IPL 2025: ಗುಜರಾತ್ ಟೈಟಾನ್ಸ್ ತಂಡದ ಸ್ಟಾರ್ ಬ್ಯಾಟರ್‌ಗೆ ಗಾಯ!
ಐಪಿಎಲ್ 2025 ರಲ್ಲಿ ಶನಿವಾರ ರಾತ್ರಿ ಗುಜರಾತ್ ಟೈಟಾನ್ಸ್ ತಂಡದ ಮೊದಲು ಗೆಲುವು ಸಾಧಿಸಿದೆ, ಹಾರ್ದಿಕ್ ಪಾಂಡ್ಯ ಮುನ್ನಡೆಸುತ್ತಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ಮಣಿಸಿದೆ. ಮುಂಬೈ ಇಂಡಿತಯನ್ಸ್ ತಂಡಕ್ಕೆ ಮಣ್ಣು ಮುಕ್ಕಿಸಿದ ಗುಜರಾತ್ ಗೆಲುವಿನ ಖಾತೆ ತೆರೆದಿದೆ. ಈ ಗೆಲುವಿನ ಹೊರತಾಗಿಯೂ, ಗುಜರಾತ್ ತಂಡಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ.
ಗುಜರಾತ್ ಟೈಟಾನ್ಸ್ ತಂಡದ ಪರ ಉತ್ತಮ ಫಾರ್ಮ್‌ನಲ್ಲಿರುವ ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ ಅವರು ಗಾಯಗೊಂಡಿದ್ದಾರೆ. ಈ ಗಾಯದಿಂದಾಗಿ ಅವರು ಐಪಿಎಲ್ 2025 ರ ಸೀಸನ್‌ನಿಂದ ಹೊರಗುಳಿಯುವ ಸಾಧ್ಯತೆಯಿದೆ.

ಶನಿವಾರ ಅಹಮಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2025 ರ 9ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಇನ್ನಿಂಗ್ಸ್ ವೇಳೆ ಸೂರ್ಯಕುಮಾರ್ ಒಂಬತ್ತನೇ ಓವರ್‍ನಲ್ಲಿ ಡೀಪ್ ಮಿಡ್ ವಿಕೆಟ್‌ಗೆ ಚೆಂಡನ್ನು ಹೊಡೆದರು. ಇದನ್ನು ತಡೆಯಲು ಸಾಯಿ ಸುದರ್ಶನ್ ಮಾಡಿದರು. ಆದರೆ ಚೆಂಡನ್ನು ತಡೆಯುವಲ್ಲಿ ವಿಫಲವಾದರು. ಡೈವ್ ಮಾಡಿದಾಗ ಸಾಯಿ ಸುದರ್ಶನ್ ನೋವಿನಿಂದ ನರಳುತ್ತಾ ಬೌಂಡರಿಯ ಅಂಚಿನಲ್ಲಿ ಮಲಗಿದರು.
ಈ ಸಂದರ್ಭದಲ್ಲಿ ಸಾಯಿ ಸುದರ್ಶನ್ ತನ್ನ ಬಲಗಾಲುನ ಮಂಡಿರಜ್ಜು ಅನ್ನು ಬಿಗಿಯಾಗಿ ಹಿಡಿದುಕೊಂಡಿದ್ದರು. ತಕ್ಷಣ ಫಿಸಿಯೋ ಮೈದಾನಕ್ಕೆ ಸುದರ್ಶನ ಅವರನ್ನು ಪರೀಕ್ಷಿಸಿದರು. ಆದರೆ ತೀವ್ರ ನೋವಿನಿಂದಾಗಿ ಅವರು ಮೈದಾನ ತೊರೆಯಬೇಕಾಯಿತು. ಈ ಸಮಯದಲ್ಲಿ ಇಬ್ಬರು ಆಟಗಾರರ ನೆರವಿನಿಂದ ಸಾಯಿ ಸುದರ್ಶನ್ ಮೈದಾನದದಿಂದ ಹೊರ ನಡೆದರು.
ಸಾಯಿ ಸುದರ್ಶನ ಅವರ ಮಂಡಿರಜ್ಜು ಗಾಯವು ಗಂಭೀರವಾಗಿದ್ದರೆ, ಅವರು ಐಪಿಎಲ್ 2025 ರ ಸೀಸನ್‌ನ ಉಳಿದ ಪಂದ್ಯಗಳಿಂದ ಹೊರಗುಳಿಬಹುದು. ಆದರೆ, ಅವರ ಗಾಯದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಹೊರ ಬಂದಿಲ್ಲ. ಅವರ ಗಾಯದ ಸ್ವರೂಪ ಮತ್ತು ಅದು ಎಷ್ಟು ಗಂಭೀರವಾಗಿದೆ ಎಂಬುದನ್ನು ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಇನ್ನೂ ಹಂಚಿಕೊಂಡಿಲ್ಲ. ಆದರೆ, ಅವರು ಗಾಯಗೊಂಡಿರುವುದನ್ನು ನೋಡಿದರೆ, ಅವರು ಹೊರಗುಳಿಯವಬಹುದು. ಒಂದು ವೇಳೆ ಅವರು ಗುಜರಾತ್ ಟೈಟಾನ್ಸ್ ತಂಡದಿಂದ ಹೊರಗುಳಿದರೆ, ತಂಡದ ದೊಡ್ಡ ಹೊಡೆತ ಬೀಳಲಿದೆ. ಈಗಾಗಲೇ ಅವರು ಆಡಿರುವ ಎರಡು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ.
ಗುಜರಾತ್ ಟೈಟಾನ್ಸ್ ತಂಡ: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್‌ಕೀಪರ್), ಶೆರ್ಫೇನ್ ರುದರ್‌ಫೋರ್ಡ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಇಶಾಂತ್ ಶರ್ಮಾ, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಅನುಜ್ ರಾವತ್, ಮಹಿಪಾಲ್ ಲೊಮ್ರೋರ್, ಅರ್ಷದ್ ಖಾನ್, ಜಯಂತ್ ಯಾದವ್, ನಿಶಾಂತ್ ಸಿಂಧು, ಕುಲ್ವಂತ್ ಖೆಜ್ರೋಲಿಯಾ, ಕರೀಂ ಜನತ್, ಜೆರಾಲ್ಡ್ ಕೋಟ್ಜಿ, ಮಾನವ್ ಸುತಾರ್, ಕುಮಾರ್ ಕುಶಾಗ್ರಾ, ಗುರ್ನೂರ್ ಬ್ರಾರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications