For Quick Alerts
ALLOW NOTIFICATIONS  
For Daily Alerts
 

Shubman Gill: ಡೆಲ್ಲಿ ವಿರುದ್ಧ ಜಯಗಳಿಸಿದರೂ ಜಿಟಿ ನಾಯಕ ಶುಭಮನ್ ಗಿಲ್‌ಗೆ ದಂಡ

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಮತ್ತು ಗುಜರಾತ್ ಟೈಟಾನ್ಸ್ (ಜಿಟಿ) ನಡುವೆ ಐಪಿಎಲ್ 2025 ರ 35ನೇ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಗುಜರಾಟ್ ಟೈಟಾನ್ಸ್ ಮಣಿಸಿತು. ಈ ಗೆಲುವಿನೊಂದಿಗೆ ಗುಜರಾತ್ ತಂಡ ಪಾಯಿಂಟ್ ಟೇಬಲ್‌ನಲ್ಲಿ ಆಗ್ರ ಸ್ಥಾನ ತಲುಪಿತು. ಡೆಲ್ಲಿ ವಿರುದ್ಧ ಜಯಗಳಿಸಿದರೂ ಜಿಟಿ ನಾಯಕ ಶುಭಮನ್ ಗಿಲ್‌ ಅವರಿಗೆ ದಂಡ ವಿಧಿಸಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಗುಜರಾತ್ ಟೈಟಾನ್ಸ್ (ಜಿಟಿ) ನಾಯಕ ಶುಭಮನ್ ಗಿಲ್ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

IPL 2025 GT captain Shubman Gill fined despite win against Delhi Capitals

ಐಪಿಎಲ್ 2025 ರಲ್ಲಿ ಗುಜರಾತ್ ಟೈಟಾನ್ಸ್‌ ತಂಡದ ಮೊದಲ ಓವರ್-ರೇಟ್ ಅಪರಾಧ ಇದಾಗಿದ್ದು, ಕನಿಷ್ಠ ಓವರ್-ರೇಟ್ ಅಪರಾಧಗಳಿಗೆ ಸಂಬಂಧಿಸಿದ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ ಶುಭಮನ್ ಗಿಲ್‌ ಅವರಿಗೆ ಕನಿಷ್ಠ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

ಐಪಿಎಲ್ ನಿಯಮದ ಪ್ರಕಾರ, ಪ್ರತಿ ತಂಡಗಳು 20 ಓವರ್ಗಳನ್ನು 1 ಗಂಟೆ 30 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಇದರೊಳಗೆ 20 ಓವರ್ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ಆಯಾ ತಂಡಗಳ ನಾಯಕನಿಗೆ ತಲಾ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.

ಐಪಿಎಲ್ 18ನೇ ಸೀಸನ್‌ನಲ್ಲಿ ಕೆಲವು ತಂಡಗಳ ನಾಯಕರಿಗೆ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ದಂಡ ಹಾಕಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್‌ನ (ಡಿಸಿ) ಅಕ್ಸರ್ ಪಟೇಲ್, ಮುಂಬೈ ಇಂಡಿಯನ್ಸ್‌ನ (ಎಂಐ) ಹಾರ್ದಿಕ್ ಪಾಂಡ್ಯ, ರಾಜಸ್ಥಾನ ರಾಯಲ್ಸ್‌ನ (ಆರ್‌ಆರ್) ರಿಯಾನ್ ಪರಾಗ್ ಮತ್ತು ಸಂಜು ಸ್ಯಾಮ್ಸನ್ ಹಾಗು ಲಕ್ನೋ ಸೂಪರ್ ಜೈಂಟ್ಸ್‌ನ (ಎಲ್‌ಎಸ್‌ಜಿ) ರಿಷಭ್ ಪಂತ್ ಅವರು ಓವರ್-ರೇಟ್ ಅಪರಾಧಗಳಿಗಾಗಿ ದಂಡ ಹಾಕಿಕೊಂಡಿರುವ ನಾಯಕರಾಗಿದ್ದಾರೆ.

ಎಲ್‌ಎಸ್‌ಜಿ vs ಜಿಟಿ ಪಂದ್ಯ

ಗುಜರಾತ್ ಟೈಟಾನ್ಸ್ ಪರ ಸ್ಪೋಟಕ ಬ್ಯಾಟರ್ ಜೋಸ್ ಬಟ್ಲರ್ ಕೇವಲ 54 ಎಸೆತಗಳಲ್ಲಿ 97 ರನ್ ಗಳಿಸಿ ಅಜೇಯರಾಗುಳಿದರು. ಅವರ ಈ ಇನ್ನಿಂಗ್ಸ್ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು ಅಹಮದಾಬಾದ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 204 ರನ್‌ಗಳ ಗುರಿಯನ್ನು 4 ಎಸೆತಗಳು ಬಾಕಿ ಇರುವಾಗ ತಲುಪಿತು. ಬಟ್ಲರ್ ಅವರು, ಸಾಯಿ ಸುದರ್ಶನ್ ಜೊತೆ 60 ರನ್ ಮತ್ತು ಶೆರ್ಫೇನ್ ರುದರ್ಫೋರ್ಡ್ ಜೊತೆ 119 ರನ್ ಗಳ ಜೊತೆಯಾಟ ಆಡಿದರು. ಪರಿಣಾಮ ಜಿಟಿ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ 200 ಕ್ಕಿಂತ ಹೆಚ್ಚು ರನ್ ಗಳನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಯಿತು.

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪರ ನಾಯಕ ಅಕ್ಸರ್ ಪಟೇಲ್ (39) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಕೊನೆಯಲ್ಲಿ 37 ರನ್ ಗಳಿಸುವ ಮೂಲಕ ಅಶುತೋಷ್ ಶರ್ಮಾ ಡೆಲ್ಲಿ ತಂಡದ ಸ್ಕೋರ್ ಅನ್ನು 200 ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಗುಜರಾತ್ ಟೈಟಾನ್ಸ್ ಪರ ವೇಗಿ ಪ್ರಸಿದ್ಧ್ ಕೃಷ್ಣ 4 ಓವರ್‌ಗಳಲ್ಲಿ 41 ರನ್‌ಗಳಿಗೆ 4 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್, ಅರ್ಷದ್ ಖಾನ್, ಇಶಾಂತ್ ಶರ್ಮಾ ಮತ್ತು ಆರ್. ಸಾಯಿ ಕಿಶೋರ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.

Story first published: Sunday, April 20, 2025, 12:54 [IST]
Other articles published on Apr 20, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+