IPL 2025: ಎಂಐ ಅಥವಾ ಆರ್‌ಸಿಬಿ, ಸಿಎಸ್‌ಕೆ ತಂಡಕ್ಕೆ ಕಠಿಣ ಎದುರಾಳಿ ಯಾರು?
ಮುಂಬೈ ಇಂಡಿಯನ್ಸ್ ತಂಡವನ್ನು ತವರಿನಲ್ಲಿ ಸುಲಭವಾಗಿ ಸೋಲಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಶುಕ್ರವಾರ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೆಣಸಾಡಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಉದ್ಘಾಟನಾ ಸೀಸನ್ 2008 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿದ ನಂತರ ಆರ್‌ಸಿಬಿ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇಲ್ಲಿವರೆಗೆ ಒಂದು ಪಂದ್ಯವನ್ನು ಗೆದ್ದಿಲ್ಲ. ಇಂತಹ ಸಂದರ್ಭದಲ್ಲಿ ಸಿಎಸ್‌ಕೆ ತಂಡಕ್ಕೆ ಕಠಿಣ ಎದುರಾಳಿ ಯಾರು ಎಂಬ ಚರ್ಚೆ ಶುರುವಾಗಿದೆ.
ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಅತ್ಯಂತ ಕಠಿಣ ಎದುರಾಳಿ ಯಾರು ಎಂಬ ಚರ್ಚೆಗೆ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ತೆರೆ ಎಳೆದಿದ್ದಾರೆ. ಮುಂಬೈ ಮತ್ತು ಆರ್‌ಸಿಬಿ ಅಭಿಮಾನಿಗಳಲ್ಲಿ ಸಿಎಸ್‌ಕೆ ವಿರುದ್ಧದ ಪಂದ್ಯ ಭಾರೀ ಕುತೂಹಲ ಮೂಡಿಸಿರುತ್ತದೆ. ಆದರೆ ಈಗ ರುತುರಾಜ್ ಗಾಯಕ್ವಾಡ್ ತಮ್ಮ ತಂಡದ ಎದುರಾಳಿ ಯಾರು ಎಂದು ಹೇಳಿದ್ದಾರೆ.

ಆರ್‍ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿರುವ ರುತುರಾಜ್, ಆರ್‌ಸಿಬಿ ವಿರುದ್ಧ ಆಡುವ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. "ಆರ್‍ಸಿಬಿ ವಿರುದ್ಧ ಆಡುವುದು ಯಾವಾಗಲೂ ಉತ್ತಮ ಪಂದ್ಯ. ಮುಂಬೈ ಇಂಡಿಯನ್ಸ್ ನಂತರ, ನಾವು ಯಾವಾಗಲೂ ಎದುರು ನೋಡುತ್ತಿರುವ ಎರಡನೇ ಪಂದ್ಯ ಇದು' ಎಂದು ತಿಳಿಸಿದ್ದಾರೆ.
ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ವಿರುದ್ಧ ಆಡುವಾಗ ತಮಗೆ ಹೇಗನಿಸುತ್ತದೆ ಎಂಬುದನ್ನು ರುತುರಾಜ್ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಎದುರಾಳಿ ತಂಡದಲ್ಲಿದ್ದಾಗಲೆಲ್ಲಾ, ಆಡುವಾಗಲೆಲ್ಲಾ, ಎದುರು ನೋಡಬೇಕಾದ ಪಂದ್ಯವಿರುತ್ತದೆ. ಅವರು ಬಹಳ ಸಮಯದಿಂದ ಆರ್‌ಸಿಬಿ ಮತ್ತು ದೇಶಕ್ಕಾಗಿ ನಿರಂತರವಾಗಿ ಆಡುತ್ತಿದ್ದಾರೆ ಎಂದು ಗಾಯಕ್ವಾಡ್ ತಮ್ಮ ಅಭಿಪ್ರಾಯಹಂಚಿಕೊಂಡಿದ್ದಾರೆ.
ಆರ್‌ಸಿಬಿ ವಿರುದ್ಧ ಆಡಲು ನಿಜವಾಗಿಯೂ ಎದುರು ನೋಡುತ್ತಿದ್ದೇನೆ. ವಿಶೇಷವಾಗಿ ರಜತ್ ಪಾಟಿದಾರ್ ಅವರನ್ನು ಹೊಸ ನಾಯಕನನ್ನಾಗಿ ಘೋಷಿಸಿದಾಗ, ನಾನು ಅವರಿಗೆ ಮೆಸೇಜ್ ಮಾಡಿ ವಿಶ್ ಮಾಡಿದ್ದೇನೆ. ನಾವು ಸ್ವಲ್ಪ ಸಮಯದಿಂದ ಸ್ನೇಹಿತರಾಗಿದ್ದೇವೆ. ನಾವು ಒಬ್ಬರಿಗೊಬ್ಬರು ನಿಜವಾಗಿಯೂ ಚೆನ್ನಾಗಿ ತಿಳಿದಿದ್ದೇವೆ. ಆರ್‌ಸಿಬಿ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಗಾಯಕ್ವಾಡ್ ಹೇಳಿದ್ದಾರೆ.
ಐಪಿಎಲ್ 2025 ರಲ್ಲಿ ಸಿಎಸ್‌ಕೆ ಮತ್ತು ಆರ್‌ಸಿಬಿ ಎರಡೂ ತಂಡಗಳಿಗೆ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಗೆಲುವು ಅಗತ್ಯವಿತ್ತು. ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಆರ್‍ಸಿಬಿ ತಂಡ ಸಿಎಸ್‌ಕೆ ಸೋಲಿಸಿ ಪ್ಲೇ-ಆಫ್ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಈಗ ಆರ್‍ಸಿಬಿ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಳ್ಳಲು ಸಿಎಸ್‌ಕೆ ಎದುರು ನೋಡುತ್ತಿದೆ. ಆದರೆ ಹೊಸ ಬಲಿಷ್ಠ ಆರ್‍ಸಿಬಿ ತಂಡದ ಎದುರು ಸಿಎಸ್‌ಕೆ ಗೆಲುವು ಸುಲಭವಾಗಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications