For Quick Alerts
ALLOW NOTIFICATIONS  
For Daily Alerts
 

IPL 2025: ಈ 3 ಕಾರಣಗಳಿಂದ ನಗೆಪಾಟಲಿಗೆ ಒಳಗಾದ ಎಂಎಸ್ ಧೋನಿ!

ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2025 ರ 8ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 50 ರನ್‌ಗಳಿಂದ ಸೋಲಿಸಿದೆ. ಈ ಪಂದ್ಯದಲ್ಲಿ ನಂತರ ಸಿಎಸ್‌ಕೆ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಸಾಕಷ್ಟು ಟೀಕಿಸಲಾಯಿತು. ಇದಾದ ನಂತರವೂ ಅವರು ಕಾಮೆಂಟರ್‍‌ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರು 9ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದು.

ಸಿಎಸ್‌ಕೆ ಸಂಕಷ್ಟದಲ್ಲಿದ್ದರೂ ಧೋನಿ ಬೇಗ ಬಂದು ತಂಡಕ್ಕೆ ಆಸರೆಯಾಗಲಿಲ್ಲ. ಅಲ್ಲದೆ, ಕಡಿಮೆ ಎಸೆತಗಳಲ್ಲಿ ಹೆಚ್ಚು ರನ್ ಅವಶ್ಯಕತೆಯಿದ್ದಲೂ ಅವರು ಬ್ಯಾಟಿಂಗ್ ಮಾಡಲು ಬರಲಿಲ್ಲ. ಅವರು ಕ್ರೀಸ್‌ಗೆ ಕಾಲಿಡುವ ಹೊತ್ತಿಗೆ ಪಂದ್ಯ ಸಿಎಸ್‌ಕೆ ಕೈಯಿಂದ ಹೊರಗಿತ್ತು. ಧೋನಿಯ ಈ ವಿಧಾನವೂ ಅವರನ್ನು ನಗೆಪಾಟಲಿಗೆ ಒಳಗಾಗುವಂತೆ ಮಾಡಿದೆ. ಇದಕ್ಕೆ ಮೂರು ಕಾರಣಗಳು ಇಲ್ಲಿವೆ.

IPL 2025 MS Dhoni who was laughed at because of these 3 reasons

ಮರೆಯಾದ ಫಿನಿಷರ್

ಎಂಎಸ್ ಧೋನಿ ಅವರನ್ನು ವಿಶ್ವ ಕ್ರಿಕೆಟ್‌ನ ದಿಗ್ಗಜ ಫಿನಿಷರ್‍‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಆದರೆ ಕಳೆದ ಐಪಿಎಲ್ ಸೀಸನ್‌ಗಳಿಂದ ಅವರು ತಮ್ಮ ಫಿನಿಶರ್ ಪಾತ್ರವನ್ನು ಮರೆಯುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಬಂದು ಪಂದ್ಯವನ್ನು ಗೆಲ್ಲಿಸದಿದ್ದರೆ ಧೋಣಿ ಅವರನ್ನು ಫಿನಿಷರ್ ಎಂದು ಹೇಗೆ ಕರೆಯಲು ಸಾಧ್ಯ? ಅವರು ಕಠಿಣ ಸಂದರ್ಭಗಳಲ್ಲಿ ಬಂದು ತನ್ನ ತಂಡಕ್ಕೆ ಆಸರೆಯಾಗಬೇಕು. ಅದರೆ, ಧೋನಿ ಅವರಲ್ಲಿ ಫಿನಿಷರ್ ಕಾಣಿಸುತ್ತಿಲ್ಲ. ಕೆಲವು ಎಸೆತಗಳನ್ನು ಮಾತ್ರ ಎದುರಿಸಲು ಧೋನಿ ಮೈದಾನಕ್ಕೆ ಬರುವಂತೆ ಕಾಣುತ್ತಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಧೋನಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.

ಬಿಗ್ ಇನ್ನಿಂಗ್ಸ್ ಮಿಸ್

ಪ್ರಸ್ತುತ ಕ್ರಿಕೆಟ್‌ನಲ್ಲಿ ಬಹಳಷ್ಟು ಬದಲಾಗಿದೆ. ಈಗ ಬೌಲರ್‍‌ಗಳು ತುಂವಾ ಬುದ್ದಿವಂತರಾಗಿದ್ದಾರೆ. ಯಾವುದೇ ಬ್ಯಾಟರ್‍‌ಗೆ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸುವುದು ಸವಾಲಿನ ಕೆಲಸವಾಗಿದೆ. ಧೋನಿ ಮೊದಲು ಬ್ಯಾಟಿಂಗ್ ಮಾಡಲು ಬಂದರೆ, ಅವರಿಗೆ ಬಿಗ್ ಇನ್ನಿಂಗ್ಸ್ ಆಡುವ ಅವಕಾಶ ಸಿಗುತ್ತದೆ. ಅವರು ಸ್ವಲ್ಪ ಸಮಯ ಕ್ರೀಸ್‌ನಲ್ಲಿ ಉಳಿದು ಪಿಚ್ ಬಗ್ಗೆ ತಿಳಿಸುಕೊಂಡು ಆಡಲು ಸುಲಭವಾಗುತ್ತದೆ. ನಂತರ ಅವರು ದೊಡ್ಡ ಹೊಡೆತಕ್ಕೆ ಕೈ ಹಾಕಬಹುದು. ಆರ್‍‌ಸಿಬಿ ವಿರುದ್ದದ ಪಂದ್ಯದಲ್ಲಿಯೂ ಧೋನಿ ಕೂಡ ಇದೇ ತಪ್ಪನ್ನು ಮಾಡಿದರು.

ತಂಡಕ್ಕೆ ಹಿನ್ನಡೆ

ಐಪಿಎಲ್ 2025 ರಲ್ಲಿ ಸಿಎಸ್‌ಕೆ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಎಂಎಸ್ ಧೋನಿ ಇರುವುದರಿಂದ ಕೆಲವು ಸಮಸ್ಯೆಗಳಾಗುತ್ತಿವೆ. ಸಿಎಸ್‌ಕೆ ಅನುಸರಿಸುತ್ತಿರುವ ತಂತ್ರದಲ್ಲಿ ಧೋನಿ ಒಬ್ಬ ಬ್ಯಾಟರ್ ಆಗಿ ಅಡುತ್ತಿದ್ದಾರೆ. ಅದರಲ್ಲೂ ಕೆಳ ಕ್ರಮಾಂಕದಲ್ಲಿ ಧೋನಿ ಬ್ಯಾಟಿಂಗ್ ಮಾಡಲು ಬರುತ್ತಿರುವುದು ತಂಡದ ಮೇಲೆ ಪರಿಣಾಮ ಬೀರುತ್ತಿದೆ. ತಂಡದಲ್ಲಿ ಅವರ ಉಪಸ್ಥಿತಿ ಅಥವಾ ಅನುಪಸ್ಥಿತಿಯು ಹೆಚ್ಚಿನ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ಧೋನಿ ಅಡುವ ಹನ್ನೊಂದರಲ್ಲಿ ಸ್ಥಾನ ಪಡೆದರೆ ಮಧ್ಯಮ ಕ್ರಮಾಂಕದಲ್ಲಿ ಬಂದು ತಂಡಕ್ಕೆ ಆಸರೆಯಾಗಬೇಕಾಗುತ್ತದೆ. ಪ್ರಸ್ತುತ ಸಿಎಸ್‌ಕೆ ಮಾಡಿದ ತಂತ್ರವು ತಂಡದ ಮೇಲೆಯೇ ಪರಿಣಾಮ ಬೀರುತ್ತಿದೆ.

Story first published: Saturday, March 29, 2025, 17:45 [IST]
Other articles published on Mar 29, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+