LSG vs GT IPL 2025: ಸುದರ್ಶನ್, ಗಿಲ್ ಅರ್ಧಶತಕ, ಎಲ್‌ಎಸ್‌ಜಿಗೆ 181 ರನ್ ಗುರಿ
ಆರಂಭಿಕರಾದ ಬಿ ಸಾಯಿ ಸುದರ್ಶನ್ ಹಾಗೂ ನಾಯಕ ಶುಭಮನ್ ಗಿಲ್ ಅವರು ಬಾರಿಸಿದ ಅರ್ಧಶತಕದ ಬಲದಿಂದ ಗುಜರಾತ್ ಟೈಟಾನ್ಸ್ 18ನೇ ಆವೃತ್ತಿಯ 26ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ಗೆ 181 ರನ್‌ಗಳ ಗುರಿ ನೀಡಿದೆ. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಜಿಟಿ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 180 ರನ್ ಸೇರಿಸಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡದ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಅವರು ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ತಂಡಕ್ಕೆ ಭರ್ಜರಿ ಆರಂಭ ನೀಡಿತು. ಪವರ್ ಪ್ಲೇನಲ್ಲಿ ವಿಕೆಟ್ ಬೀಳದಂತೆ ಕಾಯ್ದುಕೊಂಡ ಜೋಡಿ ರನ್ ಗತಿಯನ್ನು ಕಾಯ್ದುಕೊಳ್ಳುವುದಲ್ಲದೇ, ವಿಕೆಟ್ ಸಹ ಬಚಾವ್ ಮಾಡಿಕೊಂಡು ಬ್ಯಾಟಿಂಗ್ ನಡೆಸಿತು. ಪ್ರಸಕ್ತ ಐಪಿಎಲ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಸಾಯಿ ಸುದರ್ಶನ್ ತಮ್ಮ ಕ್ಲಾಸಿಕ್ ಬ್ಯಾಟಿಂಗ್ ಮುಂದುವರೆಸಿದರು.

ಆರಂಭಿಕರ ಶಕತದ ಜೊತೆಯಾಟ
ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಮೊದಲ ವಿಕೆಟ್‌ಗೆ 12.1 ಓವರ್‌ಗಳಲ್ಲಿ 120 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಈ ಮೂಲಕ ಪ್ರಸಕ್ತ ಐಪಿಎಲ್‌ನಲ್ಲಿ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ ಬಂದಿತು. ಉತ್ತಮ ಲಯದಲ್ಲಿ ಬ್ಯಾಟ್ ಮಾಡುತ್ತಾ ಇದ್ದ ಶುಭಮನ್ ಗಿಲ್ ಅವೀಶ್ ಖಾನ್ ಅವರ ಎಸೆತವನ್ನು ಕಂಡು ಲಾಂಗ್ ಆನ್ ಮೇಲೆ ಸಿಕ್ಸರ್ ಬಾರಿಸಲು ಮುಂದಾದರು. ಆದರೆ ಅಲ್ಲಿ ಫೀಲ್ಡ್ ಮಾಡ್ತಾ ಇದ್ದ ಎಡೇನ್ ಮಾರ್ಕ್ರಮ್ ಉತ್ತಮ ಕ್ಯಾಚ್ ಪಡೆದರು. ಇವರು 38 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 60 ರನ್ ಸಿಡಿಸಿದರು.
ಸಾಯಿ ಸುದರ್ಶನ್ 37 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ನೆರವಿನಿಂದ 56 ರನ್ ಬಾರಿಸಿ ಅಬ್ಬರಿಸಿದರು. ಮೂಲಕ ಪ್ರಸಕ್ತ ಐಪಿಎಲ್‌ನಲ್ಲಿ ತಮ್ಮ ಭರ್ಜರಿ ಫಾರ್ಮ್ ಕಂಟಿನ್ಯೂ ಮಾಡಿದ್ದಾರೆ. ಆ ಬಳಿಕ ವಾಷಿಂಗ್ಟನ್ ಸುಂದರ್ (2), ಜೋಸ್ ಬಟ್ಲರ್ (16), ಶಾರುಖ್ ಖಾನ್ (ಅಜೇಯ 11), ರಾಹುಲ್ ತೆವಾಟಿಯಾ (0), ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಶೆರ್ಫೇನ್ ರುದರ್ಫೋರ್ಡ್ 3 ಬೌಂಡರಿ ನೆರವಿನಿಂದ 22 ರನ್ ಸಿಡಿಸಿ ಔಟ್ ಆದರು.

ಎಲ್‌ಎಸ್‌ಜಿ ಪರ ಶಾರ್ದೂಲ್ ಠಾಕೂರ್ ಹಾಗೂ ರವಿ ಬಿಷ್ಣೋಯಿ ತಲಾ 2 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications