಈ ಪಂದ್ಯದಲ್ಲಿ ಮಿಂಚಿದರೆ ಮತ್ತೆ ಇವರ ಮುಡಿಗೆ ಆರೆಂಜ್‌ ಕ್ಯಾಪ್‌ ಸೇರಲಿದೆ. ಮಧ್ಯಮ ಕ್ರಮಾಂಕದಲ್ಲಿ ಜೋಸ್ ಬಟ್ಲರ್‌ ತಂಡದ ಜೀವಾಳ. ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡುವ ಕಲೆಯನ್ನು ಇವರು ಕರಗತ ಮಾಡಿಕೊಂಡಿದ್ದಾರೆ. ಉಳಿದಂತೆ ಶಾರುಖ್ ಖಾನ್‌, ವಾಷಿಂಗ್ಟನ್‌ ಸುಂದರ್, ರಾಹುಲ್ ತೆವಟಿಯಾ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಬೇಕಿದೆ.

ಗುಜರಾತ್ ತಂಡದ ಬೌಲಿಂಗ್ ವಿಭಾಗಕ್ಕೆ ಬಲ ನೀಡಿದ್ದು ಮೊಹಮ್ಮದ್‌ ಸಿರಾಜ್ ಹಾಗೂ ಪ್ರಸಿದ್ಧ ಕೃಷ್ಣ. ಇವರಿಬ್ಬರೂ ನಾಯಕ ಇವರ ಕೈಯಲ್ಲಿ ಚೆಂಡನ್ನು ನೀಡಿದಾಗಲೆಲ್ಲಾ ಬಿಗುವಿನ ದಾಳಿ ನಡೆಸಿದ್ದಾರೆ. ಇನ್ನು ಸ್ಪಿನ್ ವಿಭಾಗದಲ್ಲಿ ವಿಶ್ವದ ಖ್ಯಾತ ಸ್ಪಿನ್ ಬೌಲರ್ ರಶೀದ್ ಖಾನ್‌ ಇದ್ದು, ಇವರಿಗೆ ಸಾಯಿ ಕಿಶೋರ್ ಉತ್ತಮ ಸಾಥ್ ನೀಡುತ್ತಿದ್ದಾರೆ.

IPL 2025 Delhi Capitals and Gujarat Titans Clash for Top Spot at Narendra Modi Stadium

ರಾಹುಲ್ ಆಕರ್ಷಣೆ

ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಸ್ಟಾರ್ ಬ್ಯಾಟರ್‌ಗಳು ಇದ್ದು ತಂಡಕ್ಕೆ ನೆರವಾಗುತ್ತಿದ್ದಾರೆ. ಶನಿವಾರ ಎಲ್ಲರ ಕಣ್ಣುಗಳು ಕನ್ನಡಿಗ ಕೆಎಲ್ ರಾಹುಲ್ ಮೇಲೆ ನೆಟ್ಟಿರಲಿವೆ. ಇವರು ಪ್ರಸಕ್ತ ಸರಣಿಯಲ್ಲಿ ಅಮೋಘ ಫಾರ್ಮ್‌ನಲ್ಲಿದ್ದು, ಎದುರಾಳಿಗಳ ಚಿಂತೆ ಹೆಚ್ಚಿಸಿದ್ದಾರೆ. ಅಭಿಷೇಕ್‌ ಪೋರೆಲ್‌, ಕರುಣ್ ನಾಯರ್‌, ಟ್ರಿಸ್ಟನ್‌ ಸ್ಟಬ್ಸ್‌, ಆಶುತೋಷ್ ಶರ್ಮಾ ಭರವಸೆ ಮೂಡಿಸಿದ್ದಾರೆ. ಯುವ ಆಲ್‌ರೌಂಡರ್‌ ವಿಪ್ರಜ್‌ ನಿಗಮ್‌ ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ನೆರವಾಗುತ್ತಿದ್ದಾರೆ. ವೇಗದ ಬೌಲಿಂಗ್‌ನಲ್ಲಿ ಮಿಚೆಲ್ ಸ್ಟಾರ್ಕ್‌ ತಮ್ಮ ಯಾರ್ಕರ್‌ಗಳಿಂದ ಎದುರಾಳಿಗಳಿಗೆ ಕಾಡಬಲ್ಲರು. ಮೋಹಿತ್ ಶರ್ಮಾ, ಮುಕೇಶ್ ಕುಮಾರ್‌ ಸಹ ಬಿಗು ವಿನ ದಾಳಿ ಸಂಘಟಿಸಬಲ್ಲರು. ಸ್ಪಿನ್ ವಿಭಾಗದಲ್ಲಿ ಕುಲ್‌ದೀಪ್ ಯಾದವ್ ಎಲ್ಲರ ಚಿತ್ತ ಕದ್ದಿದ್ದಾರೆ. ಇವರು ರನ್‌ಗಳಿಗೆ ಕಡಿವಾಣ ಹಾಕುತ್ತಿದ್ದಾರೆ.

Story first published: Saturday, April 19, 2025, 7:31 [IST]
Other articles published on Apr 19, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+