For Quick Alerts
ALLOW NOTIFICATIONS  
For Daily Alerts
 

IPL 2025 GT: ಐಪಿಎಲ್‌ ಆರಂಭಕ್ಕೂ ಮುನ್ನ ಗುಜರಾತ್ ತಂಡದ ಮಾಲೀಕರ ಬದಲಾವಣೆ

ಐಪಿಎಲ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಟೂರ್ನಿಗೂ ಮುನ್ನ ಗುಜರಾತ್ ಟೈಟನ್ಸ್ ಭಾರಿ ಸುದ್ದಿಯಲ್ಲಿದೆ. ಈ ಬಾರಿ ಜಿಟಿ ಸುದ್ದಿಯಲ್ಲಿರುವುದು ಆಟಗಾರರ ಪ್ರದರ್ಶನದಿಂದ ಅಲ್ಲವೇ ಅಲ್ಲ. ಆದರೆ ಬಾರಿ ತಂಡ ಸುದ್ದಿಯಲ್ಲಿರುವುದ ಮಾಲಿಕತ್ವದ ಬದಲಾವಣೆಯ ವಿಚಾರವಾಗಿ. 2021ರಲ್ಲಿ ಸಿವಿಸಿ ಕ್ಯಾಪಿಟಲ್ಸ್ ಪಾರ್ಟನರ್ ಕಂಪನಿ ಖರೀದಿಸಿತ್ತು. ಆದರೆ ಈಗ ಟೋರೆಂಟೋ ಹೆಸರಿನ ಭಾರತೀಯ ಮೂಲದ ಕಂಪನಿ, ಈ ತಂಡದಲ್ಲಿ ಹೆಚ್ಚಿನ ಪಾಲನ್ನು ಹೊಂದಿರಲಿದೆ. ಈ ಕಂಪನಿ ಈ ಬಾರಿಯ ಐಪಿಎಲ್‌ಗೂ ಚುಕ್ಕಾಣಿ ಹಿಡಿಯಲಿದೆ. ಆದರೆ ಐಪಿಎಲ್‌ ಗೌರ್ವನಿಂಗ್ ಕೌನ್ಸಿಲ್‌ನ ನಿರ್ಣಯಕ್ಕೆ ಕಾಯುತ್ತಿದೆ.

ಸಿವಿಸಿ ಮಾರಾಟ ಮಾಡಿದ ಪಾಲಿನ ಮೌಲ್ಯಮಾಪನ ಸೇರಿದಂತೆ ಇತರ ವಿವರ ಇನ್ನು ಬಹಿರಂಗ ಗೊಂಡಿಲ್ಲ. ಲೀಗ್‌ನ ಆಡಳಿತ ಮಂಡಳಿಯು ಅಂತಿಮ ಅನುಮೋದನೆ ನೀಡುವ ಮೊದಲು ಕಂಪನಿಗಳು ದಾಖಲೆ ಕೆಲಸವನ್ನು ಪೂರ್ತಿಗೊಳಿಸಿಕೊಳ್ಳುತ್ತವೆ. ಹೊಸ ಮಾಲೀಕರು 18ನೇ ಆವೃತ್ತಿಯ ಆರಂಭಕ್ಕೂ ಮುನ್ನವೇ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ.

IPL 2025 Gujarat Titans Set for Ownership Change as Torrent Group Takes Over from CVC Capitals

ಹೊಸ ಮಾಲೀಕರು ಯಾರು?

ಸಿವಿಸಿ 2021 ರಲ್ಲಿ 5625 ಕೋಟಿ ರೂ. ಪಾವತಿಸಿ ತಂಡವನ್ನು ಖರೀದಿಸಿತ್ತು. ಈ ತಂಡವು ತನ್ನ ಚೊಚ್ಚಲ ಋತುವಿನಲ್ಲಿ ಐಪಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ತಾನಾಡಿದ ಎರಡನೇ ಆವೃತ್ತಿಯಲ್ಲಿ ಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಹಿಂದಿನ ಆವೃತ್ತಿಯಲ್ಲಿ ಜಿಟಿ ಹೀನಾಯ ಪ್ರದರ್ಶನ ನೀಡಿತ್ತು. ಅಲ್ಲದೆ ಲೀಗ್‌ ಹಂತದಿಂದಲೇ ಟೂರ್ನಿಗೆ ಗುಡ್ ಬಾಯ್ ಹೇಳಿತ್ತು. ಜಿಟಿ ಐಪಿಎಲ್‌ಗೆ ಪದಾರ್ಪಣೆ ಮಾಡದಾಗಿನಿಂದಲೂ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನ್ನು ತನ್ನ ತವರು ನೆಲ ಎಂದು ಘೋಷಿಸಿತು.

ಟೋರೆಂಟೊ ಕಂಪನಿ ಭಾರತದಲ್ಲಿ ಫಾರ್ಮಸಿಟಿಕಲ್‌ ಉದ್ಯಮದಲ್ಲಿ ದೊಡ್ಡ ಹೆಸರನ್ನು ಮಾಡಿದೆ. ಇದು ಭಾರತದ ಅಗ್ರ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಒಂದಾಗಿದೆ. ಈ ಕಂಪನಿಯನ್ನು ಎರಡು ಪ್ರಮುಖ ಅಂಗ ಸಂಸ್ಥೆಗಳಾದ ಟೊರೆಂಟ್ ಪವರ್ ಮತ್ತು ಟೊರೆಂಟ್ ಫಾರ್ಮಾ ನಿರ್ವಹಿಸುತ್ತವೆ. ಟೊರೆಂಟ್ ಗ್ರೂಪ್ ಅಧ್ಯಕ್ಷ ಸುಧೀರ್ ಮೆಹ್ತಾ ಅವರ ಪುತ್ರ ಜಿನಾಲ್ ಮೆಹ್ತಾ, ಐಪಿಎಲ್ ವ್ಯವಹಾರಗಳನ್ನು ನೋಡಿಕೊಳ್ಳಲಿದ್ದಾರೆ. 2021ರಲ್ಲಿ ಬಿಸಿಸಿಐ ಕೇವಲ ಎರಡು ತಂಡಗಳಿಗೆ ಮಾತ್ರ ಬಿಡ್ ಕರಿದಿತ್ತು. ಆಗಲು ಸಹ ಟೋರೆಂಟೊ ಕಂಪನಿ ತಂಡ ಖರೀದಿಗೆ ಆಸಕ್ತಿ ತೋರಿತ್ತು. ಮಾಲೀಕತ್ವದ ಬದಲಾವಣೆಗಳು ಆಗಬೇಕಾದಲ್ಲಿ ಬಿಸಿಸಿಐ ಒಪ್ಪಿಗೆ ಬೇಕಾಗುತ್ತದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಒಪ್ಪಂದ ಪೂರ್ಣಗೊಳ್ಳಲಿದೆ ಎಂದು ಐಪಿಎಲ್‌ ಮೂಲಗಳು ತಿಳಿಸಿವೆ.

IPL 2025 Gujarat Titans Set for Ownership Change as Torrent Group Takes Over from CVC Capitals

ಗುಜರಾತ್ ಜೈಂಟ್ಸ್ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಈ ತಂಡದಲ್ಲಿ ಯುವ ಆಟಗಾರ ಶುಭಮನ್‌ ಗಿಲ್ ಇದ್ದು, ಇವರೇ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ಇನ್ನು ವಿಶ್ವದ ಖ್ಯಾತ ಸ್ಪಿನ್ ಬೌಲರ್‌ಗಳಲ್ಲಿ ಒಬ್ಬರಾಗಿರುವ ರಶೀದ್ ಖಾನ್ ತಂಡದ ಬಲವನ್ನು ಹೆಚ್ಚಿಸಿರುವ ಆಟಗರ. ಇನ್ನು ಸೌದಿಯಲ್ಲಿ ನಡೆದ ಹರಾಜಿನಲ್ಲಿ ಗುಜರಾತ್ ತಂಡ ಇಂಗ್ಲೆಂಡ್ ತಂಡದ ಸೀಮಿತ ಓವರ್‌ಗಳ ನಾಯಕ ಜೋಸ್ ಬಟ್ಲರ್ ಹಾಗೂ ಆರ್‌ಸಿಬಿ ತಂಡದಿಂದ ಬಿಡಲಾಗಿದ್ದ ಮೊಹಮ್ಮದ್ ಸಿರಾಜ್‌ ಅವರನ್ನು ತಂಡದಲ್ಲಿ ಹೊಂದಿದೆ.

Story first published: Tuesday, February 11, 2025, 16:42 [IST]
Other articles published on Feb 11, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+