Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Mega Auction 2025: ಯಾವ ತಂಡದ ಬಳಿ ಇನ್ನು ಎಷ್ಟು ಹಣವಿದೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್‌

ಸೌದಿಯಲ್ಲಿ ಐಪಿಎಲ್‌ 2025ರ ಮೆಗಾ ಹರಾಜು ನಡೆಯಿತು. ಮೊದಲ ದಿನ ಮಾಲೀಕರು ಸಹ ಅತ್ಯಂತ ಉತ್ಸಾಹದಲ್ಲಿ ಹರಾಜಿನಲ್ಲಿ ಭಾಗಿಯಾದರು. ಸ್ಟಾರ್ ಆಟಗಾರರ ಹೆಸರು ಬಂದಾಗ ಬಾಜಿ ಕಟ್ಟುತ್ತಲೇ ಸಾಗಿದರು. ಪದೇ ಪದೇ ತಮ್ಮ ಬಳಿ ಇರುವ ಪರ್ಸ್‌ ನೋಡುತ್ತಲೆ ಮುಂದೆ ಸಾಗಿದ್ದ, ಫ್ರಾಂಚೈಸಿ ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಶ್ರಮಿಸಿದರು. ಮಾಲೀಕರು ಸೋಮವಾರವೂ ಹರಾಜಿನಲ್ಲಿ ಭಾಗವಹಿಸಬೇಕು. ಹಾಗಿದ್ದರೆ, ಐಪಿಎಲ್‌ ಮಾಲೀಕರ ಬಳಿ ಇರುವ ಮೊತ್ತ ಎಷ್ಟು ಎಂಬ ಬಗ್ಗೆ ವಿವರ ಇಲ್ಲಿದೆ.

ಬಿಸಿಸಿಐ ಹರಾಜಿಗೆ ಈ ಬಾರಿ 120 ಕೋಟಿ ರೂಪಾಯಿ ಖರ್ಚು ಮಾಡಬಹುದು ಎಂದು ತಿಳಿಸಿತ್ತು. ಈಗಾಗಲೇ ತಂಡಗಳು ತಾವು ಉಳಿಸಿಕೊಂಡ ಆಟಗಾರರಿಗೆ ಹಣವನ್ನು ಹೂಡಿದ್ದವು. ಬಾಕಿ ಇರುವ ಹಣದಿದ ಐಪಿಎಲ್ ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗಾರರಿಗೆ ಬಲೆ ಹಾಕುವ ಅನಿವಾರ್ಯತೆ ಇತ್ತು. ಈ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡಿವೆ.

IPL 2025 Mega Auction Day 1 Highlights and Team Budgets for Day 2

ಎರಡನೇ ದಿನದ ಶ್ರೀಮಂತ ತಂಡ ಆರ್‌ಸಿಬಿ

ಸೋಮವಾರ ಬಿಡ್ಡಿಂಗ್ ಅಂಗಳವನ್ನು ಪ್ರವೇಶಿಸುವ ಶ್ರೀಮಂತ ತಂಡಗಳ ಪಟ್ಟಿಯಲ್ಲಿ ಆರ್‌ಸಿಬಿ ಮೊದಲ ಸ್ಥಾನ, ಆರ್‌ಸಿಬಿ ಬಳಿ ಇನ್ನು 30.65 ಕೋಟಿ ರೂ. ಇದ್ದು, ಸೋಮವಾರ ಭಾರೀ ಬೇಟೆ ನಡೆಸುವ ಪ್ಲ್ಯಾನ್ ಮಾಡಿಕೊಂಡಿದೆ. ಆದರೆ ಆರ್‌ಸಿಬಿ ಯಾವ ಪ್ಲೇಯರ್‌ಗೆ ಹಣ ಹೂಡುತ್ತದೆ ಎಂಬುದೇ ಕುತೂಹಲ ಮೂಡಿಸಿದೆ. ಇನ್ನು ಆರ್‌ಸಿಬಿ ಬಳಿ ಮೂರು ಆರ್‌ಟಿಎಂ ಕಾರ್ಡ್‌ಗಳು ಇವೆ.

ಗುಜರಾತ್ ಬಳಿ ಇದೆ 17.50 ಕೋಟಿ

ಚೆನ್ನೈ ಸೂಪರ್ ಕಿಂಗ್ಸ್‌ ತಂಡ 15.60 ಕೋಟಿ ಹಣವನ್ನು ಹೊಂದಿದ್ದು, ಅಳೆದು ತೂಗಿ ಬಿಡ್ ನಡೆಸಲಿದೆ. ಇನ್ನು ಭಾನುವಾರದ ಹರಾಜಿನಲ್ಲಿ ಅತ್ಯಂತ ಹೆಚ್ಚು ಕಾಣಿಸಿಕೊಂಡ ತಂಡಗಳಲ್ಲಿ ಒಂದಾಗಿರುವ ಡೆಲ್ಲಿ 13.80 ಕೋಟಿ ರೂಪಾಯಿಯೊಂದಿಗೆ, ಎರಡನೇ ದಿನ ಹರಾಜು ಅಂಗಳ ಪ್ರವೇಶಿಸಲಿದೆ. ದೇಶಿಯ ಹಾಗೂ ವಿದೇಶಿ ಆಟಗಾರರುನ್ನು ಖರೀದಿಸಿ ತನ್ನ ತಂಡವನ್ನು ಬ್ಯಾಲೆನ್ಸ್‌ ಮಾಡಿಕೊಳ್ಳುತ್ತಿರುವ ಗುಜರಾತ್‌ ಟೈಟನ್ಸ್‌ 17.50 ಕೋಟಿ ಹೊಂದಿದೆ. ಹಾಲಿ ಚಾಂಪಿಯನ್ಸ್ ಕೋಲ್ಕತ್ತಾ ನೈಟ್‌ ರೈಡರ್ಸ್‌ ಬಳಿ ಸಹ 10.05 ಕೋಟಿ ಹಣವಿದೆ. ಮೊದಲೇ ಕೆಕೆಆರ್‌ ಸ್ಟಾರ್‌ ಆಟಗಾರರನ್ನು ಉಳಿಸಿಕೊಂಡು ಭಾರೀ ಮೊತ್ತ ನೀಡಿತ್ತು. ಹರಾಜಿನಲ್ಲೂ ಕೆಕೆಆರ್‌ ವೆಂಕಟೇಶ್ ಅಯ್ಯರ್‌ಗೆ 23.75 ಕೋಟಿ ನೀಡಿ ಮತ್ತೆ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ.

ಮುಂಬೈ ಪರ್ಸ್‌ನಲ್ಲಿದೆ 26.10 ಕೋಟಿ

ಡೆಲ್ಲಿ ಕ್ಯಾಪಿಟಲ್ಸ್‌ ಕೈ ಬಿಟ್ಟದ ವಿಕೆಟ್‌ ಕೀಪರ್ ಬ್ಯಾಟರ್ ರಿಷಭ್ ಪಂತ್‌ ಅವರಿಗೆ ಭಾರೀ ಮೊತ್ತವನ್ನು ಹೂಡಿಕೆ ಮಾಡಿದ್ದ ಲಕ್ನೋ ಸೂಪರ್ ಜೈಂಟ್ಸ್ ಬಳಿ ಇನ್ನು 14.85 ಕೋಟಿ ಉಳಿದಿದೆ. ಐದು ಬಾರಿ ಚಾಂಪಿಯನ್ ಮುಂಬೈ 26.10 ಕೋಟಿ ಹೊಂದಿದ್ದು, ಎರಡನೇ ದಿನವೂ ಉತ್ತಮ ಆಟಗಾರರಿಗೆ ತಮ್ಮ ತಂಡದಲ್ಲಿ ಸ್ಥಾನ ನೀಡಲು ತಯಾರಾಗಿದೆ. ಅರ್ಷದೀಪ್ ಸಿಂಗ್, ಶ್ರೇಯಸ್ ಅಯ್ಯರ್, ಯುಜುವೇಂದ್ರ ಚಹಾಲ್‌ ಅವರಂತಹ ಆಟಗಾರರಿಗೆ ಕೋಟಿ ಕೋಟಿ ನೀಡಿರುವ ಪಂಜಾಬ್ ಕಿಂಗ್ಸ್ ಬಳಿ ಇನ್ನು 22.50 ಕೋಟಿ ಉಳಿದಿದೆ.

ರಾಜಸ್ಥಾನ ರಾಯಲ್ಸ್‌ ಬಳಿ ಇನ್ನು 17.35 ಕೋಟಿ ರೂ ಇದ್ದು, ಸನ್‌ ರೈಸರ್ಸ್ ಹೈದರಾಬಾದ್ ಬಳಿ 5.15 ಕೋಟಿ ರೂಪಾಯಿ ಮಿಕ್ಕಿದೆ. ಎರಡನೇ ದಿನದ ಹಾರಜಿನಲ್ಲಿ ಯಾವ ತಂಡ ಯಾರಿಗೆ ಮಣೆ ಹಾಕುತ್ತದೆ ಎಂಬುದು ಕುತೂಹಲ ಮೂಡಿಸಿದೆ.

Story first published: Monday, November 25, 2024, 8:30 [IST]
Other articles published on Nov 25, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+