For Quick Alerts
ALLOW NOTIFICATIONS  
For Daily Alerts
 

IPL 2025: ಮುಂಬೈ ವಿರುದ್ಧದ ಪಂದ್ಯಕ್ಕೂ ಮುನ್ನ ಧೋನಿ ಭರ್ಜರಿ ಅಭ್ಯಾಸ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ಎಂಎಸ್ ಧೋನಿ ಐಪಿಎಲ್ 2025 ರಲ್ಲಿ ಅಬ್ಬರಿಸಲು ಸಜ್ಜಾಗುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಸಿಎಸ್‌ಕೆ ತಂಡದ ಆರಂಭಿಕ ಪಂದ್ಯಕ್ಕೂ ಮುನ್ನ ಅವರು ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ. ಐಪಿಎಲ್ 2024 ರಲ್ಲಿ ಧೋನಿ ಬೌಲರ್‌ಗಳಿಗೆ ಬೆವರಿಳಿಸಿದ್ದರು. ಈಗ 2025 ರ ಐಪಿಎಲ್‌ನಲ್ಲೂ ಅವರು ಅದೇ ಸ್ಪೋಟಕ ಬ್ಯಾಟಿಂಗ್ ಮಾಡಲು ತಯಾರಿ ನಡೆಸಿದ್ದಾರೆ.

ಸಿಎಸ್‌ಕೆ ಮಾರ್ಚ್ 23 ರಂದು ತನ್ನ ತವರು ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ದಿನದ ಎರಡನೇ ಪಂದ್ಯದಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

IPL 2025 MS Dhoni had great practice before the match against Mumbai Indians

ಮುಂಬೈ ಇಂಡಿಯನ್ಸ್ ವಿರುದ್ಧದ ಆರಂಭಿಕ ಪಂದ್ಯಕ್ಕೂ ಮುನ್ನ ಎಂಎಸ್ ಧೋನಿ ತಡರಾತ್ರಿಯವರೆಗೂ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಬಗ್ಗೆ ಇಂಗ್ಲೆಂಡ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಆಲ್‌ರೌಂಡರ್ ಸ್ಯಾಮ್ ಕರನ್ ಬಹಿರಂಗಪಡಿಸಿದ್ದಾರೆ.

ಸಿಎಸ್‌ಕೆ ಮಾರ್ಚ್ 23 ರಂದು ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ತನ್ನ ಐಪಿಎಲ್ 2025ರ ಅಭಿಯಾನವನ್ನು ಪ್ರಾರಂಭಿಸಲಿದೆ. ಈ ಪಂದ್ಯಕ್ಕೂ ಮುನ್ನ, ಸಿಎಸ್‌ಕೆ ತಂಡವು ಚೆನ್ನೈನಲ್ಲಿ ಭರ್ಜರಿ ಅಭ್ಯಾಸ ನಡೆಸಿದೆ. ಇತ್ತೀಚೆಗೆ, ಧೋನಿ ತಡರಾತ್ರಿಯವರೆಗೂ ತನ್ನ ಪವರ್ ಹಿಟ್ಟಿಂಗ್‌ ಅಭ್ಯಾಸ ಮಾಡುತ್ತಿದ್ದಾರೆ ಎಂದು ಸ್ಯಾಮ್ ಕರನ್ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ನಾಸರ್ ಹುಸೇನ್ ಜೊತೆ ಮಾತನಾಡಿದ ಕರಣ್, "ಒಂದು ರಾತ್ರಿ ನಾನು ಎಂಎಸ್ ಧೋನಿ ಮತ್ತು ರವೀಂದ್ರ ಜಡೇಜಾ ಜೊತೆ ರಾತ್ರಿ 11:30 ಕ್ಕೆ ಬ್ಯಾಟಿಂಗ್ ಮಾಡುತ್ತಿದ್ದೆ. ಇದು ಜಗತ್ತಿನಲ್ಲಿ ಎಲ್ಲಿಯೂ ನಡೆಯದ ಆಶ್ಚರ್ಯ ಎಂದು ನಾನು ನೋಡುತ್ತಿದ್ದೆ. ದೀಪಗಳು ಉರಿಯುತ್ತಿದ್ದವು ಮತ್ತು ನಾವು ಎಲ್ಲೆಡೆ ಚೆಂಡುಗಳನ್ನು ಹೊಡೆಯುತ್ತಿದ್ದೆವು ಎಂದು ಧೋನಿ ಅವರ ವಿಶೇಷ ಅಭ್ಯಾಸ ಬಗ್ಗೆ ತಿಳಿಸಿದ್ದಾರೆ. ಕರಣ್ ಈಗಾಗಲೇ 2020 ಮತ್ತು 2021 ರಲ್ಲಿ ಸಿಎಸ್‌ಕೆ ಪರ ಎರಡು ಸೀಸನ್‌ಗಳನ್ನು ಆಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಗಾಯಗಳ ಸಮಸ್ಯೆಯಿಂದ ಬಳಲುತ್ತಿದ್ದರೂ ಧೋನಿ ಐಪಿಎಲ್‌ ಟೂರ್ನಿಯಲ್ಲಿ ಆಡುತ್ತಿರುವುದರಿಂದ ಅವರು ತಮ್ಮ ಐಪಿಎಲ್ ವೃತ್ತಿಜೀವನದ ಅಂತಿಮ ಹಂತದಲ್ಲಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಅವರ ನಿವೃತ್ತಿಯ ಬಗ್ಗೆ ಊಹಾಪೋಹಗಳ ನಡುವೆ, ಮುಂಬರುವ ಸೀಸನ್‌ ಮುಂಚಿತವಾಗಿ ಅವರು ಚೆನ್ನೈಗೆ ಆಗಮಿಸಿದ್ದರು. ಅವರ ಟಿ-ಶರ್ಟ್ ಮೇಲೆ ಮೋರ್ಸ್ ಕೋಡ್‌ನಲ್ಲಿ 'ಒನ್ ಲಾಸ್ಟ್ ಟೈಮ್' ಎಂದು ಬರೆದಿದ್ದರು.

ಅವರು ಐಪಿಎಲ್ 2025ರ ಅಂತ್ಯದಲ್ಲಿ ನಿವೃತ್ತರಾಗುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ. ಐಪಿಎಲ್ 2025 ಕ್ಕೂ ಮೊದಲು, ಅವರು ಚೆನ್ನೈನಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದ ನಂತರ ಸಂತೋಷದಿಂದ ನಿವೃತ್ತಿ ಹೊಂದುವುದಾಗಿ ಸಂದರ್ಶನವೊಂದರಲ್ಲಿ ಹೇಳಿದ್ದರು.

Story first published: Saturday, March 22, 2025, 23:35 [IST]
Other articles published on Mar 22, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+