IPL 2025: ಹೈದರಾಬಾದ್‌ಗೆ ಲಕ್ನೋ ಸವಾಲು; ಗೆಲುವಿಗೆ ಖಾತೆ ತೆರೆಯುತ್ತಾ ಪಂತ್ ಪಡೆ?
ಐಪಿಎಲ್ 2025ರ ಏಳನೇ ಪಂದ್ಯ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಐಪಿಎಲ್ 2025ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಜಯಗಳಿಸುವ ಮೂಲಕ ಪ್ಯಾಟ್ ಕಮ್ಮಿನ್ಸ್ ಮುನ್ನಡೆಸುತ್ತಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಗೆಲುವು ಕಂಡಿದೆ. ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲ ಪಂದ್ಯ ಸೋತಿರುವ ರಿಷಭ್ ಪಂತ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಗೆಲುವಿನ ಹುಡುಕಾಟದಲ್ಲಿದೆ.
ಮೊದಲ ಪಂದ್ಯದಿಂದಲೇ ಸನ್‌ರೈಸರ್ಸ್ ತಂಡವು ಅಬ್ಬರದ ಪ್ರದರ್ಶನ ನೀಡಿದರೆ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲುವ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ಸೋತಿದೆ. ಲಕ್ನೋ ತಂಡ ವೇಗದ ಬೌಲರ್‌ಗಳ ಸಮಸ್ಯೆಯನ್ನು ಎದುರಿಸುತ್ತಿದೆ. ಹೈದರಾಬಾದ್ ತಮ್ಮ ತವರು ನೆಲದಲ್ಲಿ ಎದುರಾಳಿ ತಂಡಕ್ಕೆ ದೊಡ್ಡ ಸವಾಲಾಗಿದೆ.

ಸನ್‌ರೈಸರ್ಸ್ ಹೈದರಾಬಾದ್ ತಂಡ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದೆ. ಐಪಿಎಲ್ 2025ರ ಡೈನಾಮಿಕ್ ಬ್ಯಾಟರ್ ಇಶಾನ್ ಕಿಶನ್ ಸೇರ್ಪಡೆಯಿಂದಾಗಿ ಹೈದರಾಬಾದ್ ಬ್ಯಾಟಿಂಗ್ ಮತ್ತಷ್ಟು ಬಲಿಷ್ಠಗೊಂಡಿದೆ. ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಹೆನ್ರಿಚ್ ಕ್ಲಾಸೆನ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಕೂಡ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಈ ದೈತ್ಯ ಬ್ಯಾಟಿಂಗ್ ಪಡೆಯನ್ನು ಕಟ್ಟಿ ಹಾಕುವುದು ಲಕ್ನೋ ತಂಡದ ಬೌಲರ್‍ಗಳಿಗೆ ಸವಾಲಾಗಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿಯೂ ಸ್ಪೋಟಕ ಬ್ಯಾಟರ್‍ಗಳಿದ್ದಾರೆ. ಈ ಸ್ಟಾರ್ ಆಟಗಾರರೇ ಲಕ್ನೋ ತಂಡದ ಬಲವಾಗಿದ್ದಾರೆ. ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ರಿಷಭ್ ಪಂತ್ ಮತ್ತು ಡೇವಿಡ್ ಮಿಲ್ಲರ್ ಅವಂರತಹ ಬ್ಯಾಟರ್‍ಗಳಿದ್ದಾರೆ. ಇನ್ನು ಅನುಭವಿ ವೇಗಿಗಳ ಅನುಪಸ್ಥಿತಿ ಲಕ್ನೋ ತಂಡವನ್ನು ಕಾಡುತ್ತಿದೆ. ರವಿ ಬಿಷ್ಣೋಯ್, ಮಣಿಮಾರನ್ ಸಿದ್ಧಾರ್ಥ್ ಮತ್ತು ದಿಗ್ವೇಶ್ ರಥಿ ಅವರಂತಹ ಸ್ಪಿನ್ನರ್ಸ್ ಎಸ್‌ಆರ್‍ಹೆಚ್ ತಂಡದ ಆಕ್ರಮಣಕಾರಿ ಬ್ಯಾಟಿಂಗ್ ವಿಭಾಗವನ್ನು ಕಟ್ಟಿ ಹಾಕಬೇಕಿದೆ. ಈ ಬಾರಿ ಲಕ್ನೋ ಸೇರಿರುವ ಟೀಮ್ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ.
ಹೆಡ್ ಟು ಹೆಡ್
ಐಪಿಎಲ್‌ನಲ್ಲಿ ಎಸ್‌ಆರ್‍ಹೆಚ್ ವಿರುದ್ಧ ಎಸ್‌ಸ್‌ಜಿ ಮೇಲುಗೈ ಸಾಧಿಸಿದೆ. ಎಸ್‌ಆರ್‌ಹೆಚ್ ಮತ್ತು ಎಲ್‌ಎಸ್‌ಜಿ ನಡುವೆ ನಾಲ್ಕು ಪಂದ್ಯ ನಡೆದಿವೆ. ಎಸ್‌ಆರ್‍ಹೆಚ್ ವಿರುದ್ಧ ಆಡಿದ ನಾಲ್ಕು ಪಂದ್ಯಗಳಲ್ಲಿ ಎಲ್‌ಎಸ್‌ಜಿ ಮೂರರಲ್ಲಿ ಜಯ ಸಾಧಿಸಿದೆ. ಆದಾಗ್ಯೂ, ಎಸ್‌ಆರ್‌ಹೆಚ್ ತನ್ನ ತವರಿನಲ್ಲಿ ಒಂದು ಪಂದ್ಯವನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಐಪಿಎಲ್ 2024 ರಲ್ಲಿ ಎಸ್‌ಆರ್‍ಹೆಚ್ ಈ ಗೆಲುವನ್ನು ಸಾಧಿಸಿದೆ.
ಸಂಭಾವ್ಯ ಪ್ಲೇಯಿಂಗ್-11
ಸನ್‌ರೈಸರ್ಸ್ ಹೈದರಾಬಾದ್: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್‌ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಅಭಿನವ್ ಮನೋಹರ್, ಅನಿಕೇತ್ ವರ್ಮಾ, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ ಮತ್ತು ರಾಹುಲ್ ಚಹಾರ್.
ಲಕ್ನೋ ಸೂಪರ್ ಜೈಂಟ್ಸ್: ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ರಿಷಬ್ ಪಂತ್ (ನಾಯಕಿ ಮತ್ತು ವಿಕೆಟ್‌ಕೀಪರ್), ನಿಕೋಲಸ್ ಪೂರನ್, ಆಯುಷ್ ಬಡೋನಿ, ಡೇವಿಡ್ ಮಿಲ್ಲರ್, ಶಹಬಾಜ್ ಅಹ್ಮದ್, ಪ್ರಿನ್ಸ್ ಯಾದವ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್ ಮತ್ತು ದಿಗ್ವೇಶ್ ರಾಠಿ.
ವೇಳಾಪಟ್ಟಿ
ದಿನಾಂಕ: ಗುರುವಾರ, ಮಾರ್ಚ್ 27
ಸಮಯ: ಸಂಜೆ 7:30
ಸ್ಥಳ: ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ, ಹೈದರಾಬಾದ್
ನಾಯಕರು: ಪ್ಯಾಟ್ ಕಮ್ಮಿನ್ಸ್ (ಎಸ್‌ಆರ್‍ಹೆಚ್), ರಿಷಭ್ ಪಂತ್ (ಎಲ್‌ಎಸ್‌ಜಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications