IPL 2025: ಗುಜರಾತ್ ಟೈಟನ್ಸ್ ತಂಡಕ್ಕೆ ಆರ್‌ಸಿಬಿ ಮಾಜಿ ಆಟಗಾರ ಬ್ಯಾಟಿಂಗ್ ಕೋಚ್
ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ಐಪಿಎಲ್ 2025ರ ಮೆಗಾ ಹರಾಜಿಗೆ ಕೆಲವೇ ದಿನಗಳು ಉಳಿದಿವೆ. ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆ ನವೆಂಬರ್ 24 ಮತ್ತು 25 ರಂದು ನಡೆಯಲಿದೆ. ಇದಕ್ಕೂ ಮುನ್ನ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಮಹತ್ವದ ನಿರ್ಧಾರ ಕೈಗೊಂಡಿದೆ. ಟೀಮ್ ಇಂಡಿಯಾ ಮತ್ತು ಆರ್‌ಸಿಬಿಯ ಮಾಜಿ ಆಟಗಾರ ಗುಜರಾತ್ ಟೈಟಾನ್ಸ್ ತಂಡದ ಕೋಚಿಂಗ್ ಸ್ಟಾಫ್‌ಗೆ ಸೇರಿಕೊಂಡಿದ್ದಾರೆ. ಇದರೊಂದಿಗೆ ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡ ಮುಂದಿನ 2025ರ ಐಪಿಎಲ್ ಆವೃತ್ತಿಗೆ ಭರ್ಜರಿ ಸಿದ್ಧವಾಗುತ್ತಿದೆ.
ಐಪಿಎಲ್ 2025ರ ಟೂರ್ನಿಗೆ ಟೀಮ್ ಇಂಡಿಯಾ ಮಾಜಿ ವಿಕೆಟ್‌ಕೀಪರ್-ಬ್ಯಾಟರ್ ಪಾರ್ಥಿವ್ ಪಟೇಲ್ ಅವರನ್ನು ಬ್ಯಾಟಿಂಗ್ ಮತ್ತು ಸಹಾಯಕ ಕೋಚ್ ಆಗಿ ಗುಜರಾತ್ ಟೈಟಾನ್ಸ್ ನೇಮಕ ಮಾಡಿಕೊಂಡಿದೆ. ಫ್ರಾಂಚೈಸಿ ಬುಧವಾರ ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಗುಜರಾತ್ ಟೈಟಾನ್ಸ್ ತಂಡದ ಹೆಡ್ ಕೋಚ್ ಆಶಿಶ್ ನೆಹ್ರಾ ನೇತೃತ್ವದ ಸಹಾಯಕ ಸಿಬ್ಬಂದಿಯಲ್ಲಿ ಪಾರ್ಥಿವ್ ಪಟೇಲ್ ದ್ವಿಪಾತ್ರ ನಿರ್ವಹಿಸಲಿದ್ದಾರೆ.

ಪಾರ್ಥಿವ್ ಪಟೇಲ್ ಬ್ಯಾಟಿಂಗ್ ಮತ್ತು ಸಹಾಯಕ ಕೋಚ್ ಆಗಿರುವ ಬಗ್ಗೆ ಪ್ರಕಟಣೆ ಹೊರಡಿಸಿರುವ ಫ್ರಾಂಚೈಸಿ, 'ಗುಜರಾತ್ ಟೈಟಾನ್ಸ್ ತನ್ನ ಹೊಸ ಸಹಾಯಕ ಮತ್ತು ಬ್ಯಾಟಿಂಗ್ ಕೋಚ್ ಆಗಿ ಪಾರ್ಥಿವ್ ಪಟೇಲ್ ಅವರನ್ನು ನೇಮಕ ಮಾಡಿರುವುದನ್ನು ಪ್ರಕಟಿಸಲು ಸಂತೋಷವಾಗಿದೆ. ಈ ಮಾಜಿ ಭಾರತ ತಂಡದ ವಿಕೆಟ್‌ಕೀಪರ್ ಬ್ಯಾಟರ್ ತಮ್ಮ 17 ವರ್ಷಗಳ ಅದ್ಭುತ ವೃತ್ತಿಜೀವನದ ಅನುಭವವನ್ನು ತಂಡಕ್ಕೆ ಸೇರಿಸಲಿದ್ದಾರೆ ಎಂದು ತಿಳಿಸಿದೆ.
ಪಾರ್ಥಿವ್ 2020ರಲ್ಲಿ ಎಲ್ಲಾ ಮಾದರಿ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಇದೇ ಮೊದಲ ಬಾರಿಗೆ ಅವರು ಐಪಿಎಲ್‌ನಲ್ಲಿ ಕೋಚ್ ಪಾತ್ರವನ್ನು ನಿರ್ವಹಿಸಲು ಸಜ್ಜಾಗಿದ್ದಾರೆ. ಅವರು ಕಳೆದ ಮೂರು ಋತುಗಳಲ್ಲಿ ಮುಂಬೈ ಇಂಡಿಯನ್ಸ್‌ಗಾಗಿ ಟ್ಯಾಲೆಂಟ್ ಸ್ಕೌಟ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಐಎಲ್‌ಟಿ20 ಮೊದಲ ಸೀಸನ್‌ನಲ್ಲಿ ಎಂಐ ಎಮಿರೇಟ್ಸ್‌ನ ಬ್ಯಾಟಿಂಗ್ ಕೋಚ್ ಆಗಿದ್ದರು.
ಗುಜರಾತ್ ಟೈಟನ್ಸ್ ರಿಟೇನ್ ಮಾಡಿಕೊಂಡ ಆಟಗಾರ
ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡವು ಮೆಗಾ ಹರಾಜಿಗೂ ಮುನ್ನ ಐವರು ಆಟಗಾರರನ್ನು ಉಳಿಸಿಕೊಂಡಿದೆ. ರಶೀದ್ ಖಾನ್ ಅವರನ್ನು 18 ಕೋಟಿ ರೂ.ಗೆ ಉಳಿಸಿಕೊಂಡರೆ, ಶುಭಮನ್ ಗಿಲ್ ಸಂಭಾವನೆ ಕಡಿತವನ್ನು ಒಪ್ಪಿಕೊಂಡಿದ್ದು. 16.5 ಕೋಟಿ ರೂ.ಗೆ ಉಳಿಸಿಕೊಂಡಿದೆ. ಸಾಯಿ ಸುದರ್ಶನ್ 8.5 ಕೋಟಿ ರೂ.ಗೆ, ಶಾರುಖ್ ಖಾನ್ ಮತ್ತು ರಾಹುಲ್ ತೆವಾಟಿಯಾ ಅವರನ್ನು ತಲಾ 4 ಕೋಟಿ ರೂ.ಗೆ ಉಳಿಸಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications