LSG vs GT IPL 2025: ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಭದ್ರ ಪಡಿಸಿಕೊಳ್ಳುವತ್ತ ಗುಜರಾತ್ ಚಿತ್ತ
ಲಕ್ನೋ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶನಿವಾರ ಎರಡು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಕಾದಾಟ ನಡೆಸಲಿವೆ. ಈಗಾಗಲೇ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಜಿಟಿ, ಈ ಪಂದ್ಯವನ್ನು ಗೆದ್ದು ತನ್ನ ಸ್ಥಾನವನ್ನು ಭಧ್ರ ಪಡಿಸಿಕೊಳ್ಳುವ ಇರಾದೆಯನ್ನು ಹೊಂದಿದೆ. ಎಲ್‌ಎಸ್‌ಜಿ ತವರಿನಲ್ಲಿ ಮತ್ತೊಂದು ಗೆಲುವಿನ ಕನಸು ಕಾಣುತ್ತಿದೆ.
ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು ಕುತೂಹಲ ಮನೆ ಮಾಡಿದೆ. ಗುಜರಾತ್ ತಂಡದ ಸ್ಟಾರ್ ಆಟಗಾರರ ಭರ್ಜರಿ ಫಾರ್ಮ್‌ನಲ್ಲಿದ್ದು, ಎದುರಾಳಿ ಅಂಗಳದಲ್ಲಿ ಮತ್ತೊಂದು ಗೆಲುವಿನ ಲೆಕ್ಕಾಚಾರ ಹಾಕಿಕೊಂಡಿದೆ. ಇದು ವರೆಗೆ ಐಪಿಎಲ್‌ನಲ್ಲಿ ಲಕ್ನೋ ಹಾಗೂ ಗುಜರಾತ್ ತಂಡಗಳು 5 ಬಾರಿ ಮುಖಾಮುಖಿಯಾಗಿದ್ದು ಎಲ್‌ಎಸ್‌ಜಿ ಕೇವಲ ಒಂದು ಪಂದ್ಯವನ್ನು ಗೆದ್ದಿದೆ. ಉಳಿದ ನಾಲ್ಕು ಪಂದ್ಯಗಳನ್ನು ಗುಜರಾತ್ ಗೆದ್ದಿದೆ.

ಪಿಚ್ ಹೇಗಿದೆ?
ಈ ಪಿಚ್‌ನಲ್ಲಿ ಸ್ಪಿನ್ ಬೌಲರ್‌ಗಳಿಗೆ ಸಹಾಯ ಸಿಗುವ ಸಾಧ್ಯತೆ ಇದೆ. ಈ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಒಮ್ಮೆಯೂ 200 ರನ್‌ಗಳ ಗುರಿ ಮುಟ್ಟಿಲ್ಲ. ಏಕಾನಾ ಪಿಚ್ ಬೌಲರ್‌ಗಳಿಗೆ ನೆರವಾಗಲಿದೆ. ಇದರಿಂದಾಗಿ ಬ್ಯಾಟ್ಸ್‌ಮನ್‌ಗಳಿಗೆ ರನ್ ಗಳಿಸುವುದು ಸ್ವಲ್ಪ ಕಷ್ಟಕರವಾಗುತ್ತದೆ. ಈ ಮೈದಾನದಲ್ಲಿ 16 ಐಪಿಎಲ್ ಪಂದ್ಯಗಳಲ್ಲಿ, ಮೊದಲು ಬ್ಯಾಟ್ ಮಾಡಿದ ತಂಡ 8 ಬಾರಿ, ಗುರಿಯನ್ನು ಬೆನ್ನಟ್ಟಿದ ತಂಡ 7 ಬಾರಿ ಜಯ ಸಾಧಿಸಿದೆ.
ತವರಿನಲ್ಲಿ ಎರಡನೇ ಗೆಲುವಿನ ಕನಸು
ಲಕ್ನೋ ಸೂಪರ್ ಜೈಂಟ್ಸ್ ತಂಡ ಲಯ ಕಂಡು ಕೊಂಡಿದೆ. ತವರಿನಲ್ಲಿ ನಡೆಯಲಿರುವ ಎರಡನೇ ನಗೆ ಬೀರಲು ಪ್ಲ್ಯಾನ್ ಮಾಡಿಕೊಂಡಿದೆ. ಈ ಮೂಲಕ ಪ್ಲೇ ಆಫ್‌ಗೆ ಮತ್ತಷ್ಟು ಹತ್ತಿರವಾಗುವ ಇರಾದೆ ಲಕ್ನೋ ತಂಡದ್ದಾಗಿದೆ. ಈ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಆರಂಭಿಕರಾದ ಐಡೇನ್ ಮಾರ್ಕ್ರಮ್ ಹಾಗೂ ಮಿಚೆಲ್ ಮಾರ್ಷ್ ಉತ್ತಮ ಲಯದಲ್ಲಿದ್ದಾರೆ. ಈ ಇಬ್ಬರೂ ಆಟಗಾರರು ತವರಿನಲ್ಲಿ ಅಬ್ಬರದ ಪ್ರದರ್ಶನ ನೀಡಿ ತಂಡಕ್ಕೆ ಆಸರೆಯಾಗಬೇಕಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿರುವ ನಿಕೋಲಸ್ ಪೂರನ್ ತಮ್ಮ ಶಿಸ್ತು ಬದ್ಧ ಆಟದಿಂದ ಎದುರಾಳಿ ಬೌಲರ್‌ಗಳನ್ನು ಕಾಡುತ್ತಿದ್ದಾರೆ. ಉಳಿದಂತೆ ಡೇವಿಡ್ ಮಿಲ್ಲರ್, ಆಯೂಷ್ ಬದೋನಿ, ಅಬ್ದುಲ್ ಸಮದ್ ಸ್ಥಿರ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾಗಬೇಕಿದೆ.
ಎಲ್‌ಎಸ್‌ಜಿ ಪರ ಮಿಂಚಿರುವ ಬ್ಯಾಟರ್ಸ್
ನಿಕೋಲಸ್ ಪೂರನ್, 5 ಪಂದ್ಯ, 288 ರನ್
ಮಿಚೆಲ್ ಮಾರ್ಷ್, 5 ಪಂದ್ಯ, 288 ರನ್
ಐಡೆನ್ ಮಾರ್ಕ್ರಾಮ್, 5 ಪಂದ್ಯ, 144 ರನ್
ಲಕ್ನೋ ತಂಡದ ಬೌಲರ್‌ಗಳು ಬಿಗುವಿನ ದಾಳಿಯನ್ನು ಸಂಘಟಿಸುವಲ್ಲಿ ವಿಫಲರಾಗುತ್ತಿದ್ದಾರೆ. ಸ್ಟಾರ್ ಬೌಲರ್‌ಗಳು ವಿಕೆಟ್ ಬೇಟೆಯಲ್ಲಿ ಹಿನ್ನಡೆ ಅನುಭವಿಸುತ್ತಿರುವುದು ತಂಡದ ತಲೆ ನೋವು ಹೆಚ್ಚಿಸಿದೆ. ಶಾರ್ದೂಲ್ ಠಾಕೂರ್, ದಿಗ್ವೇಶ್ ರಾಠಿ ಅವರಿಗೆ ಉಳಿದ ಬೌಲರ್‌ಗಳು ಉತ್ತಮ ಸಾಥ್ ನೀಡಿದಲ್ಲಿ ಗೆಲುವಿನ ಕನಸು ನನಸಾಗುತ್ತದೆ. ರವಿ ಬಿಷ್ಣೋಯಿ ತಮ್ಮ ಲಯವನ್ನು ಕಂಡು ಕೊಂಡು ಗೆಲುವಿನಲ್ಲಿ ಮಿಂಚಬೇಕಿದೆ. ಆಕಾಶ್ ದೀಪ್, ಆವೇಶ್ ಖಾನ್ ಅವರು ಬಿಗುವಿನ ಲೈನ್ ಹಾಗೂ ಲೆಂಥ್ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡಬೇಕಿದೆ.
ಎಲ್‌ಎಸ್‌ಜಿ ಪರ ಹೆಚ್ಚು ವಿಕೆಟ್ ಪಡೆದ ಬೌಲರ್ಸ್
ಶಾರ್ದೂಲ್ ಠಾಕೂರ್, 5 ಪಂದ್ಯ, 09 ವಿಕೆಟ್
ದಿಗ್ವೇಶ್ ರಾಠಿ, 5 ಪಂದ್ಯ, 7 ವಿಕೆಟ್
ರವಿ ಬಿಷ್ಣೋಯಿ, 5 ಪಂದ್ಯ, 4 ವಿಕೆಟ್
ಸಂಭಾವ್ಯ ತಂಡ: ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ, ವಿಕೆಟ್ ಕೀಪರ್), ಆಯುಷ್ ಬಡೋನಿ, ಡೇವಿಡ್ ಮಿಲ್ಲರ್, ಅಬ್ದುಲ್ ಸಮದ್, ಶಾರ್ದೂಲ್ ಠಾಕೂರ್, ಅವೇಶ್ ಖಾನ್, ಆಕಾಶ್ ದೀಪ್, ದಿಗ್ವೇಶ್ ರಾಠಿ

ಸುದರ್ಶನ್ ಆಕರ್ಷಣೆ
ಗುಜರಾತ್ ಟೈಟನ್ಸ್ ತಂಡದಲ್ಲಿಯ ಸ್ಟಾರ್ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಈ ಆಟಗಾರರು ತಮ್ಮ ಅಮೋಘ ಲಯದಿಂದ ತಂಡಕ್ಕೆ ನೆರವಾಗಲಿದ್ದಾರೆ. ಆರಂಭಿಕರಾದ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಅಮೋಘ ಫಾರ್ಮ್‌ನಲ್ಲಿದ್ದಾರೆ. ಈ ಇಬ್ಬರು ಬ್ಯಾಟರ್‌ಗಳು ತಂಡಕ್ಕೆ ಬಿಗ್ ಆರಂಭ ನೀಡುವ ಅವಶ್ಯಕತೆ ಇದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಜೋಸ್ ಬಟ್ಲರ್ ಅವರ ಮೇಲೆ ಭರವಸೆ ಹೆಚ್ಚಿದೆ. ಇವರ ಬ್ಯಾಟ್ ಅಬ್ಬರಿಸುತ್ತಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್. ಶೆರ್ಫೇನ್ ರುದರ್ಫೋರ್ಡ್ ಉತ್ತಮ ಲಯದಲ್ಲಿದ್ದು, ತಂಡದ ಗೆಲುವಿನಲ್ಲಿ ಮಿಂಚುತ್ತಿದ್ದಾರೆ. ರಾಹುಲ್ ತೆವಟಿಯಾ, ಶಾರೂಖ್ ಖಾನ್, ಭರವಸೆಯನ್ನು ಮೂಡಿಸಿದ್ದಾರೆ.
ಗುಜರಾತ್ ಪರ ಅಧಿಕ ರನ್
ಬಿ ಸಾಯಿ ಸುದರ್ಶನ್, 5 ಪಂದ್ಯ, 273 ರನ್
ಜೋಸ್ ಬಟ್ಲರ್, 5 ಪಂದ್ಯ, 202 ರನ್
ಶುಭಮನ್ ಗಿಲ್, 5 ಪಂದ್ಯ, 148 ರನ್
ಭಾರತೀಯ ಬೌಲರ್‌ಗಳು ಉತ್ತಮ ಲಯದಲ್ಲಿದ್ದು, ಗುಜರಾತ್ ತಂಡಕ್ಕೆ ನೆರವಾಗುತ್ತಿದ್ದಾರೆ. ವೇಗಿಗಳಾದ ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ ಕೃಷ್ಣ ತಂಡ ತಮಗೆ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಇನ್ನು ಸ್ಪಿನ್ ಬೌಲರ್‌ಗಳಾಗಿ ಬಿ ಸಾಯಿ ಕಿಶೋರ್, ರಾಶೀದ್ ಖಾನ್, ಎದುರಾಳಿಗಳನ್ನು ಕಾಡುವ ಬೌಲರ್ಸ್. ಈ ಆಟಗಾರರು ಶಿಸ್ತು ಬದ್ಧ ದಾಳಿ ಸಂಘಟಿಸಿದಲ್ಲಿ ಗೆಲುವಿನ ಆಸೆ ಚಿಗುರುತ್ತದೆ.
ಹೆಚ್ಚು ವಿಕೆಟ್ ಪಡೆದ ಬೌಲರ್ಸ್
ಬಿ ಸಾಯಿ ಕಿಶೋರ್, 5 ಪಂದ್ಯ, 10 ವಿಕೆಟ್
ಮೊಹಮ್ಮದ್ ಸಿರಾಜ್, 5 ಪಂದ್ಯ, 10 ವಿಕೆಟ್
ಪ್ರಸಿದ್ಧ ಕೃಷ್ಣ, 5 ಪಂದ್ಯ, 10 ವಿಕೆಟ್
ಸಂಭಾವ್ಯ ತಂಡ: ಶುಭಮನ್ ಗಿಲ್ (ನಾಯಕ), ಬಿ ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಾಕೆ), ಶೆರ್ಫೇನ್ ರುದರ್‌ಫೋರ್ಡ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ವಾಷಿಂಗ್ಟನ್ ಸುಂದರ್, ರಶೀದ್ ಖಾನ್, ಆರ್ ಸಾಯಿ ಕಿಶೋರ್, ಮೊಹಮ್ಮದ್ ಸಿರಾಜ್, ಪ್ರಸೀದ್ ಕೃಷ್ಣ, ಅರ್ಷದ್ ಖಾನ್,
ಡ್ರೀಮ್ ಇಲೆವೆನ್ ತಂಡದಲ್ಲಿ ಯಾರು ನಾಯಕ?
ಡ್ರೀಮ್ ಇಲೆವೆನ್ ತಂಡದಲ್ಲಿ ಯಾವ ಸ್ಟಾರ್ ಟಗಾರರನ್ನು ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಉತ್ತರ ಇಲ್ಲಿದೆ. ಉಭಯ ತಂಡದಲ್ಲಿರುವ ವಿಕೆಟ್ ಕೀಪರ್ಸ್ ಜೋಸ್ ಬಟ್ಲರ್ ಹಾಗೂ ನಿಕೋಲಸ್ ಪೂರನ್ ಭರ್ಜರಿ ಫಾರ್ಮ್‌ನಲ್ಲಿದ್ದು, ಇವರನ್ನು ತಂಡದಲ್ಲಿ ಇಟ್ಟುಕೊಳ್ಳುವುದು ಬೆಸ್ಟ್ ಚಾಯ್ಸ್. ಇನ್ನು ಬ್ಯಾಟರ್ಸ್ ಆಗಿ ಮಿಚೆಲ್ ಮಾರ್ಷ್, ಡೇವಿಡ್ ಮಿಲ್ಲರ್, ಆಯುಷ್ ಬಡೋನಿ, ಬಿ ಸಾಯಿ ಸುದರ್ಶನ್ ಇವರನ್ನು ತಂಡದಲ್ಲಿ ಸ್ಥಾನ ನೀಡುವುದು ಉತ್ತಮ. ಈ ಆಟಗಾರರು ಪ್ರಸಕ್ತ ಐಪಿಎಲ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ. ಆಲ್‌ರೌಂಡರ್ ರೂಪದಲ್ಲಿ ಶಾರುಖ್ ಖಾನ್ ಅವರನ್ನು ಇಟ್ಟುಕೊಳ್ಳುವುದು ಉತ್ತಮ ಆಯ್ಕೆ. ಬೌಲರ್‌ಗಳಾಗಿ ಶಾರ್ದೂಲ್ ಠಾಕೂರ್, ಪ್ರಸಿದ್ಧ್ ಕೃಷ್ಣ, ಆರ್ ಸಾಯಿ ಕಿಶೋರ್, ದಿಗ್ವೇಶ್ ಸಿಂಗ್ ಇವರಿಗೆ ಮೊದಲ ಆಯ್ಕೆ ನೀಡಿದರೆ ಉತ್ತಮ.
ನಾಯಕನ ಸ್ಥಾನಕ್ಕಾಗಿ ಬಿ ಸಾಯಿ ಸುದರ್ಶನ್ ಹಾಗೂ ನಿಕೋಲಸ್ ಪೂರನ್ ಅವರಿಗೆ ಪಟ್ಟ ಕಟ್ಟುವುದು ಬೆಸ್ಟ್. ಇನ್ನು ಉಪನಾಯಕನ ಸ್ಥಾನಕ್ಕಾಗಿ ಮಿಚೆಲ್ ಮಾರ್ಷ್, ಜೋಸ್ ಬಟ್ಲರ್ ಉತ್ತಮ ಆಯ್ಕೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications