IPL 2025: ಮೊಹಮ್ಮದ್ ಶಮಿಯನ್ನು ಉಳಿಸಿಕೊಳ್ಳಲು ಗುಜರಾತ್ ಏಕೆ ಆರ್‌ಟಿಎಂ ಬಳಸಲಿಲ್ಲ?
ಟೀಮ್ ಇಂಡಿಯಾ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಕಳೆದ ಒಂದು ವರ್ಷದಿಂದ ಮೈದಾನದಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ವರ್ಷ ರಣಜಿ ಟ್ರೋಫಿ ಟೂರ್ನಿಯಲ್ಲಿ ಬಂಗಾಳದ ಪರ ಮೊಹಮ್ಮದ್ ಶಮಿ ಕಣಕ್ಕೀಳಿದಿದ್ದು, ಅದ್ಭುತ ಪ್ರದರ್ಶನ ನೀಡಿದ್ದಾರೆ. ಇದರ ಮಧ್ಯೆಯೂ ಅವರು ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳ ಗಮನ ಸೆಳೆಯುತ್ತಾರಾ ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳನ್ನು ಕಾಡುತ್ತಿತ್ತು. ಈಗ ಮೊಹಮ್ಮದ್ ಶಮಿ 10 ಕೋಟಿ ರೂ.ಗೆ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೇರಿದ್ದಾರೆ.
ಐಪಿಎಲ್ ಮೆಗಾ ಹರಾಜಿನಲ್ಲಿ ಮೊಹಮ್ಮದ್ ಶಮಿ ಅವರನ್ನು ಗುಜರಾತ್ ಟೈಟನ್ಸ್ ತಂಡ ಉಳಿಸಿಕೊಳ್ಳುವ ಅವಕಾಶವನ್ನು ಹೊಂದಿತ್ತು. ಆದರೆ ಗುಜರಾತ್ ಟೈಟನ್ಸ್ ಮೊಹಮ್ಮದ್ ಶಮಿ ಅವರನ್ನು ರೈಟ್ ಟು ಮ್ಯಾಚ್ (ಆರ್‌ಟಿಎಂ) ಕಾರ್ಡ್ ಬಳಸಿ ಉಳಿಸಿಕೊಳ್ಳುವ ಮನಸ್ಸು ಮಾಡಲಿಲ್ಲ. ಚಾಂಪಿಯನ್ ಬೌಲರ್‌ಗೆ ಗುಜರಾತ್ ಟೈಟನ್ಸ್ ಏಕೆ ಆರ್‌ಟಿಎಂ ಕಾರ್ಡ್ ಬಳಸಲಿಲ್ಲ ಎಂಬುದು ಅಭಿಮಾನಿಗಳಿಗೆ ಕಾಡುತ್ತಿತ್ತು. ಇದೀಗ ಮೊಹಮ್ಮದ್ ಶಮಿಯನ್ನು ಉಳಿಸಿಕೊಳ್ಳದಿರಲು ಗುಜರಾತ್ ಟೈಟಾನ್ಸ್ ಹೆಡ್ ಕೋಚ್ ಆಶಿಶ್ ನೆಹ್ರಾ ಅವರು ಕಾರಣವನ್ನು ತಿಳಿಸಿದ್ದಾರೆ.

ನೆಹ್ರಾ ಹೇಳಿದ್ದೇನು?
ಮೊಹಮ್ಮದ್ ಶಮಿ ಅವರು ನಮ್ಮ ರಿಟೈನ್ ಯೋಜನೆಯ ಭಾಗವಾಗಿದ್ದರು. ಆದರೆ, ತಂಡವು ಈಗಾಗಲೇ ಹಲವಾರು ಸ್ಟಾರ್ ಆಟಗಾರರನ್ನು ಉಳಿಸಿಕೊಂಡಿತ್ತು. ಹೀಗಾಗಿ ಶಮಿಗೆ ಆರ್‌ಟಿಎಂ ಬಳಸುವಾಗ, ಶಮಿಗೆ 10 ಕೋಟಿ ರೂ. ಸ್ವಲ್ಪ ಹೆಚ್ಚು ಎಂದು ಮ್ಯಾನೇಜ್‌ಮೆಂಟ್ ಭಾವಿಸಿತ್ತು. ಈ ಕಾರಣಗಳಿಂದ ಶಮಿ ಅವರನ್ನು ಗುಜರಾತ್ ತಂಡಕ್ಕೆ ಮರಳಿ ಕರೆತರಲಾಗಲಿಲ್ಲ ಎಂದು ನೆಹ್ರಾ ಹೇಳಿದ್ದಾರೆ.
ಶಮಿ ಗುಣಗಾನ
ಕಳೆದ ಎರಡು ವರ್ಷಗಳಲ್ಲಿ ಗುಜರಾತ್ ಟೈಟಾನ್ಸ್‌ಗೆ ಶಮಿ ನೀಡಿದ ಕೊಡುಗೆಯನ್ನು ನೆಹ್ರಾ ಶ್ಲಾಘಿಸಿದ್ದಾರೆ. 'ಬಹಿರಂಗ ಹರಾಜಿಗೆ ಬಂದಾಗ ನಿಮ್ಮ ತಂತ್ರವು ಏನೇ ಇರಲಿ, ನಿಮ್ಮ ತಂತ್ರವು ಯಾವಾಗಲೂ ಯಶಸ್ವಿಯಾಗುವುದಿಲ್ಲ. ಈ ಮೂರು ವರ್ಷಗಳಿಂದ ನಾವು ಮಾಡಿದ್ದನ್ನು ಮೊಹಮ್ಮದ್ ಶಮಿ ಹೊಂದಿದ್ದಾರೆ. ಅದು ಸದಾ ನೆನಪಿನಲ್ಲಿ ಉಳಿಯುತ್ತದೆ' ಎಂದಿದ್ದಾರೆ.
ಐಪಿಎಲ್ 2022ರ ಮಿನಿ ಹರಾಜಿನಲ್ಲಿ ಶಮಿ ಅವರನ್ನು 6.25 ಕೋಟಿ ರೂ.ಗೆ ಗುಜರಾತ್ ಟೈಟನ್ಸ್ ತಂಡವನ್ನು ಸೇರಿದ್ದರು. ಈ ಬಾರಿ ಶಮಿ ಅವರಿಗೆ ಹೆಚ್ಚಿನ ಬೆಲೆ ಸಿಕ್ಕಿದೆ. ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್) ಶಮಿಗಾಗಿ ಬಿಡ್ ಪ್ರಾರಂಭಿಸಿತು. ಜೊತೆಗೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಕೂಡ ಶಮಿ ಖರೀದಿಸಲು ಮುಂದಾಯಿತು. ಆದರೆ ಸಿಎಸ್‌ಕೆ 8.25 ಕೋಟಿ ರೂ.ಗೆ ತನ್ನ ಬಿಡ್ ನಿಲ್ಲಿಸಿತು. ನಂತರ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಶಮಿಗಾಗಿ ಬಿಡ್ ಮಾಡಿತು. ಎಲ್‌ಎಸ್‌ಜಿ ಕೂಡ 9.75 ಕೋಟಿ ರೂ.ಗೆ ಹರಾಜಿನಿಂದ ಹೊರ ಬಂದಿತ್ತು. ಈ ವೇಳೆ ಹೈದರಾಬಾದ್ 10 ಕೋಟಿ ರೂ.ಗೆ ಶಮಿ ಅವರನ್ನು ಬಿಡ್ ಮಾಡಿತು. ಆದರೆ ಗುಜರಾತ್ ಆರ್‌ಡಿಎಂ ಬಳಸಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications