For Quick Alerts
ALLOW NOTIFICATIONS  
For Daily Alerts
 

IPL 2025 Orange Cap: ಇಂದು ಆರೆಂಜ್‌ ಕ್ಯಾಪ್‌ಗೆ ಸಿಗುತ್ತಾರಾ ನೂತನ ಅಧಿಪತಿ?

ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಏಪ್ರಿಲ್‌ 27 ಸೂಪರ್‌ ಸಂಡೆ, ಅಭಿಮಾನಿಗಳನ್ನು ರಂಜಿಸಲಿದೆ. ಈ ವೇಳೆ ಅಭಿಮಾನಿಗಳ ಕಣ್ಣುಗಳು ಸೂಪರ್‌ ಸ್ಟಾರ್ ಬ್ಯಾಟರ್‌ಗಳ ಮೇಲೆ ಕಣ್ಣು ನೆಟ್ಟಿರಲಿವೆ. ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಸ್ಟಾರ್‌ ಬ್ಯಾಟರ್‌ಗಳು ಅಬ್ಬರದ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದಲ್ಲಿ, ಇಂದೇ ಆರೆಂಜ್‌ ಕ್ಯಾಪ್‌ಗೆ ಹೊಸ ಅಧಿಪತಿ ಸಿಗುವ ಸಾಧ್ಯತೆ ಇದೆ.

ಪ್ರಸಕ್ತ ಐಪಿಎಲ್‌ ರೋಚಕತೆ ಹೆಚ್ಚಿಸಿದ್ದು, ಈಗಾಗಲೇ ಎಲ್ಲ ತಂಡಗಳು ಕನಿಷ್ಠ 8 ಪಂದ್ಯಗಳನ್ನು ಆಡಿವೆ. ಈ ವೇಳೆ ಸ್ಟಾರ್ ಆಟಗಾರರು ತಮ್ಮ ಸ್ಥಿರ ಪ್ರದರ್ಶನದ ಬಲದಿಂದ ತಂಡದ ಗೆಲುವಿನಲ್ಲಿ ಮಿಂಚುತ್ತಿದ್ದಾರೆ. ಈ ಆಟಗಾರರ ವೈಯಕ್ತಿಕ ಸಾಧನೆಯ ಮೇಲೆ ಅಭಿಮಾನಿಗಳ ಕಣ್ಣು ನೆಟ್ಟಿರಲಿದೆ. ಭಾನುವಾರ ಮೂವರು ಸೂಪರ್ ಸ್ಟಾರ್ ಆಟಗಾರರು ಮೈದಾನ ಪ್ರವೇಶಿಸಲಿದ್ದು, ಅಬ್ಬರದ ಆಟವನ್ನು ಪ್ರದರ್ಶಿಸುವ ಮೂಲಕ ಅಭಿಮಾನಿಗಳ ಮನ ಗೆಲ್ಲುವ ಪ್ಲ್ಯಾನ್‌ ಮಾಡಿಕೊಂಡಿದ್ದಾರೆ.

IPL 2025 Kohli Pooran Suryakumar Chase Orange Cap Leader Sudharsan on Super Sunday

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಹಲವು ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಅದರಲ್ಲಿ ಎಲ್ಲರ ಕಣ್ಣುಗಳು ಆ ಎರಡು ಪ್ರಶಸ್ತಿಯ ಮೇಲೆ ನೆಟ್ಟಿರಲಿವೆ. ಅವುಗಳೆಂದರೆ ಆರೆಂಜ್ ಕ್ಯಾಪ್‌ ಹಾಗೂ ಪರ್ಪಲ್‌ ಕ್ಯಾಪ್‌. ಈ ಎರಡೂ ಕ್ಯಾಪ್‌ಗಳನ್ನು ಪಡೆದು ರಾಜನಂತೆ ಮೆರೆಯಲು ಆಟಗಾರರು ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಆರೆಂಜ್ ಕ್ಯಾಪ್‌ ಅತಿ ಹೆಚ್ಚು ರನ್‌ ಬಾರಿಸಿದ ಆಟಗಾರರಿಗೆ ನೀಡಲಾಗುತ್ತದೆ. ಇನ್ನು ಗರಿಷ್ಠ ವಿಕೆಟ್‌ ಪಡೆದ ಪ್ಲೇಯರ್‌ಗೆ ಪರ್ಪಲ್‌ ಕ್ಯಾಪ್‌ ನೀಡಲಾಗುತ್ತದೆ. ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿರುವ ಮೂವರು ಆಟಗಾರರು ಕಣ್ಣು ನೆಟ್ಟಿದ್ದಾರೆ.

ಆರೆಂಜ್‌ ಕ್ಯಾಪ್‌ಗೆ ಸುದರ್ಶನ್ ಅಧಿಪತಿ

ಆರೆಂಜ್‌ ಕ್ಯಾಪ್‌ಗೆ ಸದ್ಯ ಗುಜರಾತ್‌ ಟೈಟನ್ಸ್ ತಂಡದ ಸಾಯಿ ಸುದರ್ಶನ್‌ ಅಧಿಪತಿ. ಇವರು ಪ್ರಸಕ್ತ ವರ್ಷ ಅಮೋಘ ಫಾರ್ಮ್‌ನಲ್ಲಿದ್ದು ತಂಡದ ಗೆಲುವಿನಲ್ಲಿ ಮಿಂಚುತ್ತಿದ್ದಾರೆ. ಸಾಯಿ ಆಡಿದ 8 ಪಂದ್ಯಗಳಲ್ಲಿ 5 ಅರ್ಧಶತಕ ಸೇರಿದಂತೆ 417 ರನ್‌ ಕಲೆ ಹಾಕಿದ್ದಾರೆ. ಇವರ ಕ್ಯಾಪ್‌ ಪಡೆಯಲು ಭಾನುವಾರ ಮೂವರು ಜಿದ್ದು ನಡೆಸಲಿದ್ದಾರೆ.

ವಿರಾಟ್‌ ಕೊಹ್ಲಿ

ಪ್ರಸಕ್ತ ಐಪಿಎಲ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿರುವ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಗೂ ಮೊದಲ ಸ್ಥಾನ. ವಿರಾಟ್‌ ಈ ಬಾರಿ ಸ್ಥಿರ ಪ್ರದರ್ಶನ ನೀಡುತ್ತಿದ್ದು ತಂಡದ ಗೆಲುವಿನಲ್ಲಿ ಮಿಂಚುತ್ತಿದ್ದಾರೆ. ಇವರು ಆಡಿದ 9 ಪಂದ್ಯಗಳಲ್ಲಿ 5 ಅರ್ಧಶತಕ ಸೇರಿದಂತೆ 392 ರನ್‌ ಕಲೆ ಹಾಕಿದ್ದಾರೆ. ಇವರ ಮುಡಿಗೆ ಆರೆಂಜ್‌ ಕ್ಯಾಪ್‌ ಸೇರಬೇಕಾದಲ್ಲಿ ಕನಿಷ್ಠ ಭಾನುವಾರ 26 ರನ್‌ ಬಾರಿಸುವ ಅವಶ್ಯಕತೆ ಇದೆ. ಇನ್ನು ವಿರಾಟ್‌ ಭಾನುವಾರ ಸಂಜೆ (7.30ಕ್ಕೆ) ಮೈದಾನ ಪ್ರವೇಶಿಸಲಿದ್ದು, ಈ ವೇಳಿಗಾಗಲೇ ಎಷ್ಟು ರನ್‌ ಬಾರಿಸಿದರೆ ಆರೆಂಜ್ ಕ್ಯಾಪ್‌ ಸಿಗಲಿದೆ ಎಂಬ ಚಿತ್ರಣ ಸಿಗಲಿದೆ.

ಪೂರನ್‌, ಸೂರ್ಯ ಕಣಕ್ಕೆ

ಪ್ರಸಕ್ತ ಐಪಿಎಲ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿರುವ ಆಟಗಾರರ ಪಟ್ಟಿಯಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ನಿಕೋಲಸ್‌ ಪೂರನ್‌ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಿಕೋಲಸ್ ಪೂರನ್ ಸೇರಿದ್ದಾರೆ. ಈ ಆಟಗಾರರು ಭಾನುವಾರ ಮಧ್ಯಾಹ್ನ ಅಂಗಳ ಪ್ರವೇಶಿಸಲಿದ್ದಾರೆ. ನಿಕೋಸ್‌ ಅತಿ ಹೆಚ್ಚು ರನ್‌ ಕಲೆ ಹಾಕಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಇವರು 377 ರನ್‌ ಸಿಡಿಸಿದ್ದಾರೆ. ಇನ್ನು ಸೂರ್ಯಕುಮರ್ ಯಾದವ್‌ ಮುಂಬೈ ಇಂಡಿಯನ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದು, ಇವರು 373 ರನ್‌ ಸಿಡಿಸಿದ್ದಾರೆ. ಇವರಿಗೂ ಆರೆಂಜ್‌ ಕ್ಯಾಪ್‌ ಪಡೆಯುವ ಕನಸು ಇದೆ. ಇಂದು ರಾತ್ರಿಯ ವೇಳೆಗೆ ಆರೆಂಜ್‌ ಕ್ಯಾಪ್‌ ಯಾರು ಪಡೆಯುತ್ತಾರೆ ಎಂಬುದು ಕುತೂಹಲ ಹೆಚ್ಚಿಸಿದೆ.

Story first published: Sunday, April 27, 2025, 13:17 [IST]
Other articles published on Apr 27, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+