For Quick Alerts
ALLOW NOTIFICATIONS  
For Daily Alerts
 

Unsung Hero: ಸಿಎಸ್‌ಕೆ ವಿರುದ್ಧ ಹರ್ಷಿತ್ ರಾಣಾ ಬೆಂಕಿ ಬೌಲಿಂಗ್ ಪ್ರದರ್ಶನ

ಶುಕ್ರವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸುನಿಲ್ ನರೈನ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಸದ್ದು ಮಾಡಿದರು. ಮತ್ತೊಂದೆಡೆ ಕೆಕೆಆರ್ ತಂಡದ ಯುವ ವೇಗದ ಬೌಲರ್ ಹರ್ಷಿತ್ ರಾಣಾ ಗಮನ ಸೆಳೆದರು. ಚೆಪಾಕ್ ಮೈದಾನದಲ್ಲಿ ಹರ್ಷಿತ್ ರಾಣಾ ಅವರ ಬೆಂಕಿ ಬೌಲಿಂಗ್ ಪ್ರದರ್ಶನವು ಕೋಲ್ಕತ್ತಾ ನೈಟ್ ರೈಡರ್ಸ್‌ 8 ವಿಕೆಟ್‌ಗಳಿಂದ ಸಿಎಸ್‌ಕೆ ತಂಡವನ್ನು ಮಣಿಸಿಲು ಸಾಧ್ಯವಾಯಿತು.

ಹರ್ಷಿತ್ ರಾಣಾ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆಯದೇ ಇರಬಹುದು. ಆದರೆ, ಅವರು 4 ಓವರ್‌ಗಳಲ್ಲಿ 16 ರನ್ ನೀಡಿ 2 ವಿಕೆಟ್ ಪಡೆದು ಸಿಎಸ್‌ಕೆ ತಂಡವನ್ನು ಕಟ್ಟಿ ಹಾಕಿದರು.

IPL 2025 Harshit Rana fiery bowling performance against CSK

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ 9 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಲಷ್ಟೇ ಶಕ್ತವಾಯಿತು. ಕೆಕೆಆರ್ 10.1 ಓವರ್‌ಗಳಲ್ಲಿ 107 ರನ್ ಗಳಿಸುವ ಮೂಲಕ ಈ ಸರಳ ಗುರಿಯನ್ನು ಸಾಧಿಸಿತು.

ಕೆಕೆಆರ್ ತಂಡಕ್ಕೆ ಬಿಗ್ ಸ್ಕೋರ್ ನೀಡಲು ಯೋಜನೆ ಹಾಕಿಕೊಂಡಿದ ಸ್ಪೋಟಕ ಬ್ಯಾಟರ್ ರಚಿನ್ ರವೀಂದ್ರ ಅವರನ್ನು ರಾಣಾ ಬೇಗನೆ ಔಟ್ ಮಾಡಿದರು. ನಂತರ ರವಿಚಂದ್ರನ್ ಅಶ್ವಿನ್ ಅವರಿಗೆ ಹರ್ಷಿತ್ ರಾಣಾ ಪೆವಿಲಿಯನ್ ಹಾದಿ ತೋರಿಸಿದರು. ಈ ಮೂಲಕ ಅವರು ಕೆಕೆಆರ್ ಗೆಲುವಿಗೆ ಆರಂಭಿಕ ಅಡಿಪಾಯ ಹಾಕಿದರು.

ಹರ್ಷಿತ್ ರಾಣಾ ತಮ್ಮ ಮಾರಕ ಬೌಲಿಂಗ್ ಮೂಲಕ ವಿಕೆಟ್ ಪಡೆಯುವುದ ಮಾತ್ರವಲ್ಲದೆ, ಹೆಚ್ಚು ಡಾಟ್ ಬಾಲ್‌ಗಳನ್ನು ಹಾಕಿದರು. ಡಾಟ್ ಬಾಲ್‌ಗಳು ಹೆಚ್ಚಾದಂತೆ ಸಿಎಸ್‌ಕೆ ಬ್ಯಾಟರ್ಸ್ ಮೇಲಿನ ಒತ್ತಡವೂ ಹೆಚ್ಚಾಯಿತು. ಈ ವೇಳೆ ರನ್ ಗಳಿಸಲು ಮುಂದಾದ ಸಿಎಸ್‌ಕೆ ಬ್ಯಾಟರ್ಸ್ ವಿಕೆಟ್ ಕಳೆದುಕೊಂಡರು. ಹರ್ಷಿತ್ ರಾಣಾ ಒಟ್ಟು 17 ಡಾಟ್ ಬಾಲ್‌ಗಳನ್ನು ಹಾಕಿ ಸಿಎಸ್‌ಕೆ ತಂಡವನ್ನು ಒತ್ತಡದಲ್ಲಿ ಸಿಲುಕಿಸಿದರು.

ಮತ್ತೊಂದೆಡೆ ಸುನಿಲ್ ನರೈನ್ ತಮ್ಮ ಸ್ಪಿನ್ ಬೌಲಿಂಗ್ ಮಾಡಿದರು. ಅವರು 4 ಓವರ್‌ಗಳಲ್ಲಿ 13 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದು ಮಿಂಚಿದರು. ರಾಹುಲ್ ತ್ರಿಪಾಠಿ (16), ರವೀಂದ್ರ ಜಡೇಜ (0) ಮತ್ತು ಎಂಎಸ್ ಧೋನಿ (1) ಅವರನ್ನು ಔಟ್ ಮಾಡುವಲ್ಲಿ ನರೈನ್ ಯಶಸ್ವಿಯಾದರು.

ಇದರೊಂದಿಗೆ ನರೈನ್ ಅವರು ಕೆಕೆಆರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಲ್ಲದೆ, ಬ್ಯಾಟಿಂಗ್‌ನಲ್ಲಿಯೂ ಅವರು ಅಬ್ಬರಿಸಿದರು. ನರೈನ್ 244 ರನ್‌ಗಳ ಸ್ಟ್ರೈಕ್ ರೇಟ್‌ನಲ್ಲಿ 18 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್‌ಗಳ ನೆರವಿನಿಂದ 44 ರನ್‌ಗಳನ್ನು ಬಾರಿಸಿದರು.

Story first published: Saturday, April 12, 2025, 1:04 [IST]
Other articles published on Apr 12, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+