GT vs SRH IPL 2025: ಸನ್, ಟೈಟಾನ್ಸ್ ನಡುವೆ ಫೈಟ್: ಹೈದರಾಬಾದ್‌ಗೆ ಜಯ ಒಂದೇ ಮಂತ್ರ
ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ಹಾಗೂ 9ನೇ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಅಹಮದಾಬಾದ್‌ನಲ್ಲಿ ಮೈದಾನ ಪ್ರವೇಶಿಸಲಿವೆ. ಗುಜರಾತ್ ಗೆಲುವಿನ ಟ್ರ್ಯಾಕ್‌ಗೆ ಮರಳಿ ಪ್ಲೇ ಆಫ್‌ಗೆ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದೆ. ಇನ್ನು ಸನ್ ತಂಡ ಪ್ಲೇ ಆಫ್‌ಗೆ ಪ್ರವೇಶಿಸಬೇಕಾದಲ್ಲಿ ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.
ಗುಜರಾತ್ ಹಾಗೂ ಸನ್ ತಂಡಗಳಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಗುಜರಾತ್ ತಂಡದಲ್ಲಿರುವ ಅನುಭವಿ ಆಟಗಾರರು ತಂಡಕ್ಕೆ ನೆರವಾಗುತ್ತಿದ್ದಾರೆ. ಇನ್ನು ಹೈದರಾಬಾದ್ ತಂಡದ ಸ್ಟಾರ್ ಪ್ಲೇಯರ್ಸ್ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದು, ತಂಡದ ಚಿಂತೆಯನ್ನು ಹೆಚ್ಚಿಸಿದೆ. ಈಗಾಗಲೇ ಉಭಯ ಆಟಗಾರರು ಈಗಾಗಲೇ ಒಟ್ಟು 6 ಬಾರಿ ಮುಖಾಮುಖಿ ಆಗಿದ್ದು, 4 ಬಾರಿ ಗುಜರಾತ್ ಜಯ ಸಾಧಿಸಿದೆ. ಈ ಮೈದಾನದಲ್ಲಿ ಈಗಾಗಲೇ 39 ಪಂದ್ಯಗಳನ್ನು ಆಡಲಾಗಿದ್ದು, ಮೊದಲು ಬ್ಯಾಟ್ ಮಾಡಿದ ತಂಡ 18 ಬಾರಿ, ಗುರಿಯನ್ನು ಬೆನ್ನಟ್ಟಿದ ತಂಡ 21 ಬಾರಿ ಜಯ ಸಾಧಿಸಿದೆ.

ಭರ್ಜರಿ ಲಯದಲ್ಲಿರುವ ಸ್ಟಾರ್ಸ್
ಗುಜರಾತ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ಸವಾಲಿನ ಮೊತ್ತವನ್ನು ಕಲೆ ಹಾಕಿದ್ರೂ ಸೋಲು ಕಂಡಿತ್ತು. ಟೈಟಾನ್ಸ್ ತಂಡದ ಆರಂಭಿಕರಾದ ಸಾಯಿ ಸುದರ್ಶನ್ ಹಾಗೂ ನಾಯಕ ಶುಭ್‌ಮನ್ ಗಿಲ್ ಭರ್ಜರಿ ಜೊತೆಯಾಟವನ್ನು ನೀಡುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಜೋಸ್ ಬಟ್ಲರ್, ವಾಶಿಂಗ್ಟನ್ ಸುಂದರ್, ಶಾರೂಖ್ ಖಾನ್, ರಾಹುಲ್ ತೆವಟಿಯಾ ಸ್ಥಿರ ಬ್ಯಾಟಿಂಗ್ ನೆರವಿನಿಂದ ತಂಡಕ್ಕೆ ನೆರವಾಗಬೇಕಿದೆ. ಈ ಸ್ಟಾರ್ ಆಟಗಾರರು ಎದುರಾಳಿ ಬೌಲರ್‌ಗಳನ್ನು ಕಾಡಿದ್ದೇ ಆದಲ್ಲಿ ಬಿಗ್ ಸ್ಕೋರ್ ಕನಸು ನನಸಾಗುತ್ತದೆ.
ಇನ್ನು ಟೈಟಾನ್ಸ್ ತಂಡದ ಬೌಲರ್‌ಗಳು ಭರ್ಜರಿ ಲಯದಲ್ಲಿದ್ದಾರೆ. ಹೊಸ ಚೆಂಡಿನೊಂದಿಗೆ ಮೊಹಮ್ಮದ್ ಸಿರಾಜ್ ಹೊಸ ಚೆಂಡಿನಿಂದ ದಾಳಿ ನಡೆಸಲಿದ್ದಾರೆ. ಇವರ ಜೊತೆಗೆ ಯಾರು ಹೊಸ ಚೆಂಡಿನ್ನು ಹಂಚಿಕೊಳ್ಳುತ್ತಾರೆ ಎಂಬ ಬಗ್ಗೆ ಕುತೂಹಲ ಹೆಚ್ಚಿದೆ. ಮಿಡ್ಲ್ ಓವರ್‌ಗಳಲ್ಲಿ ಪ್ರಸಿದ್ಧ ಕೃಷ್ಣಾ, ರಶೀದ್ ಖಾನ್ ತಮ್ಮ ಬಿಗುವಿನ ದಾಳಿಯ ಮೂಲಕ ಕಾಡಬೇಕಿದೆ.

ಲಯಕ್ಕೆ ಮರಳಬೇಕಿದೆ ಬ್ಯಾಟರ್ಸ್
ಚೆನ್ನೈ ವಿರುದ್ಧ ಜಯ ಸಾಧಿಸಿ ಆತ್ಮವಿಶ್ವಾಸದಲ್ಲಿರುವ ಸನ್ ತಂಡ ಗುಜರಾತ್ ಟೈಟನ್ಸ್ ತಂಡದ ಸವಾಲು ಎದುರಿಸಲಿದೆ. ಸನ್ ತಂಡದ ಆರಂಭಿಕರಾದ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ಅಂದಾಗ ದೊಡ್ಡ ಇನಿಂಗ್ಸ್ ಕಟ್ಟಲು ಸಾಧ್ಯ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್, ಹ್ಯಾನ್ರಿಕ್ ಕ್ಲಾಸೇನ್ ಮಿಡ್ಲ್ ಓವರ್‌ಗಳಲ್ಲಿ ರನ್ ವೇಗಕ್ಕೆ ಚುರುಕು ಮುಟ್ಟಿಸಿ, ವಿಕೆಟ್ ಕಾಯ್ದುಕೊಂಡು ಬ್ಯಾಟ್ ಮಾಡಬೇಕಿದೆ. ಇನ್ನು ಅಭಿನವ್ ಮನೋಹರ್ ಸಹ ತಂಡದ ನಂಬಿಕೆಗೆ ಪೂರಕವಾಗಿ ಆಡಬೇಕಿದೆ. ಇನ್ನು ಸನ್ ತಂಡದ ಬೌಲಿಂಗ್ ಲೈನ್ ಅಪ್‌ನಲ್ಲಿ ಪ್ಯಾಟ್ ಕಮಿನ್ಸ್, ಮೊಹಮ್ಮದ್ ಶಮಿ ಎದುರಾಳಿಗಳನ್ನು ಕಾಡಬೇಕಿದೆ. ಇನ್ನು ಸ್ಪಿನ್ ಬೌಲರ್‌ಗಳು ವಿಕೆಟ್ ಬೇಟೆ ನಡೆಸಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications