For Quick Alerts
ALLOW NOTIFICATIONS  
For Daily Alerts
 

IPL 2025, CSK: ಚೆನ್ನೈ ತಂಡಕ್ಕೆ "ಜೂನಿಯರ್ ಎಬಿಡಿ' ಎಂಟ್ರಿ

ಐಪಿಎಲ್ 2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರದರ್ಶನ ಇಲ್ಲಿಯವರೆಗೆ ತುಂಬಾ ಕಳಪೆಯಾಗಿದೆ. ತಂಡವು ಇಲ್ಲಿಯವರೆಗೆ ಆಡಿರುವ 7 ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಜಯಗಳಿಸುವಲ್ಲಿ ಯಶಸ್ವಿಯಾಗಿದ್ದು, ಪಾಯಿಂಟ್ ಟೇಬಲ್‌ನಲ್ಲಿ ಕೊನೆಯ ಸ್ಥಾನದಲ್ಲಿದೆ. ಚೆನ್ನೈ ತಂಡವನ್ನು ಎಂಎಸ್ ಧೋನಿ ಮುನ್ನಡೆಸುತ್ತಿದ್ದಾರೆ. ಗಾಯದ ಕಾರಣ ರುತುರಾಜ್ ಗಾಯಕ್ವಾಡ್ ಹೊರಗುಳಿದ ನಂತರ ಉಳಿದ ಪಂದ್ಯಗಳಿಗೆ ಚೆನ್ನೈ ತಂಡದ ನಾಯಕತ್ವ ಜವಾಬ್ದಾರಿಯನ್ನು ಧೋನಿ ಅವರಿಗೆ ವಹಿಸಲಾಗಿದೆ. ಈ ಮಧ್ಯೆ, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಿಕ್ಸರ್ ಹೊಡೆಯುವುದಕ್ಕೆ ಫೇಮಸ್ ಆಗಿರುವ ಸ್ಫೋಟಕ ಬ್ಯಾಟರ್ ಒಬ್ಬರು ಎಂಟ್ರಿ ಕೊಟ್ಟಿದ್ದಾರೆ.

ಐಪಿಎಲ್ 2025ರ ಮಧ್ಯದಲ್ಲಿ ಎಂಎಸ್ ಧೋನಿ ಹೊಸ ಅಸ್ತ್ರವನ್ನು ಪಡೆದುಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಂದಿನ ಪಂದ್ಯಗಳಿಗೆ ಗಾಯಗೊಂಡಿರುವ ಗುರ್ಜಪಾನಿ ಸಿಂಗ್ ಹೊರಗುಳಿದಿದ್ದಾರೆ. ಅವರ ಬದಲಿಗೆ ಜೂನಿಯರ್ ಎಬಿ ಡಿವಿಲಿಯರ್ಸ್ ಖ್ಯಾತಿಯ ಡೆವಾಲ್ಡ್ ಬ್ರೆವಿಸ್ ಚೆನ್ನೈ ತಂಡಕ್ಕೆ ಸೇರಿಕೊಂಡಿದ್ದಾರೆ.

IPL 2025 Dewald Brevis joins Chennai Super Kings as a replacement

ಡೆವಾಲ್ಡ್ ಬ್ರೆವಿಸ್ ಆಗಮನವು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆನೆ ಬಲಬಂತಾಗಿದೆ. ಟಿ20 ಕ್ರಿಕೆಟ್‌ಗೆ ಡೆವಾಲ್ಡ್ ಬ್ರೆವಿಸ್ ಹೇಳಿ ಮಾಡಿಸಿದಂತಹ ಬ್ಯಾಟರ್. ಡೆವಾಲ್ಡ್ ಬ್ರೆವಿಸ್ 81 ಟಿ20 ಪಂದ್ಯಗಳನ್ನು ಆಡಿದ್ದಾರೆ ಮತ್ತು 1787 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 162 ಆಗಿದೆ. ಅವರು 2023 ರಲ್ಲಿ ದಕ್ಷಿಣ ಆಫ್ರಿಕಾ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು, ಇಲ್ಲಿಯವರೆಗೆ 2 ಪಂದ್ಯಗಳನ್ನು ಆಡಿದ್ದಾರೆ.

ಡೆವಾಲ್ಡ್ ಬ್ರೆವಿಸ್ ಐಪಿಎಲ್ ಕೂಡ ಆಡಿದ್ದಾರೆ. ಅವರು ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು. ಅಲ್ಲಿ ಅವರು 10 ಪಂದ್ಯಗಳನ್ನು ಆಡಿದ್ದರು. ಆದರೆ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಅವರನ್ನು ಮುಂಬೈ ಇಂಡಿಯನ್ಸ್ ಉಳಿಸಿಕೊಂಡಿರಲಿಲ್ಲ. ಈಗ ಸಿಎಸ್‌ಕೆ ಬ್ರೆವಿಸ್ ಅವರನ್ನು 2.2 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.

21 ವರ್ಷದ ಡೆವಾಲ್ಡ್ ಬ್ರೆವಿಸ್ ಬಿಗ್ ಸಿಕ್ಸರ್‌ಗಳನ್ನು ಹೊಡೆಯುವುದರಲ್ಲಿ ಪರಿಣಿತ ಬ್ಯಾಟರ್. ಅವರು ಐಪಿಎಲ್ ಮತ್ತು ಇತರ ಟಿ20 ಲೀಗ್‌ಗಳಲ್ಲಿ ಮುಂಬೈ ಇಂಡಿಯನ್ಸ್ ಪರ ಅಬ್ಬರಿಸಿದ್ದಾರೆ. ಬ್ರೆವಿಸ್‌ಗೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹೆಚ್ಚಿನ ಅನುಭವವಿಲ್ಲದಿದ್ದರೂ, ಮುಂಬರುವ ಐಪಿಎಲ್ ಪಂದ್ಯಗಳಲ್ಲಿ ಅವರಿಗೆ ಅವಕಾಶ ಸಿಕ್ಕರೆ, ಅವರು ಸಿಎಸ್‌ಕೆ ತಂಡದ ದಿಕ್ಕನ್ನೇ ಬದಲಾಯಿಸುವ ಆಟಗಾರರಾಗಬಹುದು.

ವೆಸ್ಟ್ ಇಂಡೀಸ್‌ನಲ್ಲಿ ನಡೆದ 2022 ರ ಐಸಿಸಿ ಅಂಡರ್-19 ಪುರುಷರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಬ್ರೆವಿಸ್ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದರು. ಇದಾದ ನಂತರ ಅವರು ಕ್ರಿಕೆಟ್‌ನಲ್ಲಿ ಸದ್ದು ಮಾಡಿದರು. ಅವರು ಆಡಿದ 6 ಇನ್ನಿಂಗ್ಸ್‌ಗಳಲ್ಲಿ 506 ರನ್ ಗಳಿಸಿದರು. ಇದರಲ್ಲಿ ಎರಡು ಶತಕಗಳು ಸೇರಿವೆ. ಅಲ್ಲದೆ, ಐರ್ಲೆಂಡ್ ವಿರುದ್ಧ 96 ಮತ್ತು ಫೈನಲ್‌ನಲ್ಲಿ ರನ್ನರ್ ಅಪ್ ಆದ ಇಂಗ್ಲೆಂಡ್ ವಿರುದ್ಧ 97 ರನ್‌ಗಳನ್ನು ಬಾರಿಸಿದ್ದರು. ಅವರನ್ನು ದಕ್ಷಿಣ ಆಫ್ರಿಕಾ ತಂಡದ ಮಾಜಿ ದಿಗ್ಗಜ ಬ್ಯಾಟರ್ ಎಬಿ ಡಿವಿಲಿಯರ್ಸ್‌ ಅವರಿಗೆ ಹೋಲಿಸಲಾಗುತ್ತದೆ. ಅವರ ಬ್ಯಾಟಿಂಗ್ ಶೈಲಿಯಿಂದಾಗಿ ಅವರನ್ನು "ಬೇಬಿ ಎಬಿ' ಎಂದೂ ಕರೆಯುತ್ತಾರೆ.

Story first published: Friday, April 18, 2025, 18:13 [IST]
Other articles published on Apr 18, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+