IPL 2025 Captains List: ಐಪಿಎಲ್‌ನ 10 ತಂಡಗಳು ನಾಯಕರ ಪಟ್ಟಿ ಇಲ್ಲಿದೆ
ಮಾರ್ಚ್ 22 ರಂದು ಭಾರತದಲ್ಲಿ ಐಪಿಎಲ್ ರಂಗು ಆರಂಭವಾಗಲಿದೆ. ಈ ಮೆಗಾ ಲೀಗ್‌ನಲ್ಲಿ ಭಾಗವಹಿಸಲು ದೇಶ ವಿದೇಶದ ಆಟಗಾರರು ಕಾಯುತ್ತಿದ್ದಾರೆ. ಈ ಲೀಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆಯಲು ಆಟಗಾರರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ವೇಳೆ ತಂಡಗಳು ತಮ್ಮ ಕ್ಯಾಂಪ್ ಆರಂಭಿಸಿವೆ. ಇಷ್ಟು ದಿನಗಳಿಂದ ಕಾಡುತ್ತಿದ್ದ ಆ ಒಂದು ಪ್ರಶ್ನೆಗೆ ಉತ್ತರವೂ ಸಿಕ್ಕಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಅಕ್ಷರ್ ಪಟೇಲ್ ಮುನ್ನಡೆಸಲಿದ್ದಾರೆ. ಈ ಮೆಗಾ ಟೂರ್ನಿಯಲ್ಲಿ ಯಾವ ತಂಡವನ್ನು ಯಾರು ಮುನ್ನಡೆಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೇಲೆ ಹಲವು ಆಟಗಾರರು ಕಣ್ಣು ನೆಟ್ಟಿದ್ದರು. ಆದರೆ ಮ್ಯಾನೇಜ್ಮೆಂಟ್ ಭವಿಷ್ಯದ ದೃಷ್ಟಿಯಿಂದ ಅಕ್ಷರ್ ಪಟೇಲ್‌ಗೆ ಮಣೆ ಹಾಕಿದ್ದಾರೆ. ಈ ಮೂಲಕ ಕ್ಯಾಪ್ಟನ್ಸಿ ಪಟ್ಟದ ಮೇಲೆ ಕಣ್ಣು ನೆಟ್ಟಿದ್ದ ಆಟಗಾರರಿಗೆ ನಿರಾಸೆ ಆಗಿದೆ. ಈ ಪಟ್ಟಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ ಹಾಗೂ ಫಾಫ್ ಡುಪ್ಲೇಸಿಸ್ ಸಹ ಕಣ್ಣು ನೆಟ್ಟಿದ್ದರು. ಆದರೆ ಇವರನ್ನು ಎಲ್ಲ ಪಕಕ್ಕೆ ಒತ್ತಿ ಅಕ್ಷರ್ ಪಟೇಲ್ ಈ ಸ್ಥಾನವನ್ನು ಅಲಂಕರಿಸಿದ್ದಾರೆ.

ರಜತ್ ಪಟಿದಾರ, ಆರ್‌ಸಿಬಿ
ಆರ್‌ಸಿಬಿ ತಂಡ ತನ್ನ ನಾಯಕನಾಗಿ ಯುವ ಆಟಗಾರ ರಜತ್ ಪಟಿದಾರ್ ಅವರನ್ನು ಆಯ್ಕೆ ಮಾಡಿದೆ. ಈ ಆವೃತ್ತಿಯಲ್ಲಿ ತಂಡದ ಪಟ್ಟವನ್ನು ವಿರಾಟ್ ಕೊಹ್ಲಿಗೆ ಕಟ್ಟಬಹುದು ಎಂಬ ಚರ್ಚೆಗಳು ಇದ್ದವು. ಆದರೆ ಮ್ಯಾನೇಜ್ಮೆಂಟ್ ಯುವ ಆಟಗಾರನಿಗೆ ಮಣೆ ಹಾಕಿದೆ.
ರಿಷಭ್ ಪಂತ್, ಎಲ್‌ಎಸ್‌ಜಿ
ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಕೈ ಬಿಟ್ಟಿದ್ದ ರಿಷಭ್ ಪಂತ್ ಅವರಿಗೆ ಎಲ್‌ಎಸ್‌ಜಿ ಭಾರೀ ಮೊತ್ತ ನೀಡಿ ತಂಡಕ್ಕೆ ಸೇರಿಸಿಕೊಂಡಿತು. ಈ ವೇಳೆ ಇವರಿಗೆ ಪಟ್ಟ ಕಟ್ಟ ಬಹುದು ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಅದರಂತೆ ಪಂತ್ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಲಕ್ನೋ ತಂಡವನ್ನು ಮುನ್ನಡೆಸಲಿದ್ದಾರೆ.
ಹಾರ್ದಿಕ್ ಪಾಂಡ್ಯ, ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್ ತನ್ನ ತಂಡದಲಿದ್ದ ಸ್ಟಾರ್ ಆಟಗಾರರನ್ನು ಬಿಟ್ಟು ಮತ್ತೆ ಹಾರ್ದಿಕ್ ಪಾಂಡ್ಯ ಅವರಿಗೆ ಮಣೆ ಹಾಕಿದೆ. ಕಳೆದ ಪಬಾರಿ ,ಮುಂಬೈ ಕಳಪೆ ಪ್ರದರ್ಶನ ನೀಡಿತ್ತು. ಅಲ್ಲದೆ ಪ್ಲೇ ಆಫ್‌ಗೂ ಅವಕಾಶವನ್ನು ಪಡೆದಿರಲಿಲ್ಲ.
ಋತುರಾಜ್ ಗಾಯಕ್ವಾಡ್, ಚೆನ್ನೈ
ಕಳೆದ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದ ಭರವಸೆಯ ಆಟಗಾರ ಋತುರಾಜ್ ಗಾಯಕ್ವಾಡ್ ಅವರೇ, ಈ ಬಾರಿಯೂ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರ ತಂಡದಲ್ಲಿರುವ ಮಹೇಂದ್ರ ಸಿಂಗ್ ಧೋನಿ ಇವರ ಮಾರ್ಗದರ್ಶಕ.
ಅಜಿಂಕ್ಯ ರಹಾನೆ, ಕೆಕೆಆರ್
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ವೆಂಕಟೇಶ್ ಅಯ್ಯರ್‌ಗೆ ಪಟ್ಟವನ್ನು ಕಟ್ಟುತ್ತದೆ ಎಂಬ ಮಾತುಗಳು ಹರಿದಾಡುತ್ತಿದ್ದವು. ಆದರೆ ಕೆಕೆಆರ್ ಮ್ಯೇನೆಜ್ಮೆಂಟ್ ಅನುಭವಿ ಹಾಗೂ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಮ್ ಇಂಡಿಯಾವನ್ನು ಹಲವು ಸರಣಿಳಲ್ಲಿ ಮುನ್ನಡೆಸಿರುವ ರಹಾನೆಗೆ ನೀಡಲಾಗಿದೆ.
ಪ್ಯಾಟ್ ಕಮಿನ್ಸ್, ಎಸ್‌ಆರ್‌ಎಚ್
ಸನ್‌ರೈಸರ್ಸ್ ಹೈದರಾಬಾದ್ ತಂಡ ತನ್ನ ಹಳೆಯ ನಾಯಕನಿಗೆ ಮಣೆ ಹಾಕಿದೆ. ಪ್ಯಾಟ್ ಕಮಿನ್ಸ್ ಅವರ ಮುಂದಾಳತ್ವದಲ್ಲಿ ಸನ್ ತಂಡ ಅಮೋಘ ಪ್ರದರ್ಶನ ನೀಡಿ ಫೈನಲ್‌ಗೆ ಅರ್ಹತೆ ಪಡೆದಿತ್ತು. ಆದರೆ ಫೈನಲ್‌ನಲ್ಲಿ ಕೆಕೆಆರ್ ವಿರುದ್ಧ ನಿರಾಸೆ ಅನುಭವಿಸಿತು.
ಶುಭಮನ್ ಗಿಲ್, ಗುಜರಾತ್
ಟೀಮ್ ಇಂಡಿಯಾದ ಭವಿಷದ ನಾಯಕ ಎಂದೇ ಗುರುತಿಸಿಕೊಳ್ಳುತ್ತಿರುವ ಶುಭಮನ್ ಗಿಲ್ ಅವರಿಗೆ ಗುಜರಾತ್ ಟೈಟನ್ಸ್ ಪಟ್ಟವನ್ನು ಕಟ್ಟಿದೆ. ಈ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ದು, ಈ ತಂಡವನ್ನು ಗಿಲ್ ಮುನ್ನಡೆಸುತ್ತಿದ್ದಾರೆ.
ಸಂಜು ಸ್ಯಾಮ್ಸನ್, ರಾಜಸ್ಥಾನ
ರಾಜಸ್ಥಾನ ರಾಯಲ್ಸ್ ತಂಡವನ್ನು ಸಂಜು ಸ್ಯಾಮ್ಸನ್ ಮುನ್ನಡೆಸುತ್ತಿದ್ದಾರೆ. ಇವರ ಮುಂದಾಳತ್ವದಲ್ಲಿ ತಂಡ ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿದೆ.
ಶ್ರೇಯಸ್ ಅಯ್ಯರ್, ಪಂಜಾಬ್
ಪಂಜಾಬ್ ಕಿಂಗ್ಸ್ ತಂಡಕ್ಕೆ ಈ ಬಾರಿ ಚಾಂಪಿಯನ್ ನಾಯಕ ಸಿಕ್ಕಿದ್ದಾರೆ. ಇವರು ಕಳೆದ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ತೊಡಿಸಿದ್ದರು. ಈಗ ಇವರು ಭಾರೀ ಮೊತ್ತವನ್ನು ಜೇಬಿಗೆ ಹಾಕಿಕೊಂಡು ಪಂಜಾಬ್ ತಂಡ ಸೇರಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications