ತಾನಾಡಿದ ಮೊದಲ ಆವೃತ್ತಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದ ಗುಜರಾತ್ ಟೈಟಾನ್ಸ್, ಹರಾಜಿನಲ್ಲಿ ಒಳ್ಳೆಯ ಆಟಗಾರರಿಗೆ ಬಿಡ್ ಮಾಡಿದೆ. ಗುಜರಾತ್ 69 ಕೋಟಿ ರೂ.ಗಳೊಂದಿಗೆ ಹರಾಜು ಅಂಗಳ ಪ್ರವೇಶಿಸಿತ್ತು. ಈಗಾಗಲೇ ಗುಜರಾಟ್ 5 ಆಟಗಾರರನ್ನು ಉಳಿಸಿಕೊಂಡಿತ್ತು. ಹೀಗಾಗಿ ಉಳಿದ ಸ್ಥಾನವನ್ನು ತುಂಬುವ ಕಾರ್ಯ ನಡೆಯಬೇಕಿತ್ತು. ಈ ನಿಟ್ಟಿನಲ್ಲಿ ಗುಜರಾತ್ ಬೆಸ್ಟ್ ಕೆಲಸವನ್ನು ಮಾಡಿದೆ. ಈ ಬಾರಿಯ ಹರಾಜಿನಲ್ಲಿ ಸ್ಟಾರ್ ಸ್ಫೋಟಕ ಬ್ಯಾಟರ್ ಜೋಸ್ ಬಟ್ಲರ್‌ಗೆ ಬಿಡ್ ಮಾಡಿದೆ.
ಇಂಗ್ಲೆಂಡ್ ತಂಡದ ಆಟಗಾರ ಬಟ್ಲರ್ ಅವರನ್ನು ರಾಜಸ್ಥಾ ರಾಯಲ್ಸ್ ತಂಡ ಕೈ ಬಿಟ್ಟಿತ್ತು. ಇವರಿಗೆ ಗುಜರಾತ್ ಮಣೆ ಹಾಕಿದೆ. ಇವರಿಗೆ 15.75 ಕೋಟಿ ನೀಡಿದರೆ, ಆರ್‌ಸಿಬಿ ತಂಡ ಕೈ ಬಿಟ್ಟ ಮೊಹಮ್ಮದ್ ಸಿರಾಜ್ ಅವರಿಗೆ 12.75 ಕೋಟಿ ನೀಡಿ ತಂಡಕ್ಕೆ ಬರಮಾಡಿಕೊಂಡಿದೆ. ಕರ್ನಟಕದ ಸ್ಟಾರ್ ವೇಗದ ಬೌಲರ್ ಪ್ರಸಿದ್ಧ ಕೃಷ್ಣ ಅವರಿಗೂ ಗುಜರಾತ್ ಭಾರೀ ಮೊತ್ತವನ್ನು ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.

ಜೋಸ್ ಬಟ್ಲರ್--15,75 ಕೋಟಿ ರೂ.
ಮೊಹಮ್ಮದ್ ಸಿರಾಜ್--12,25 ಕೋಟಿ ರೂ.
ಕಗಿಸೋ ರಬಾಡ--10,75 ಕೋಟಿ ರೂ.
ಪ್ರಸಿದ್ಧ್ ಕೃಷ್ಣ--9,50 ಕೋಟಿ ರೂ.
ವಾಷಿಂಗ್ಟನ್ ಸುಂದರ್-- 3,20 ಕೋಟಿ ರೂ.
ಶೆರ್ಫೇನ್ ರುದರ್ಫೋರ್ಡ್-- 2,60 ಕೋಟಿ ರೂ.
ಜೆರಾಲ್ಡ್ ಕೋಟ್ಜಿ-- 2,40 ಕೋಟಿ ರೂ.
ಗ್ಲೆನ್ ಫಿಲಿಪ್ಸ್--2,00 ಕೋಟಿ ರೂ.
ಆರ್.ಸಾಯಿ ಕಿಶೋರ್--2,00 ಕೋಟಿ ರೂ.
ಮಹಿಪಾಲ್ ಲೊಮ್ರೋರ್-- 1,70 ಕೋಟಿ ರೂ.
ಗುರ್ನೂರ್ ಸಿಂಗ್ ಬ್ರಾರ್--1,30 ಕೋಟಿ ರೂ.
ಮೊಹಮ್ಮದ್ ಅರ್ಷದ್ ಖಾನ್--1,30 ಕೋಟಿ ರೂ.
ಕರೀಂ ಜನತ್ --75,00 ಲಕ್ಷ ರೂ.
ಜಯಂತ್ ಯಾದವ್--75,00 ಲಕ್ಷ ರೂ.
ಇಶಾಂತ್ ಶರ್ಮಾ--75,00 ಲಕ್ಷ ರೂ.
ಕುಮಾರ ಕುಶಾಗ್ರ--65,00 ಲಕ್ಷ ರೂ.
ಮಾನವ ಸುತಾರ್--30,00 ಲಕ್ಷ ರೂ.
ಅನುಜ್ ರಾವತ್--30,00 ಲಕ್ಷ ರೂ.
ನಿಶಾಂತ್ ಸಿಂಧು--30,00 ಲಕ್ಷ ರೂ.
ರಶೀದ್ ಖಾನ್ (18 ಕೋಟಿ ರೂ.)
ಶುಭಮನ್ ಗಿಲ್ (16.5 ಕೋಟಿ ರೂ.)
ಸಾಯಿ ಸುದರ್ಶನ್ (8.5 ಕೋಟಿ ರೂ.)
ರಾಹುಲ್ ತೆವಾಟಿಯಾ (4 ಕೋಟಿ ರೂ.)
ಶಾರುಖ್ ಖಾನ್ (4 ಕೋಟಿ ರೂ.)