Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025 GT vs MI: ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದ ಗುಜರಾತ್‌: ಸಾಯಿ ಸುದರ್ಶನ್ ಅರ್ಧಶತಕ

ಭರವಸೆಯ ಬ್ಯಾಟರ್‌ ಸಾಯಿ ಸುದರ್ಶನ್‌ ಅವರು ಬಾರಿಸಿದ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟನ್ಸ್‌ 18ನೇ ಆವೃತ್ತಿಯ ಐಪಿಎಲ್‌ನ 9ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿದೆ. ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 196 ರನ್‌ ಕಲೆ ಹಾಕಿದೆ.

ಗುಜರಾತ್ ತಂಡದ ಆರಂಭಿಕರಾದ ನಾಯಕ ಶುಭಮನ್‌ ಗಿಲ್‌ ಹಾಗೂ ಸಾಯಿ ಸುದರ್ಶನ್ ತಂಡಕ್ಕೆ ಸ್ಥಿರವಾದ ಆರಂಭ ನೀಡಿದರು. ಈ ಜೋಡಿ ಪವರ್‌ ಪ್ಲೇನಲ್ಲಿ ಪವರ್‌ ಫುಲ್ ಆಟದ ಪ್ರದರ್ಶನ ನೀಡಿತು. ಈ ಜೋಡಿ 8.3 ಓವರ್‌ಗಳಲ್ಲಿ 78 ರನ್‌ ಸೇರಿಸಿತು. ಶುಭಮನ್‌ ಗಿಲ್‌ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 38 ರನ್‌ ಬಾರಿಸಿ ಔಟ್ ಆದರು.

IPL 2025 GT vs MI Toss Update Match Report Key Highlights

ಎರಡನೇ ವಿಕೆಟ್‌ಗೆ ಜೋಸ್‌ ಬಟ್ಲರ್‌ ಹಾಗೂ ಸಾಯಿ ಸುದರ್ಶನ್‌ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಮುಂಬೈ ಇಂಡಿಯನ್ಸ್ ತಂಡ ವಿಫಲವಾಯಿತು. ಈ ಜೋಡಿ 32 ಎಸೆತಗಳಲ್ಲಿ 51 ರನ್‌ ಸೇರಿಸಿತು. ಮಧ್ಯಮ ಕ್ರಮಾಂಕದ ಸ್ಟಾರ್ ಬ್ಯಾಟರ್‌ ಜೋಸ್‌ ಬಟ್ಲರ್‌ 24 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 39 ರನ್‌ ಸಿಡಿಸಿ ಮುಜೀಬ್‌ ಉರ್ ರೆಹಮಾನ್ ಅವರು ತೋಡಿದ ಖೆಡ್ಡಾಗೆ ಬಲಿಯಾದ್ರು.

ಸುದರ್ಶನ್‌ ಅರ್ಧಶತಕ

ಮೊಹಮ್ಮದ್ ಶಾರುಖ್‌ ಖಾನ್‌ 9 ರನ್‌ ಬಾರಿಸುತ್ತಿದ್ದಂತೆ ಔಟ್ ಆದರು. ಆರಂಭಿಕರಾದ ಸಾಯಿ ಸುದರ್ಶನ್‌ 41 ಎಸೆತಗಳಲ್ಲಿ 63 ರನ್‌ ಸಿಡಿಸಿ ಔಟ್ ಆದರು. ಇವರ ಅಮೋಘ ಇನಿಂಗ್ಸ್‌ನಲ್ಲಿ 4 ಬೌಂಡರಿ, 2 ಸಿಕ್ಸರ್ ಒಳಗೊಂಡಿವೆ. ಮಧ್ಯಮ ಕ್ರಮಾಂಕದಲ್ಲಿ ಶೆರ್ಫೇನ್ ರುದರ್ಫೋರ್ಡ್ 18 ರನ್‌ ಸಿಡಿಸಿ ಔಟ್ ಆದರು.

ಗುಜರಾತ್‌ ಟೈಟಾನ್ಸ್‌ ಡೆತ್‌ ಓವರ್‌ಗಳಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲವಾಯಿತು. ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ತೆವಾಟಿಯಾ, ರಶೀದ್ ಖಾನ್‌, ಕಗಿಸೋ ರಬಾಡ, ಸಾಯಿ ಕಿಶೋರ್‌ ರನ್‌ ಜಕೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಬೃಹತ್‌ ಮೊತ್ತ ಕಲೆ ಹಾಕುವಲ್ಲಿ ಗುಜರಾತ್ ವಿಫಲವಾಯಿತು.

ಮುಂಬೈ ಇಂಡಿಯನ್ಸ್ ತಂಡದ ಪರ ಹಾರ್ದಿಕ್ ಪಾಂಡ್ಯ 2 ವಿಕೆಟ್ ಕಬಳಿಸಿದರು. ಉಳಿದಂತೆ ಟ್ರೆಂಟ್ ಬೌಲ್ಟ್‌, ದೀಪಕ್ ಚಹಾರ್‌, ಮುಜಿಬ್‌ ಉರ್‌ ರೆಹಮಾನ್‌, ಸತ್ಯನಾರಯಣ್ ರಾಜ್‌ ಒಂದು ವಿಕೆಟ್‌ ಕಬಳಿಸಿದರು.

Story first published: Saturday, March 29, 2025, 21:30 [IST]
Other articles published on Mar 29, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+