ಇಂಡಿಯನ್ ಪ್ರೀಮಿಯರ್ ಲೀಗ್ ದಿನ ದಿನದಿಂದ ದಿನಕ್ಕೆ ಕುತೂಹಲವನ್ನು ಹೆಚ್ಚಿಸಿದೆ. ಈಗಾಗಲೇ ಮೂರು ತಂಡಗಳು ಪ್ಲೇ ಆಫ್‌ಗೆ ತಮ್ಮ ಸ್ಥಾನವನ್ನು ಖಚಿತ ಪಡಿಸಿಕೊಂಡಿವೆ. ನಾಲ್ಕು ಸ್ಥಾನಗಳಲ್ಲಿ ಮೂರು ಸ್ಥಾನಗಳು ಫುಲ್ ಆಗಿವೆ. ಇನ್ನೇನಿದ್ರೂ ಆ ಒಂದು ಸ್ಥಾನಕ್ಕಾಗಿ ಫೈಟ್ ನಡೆಯಲಿದೆ. ಆದರೆ ಶ್ರೀಮಂತ ಲೀಗ್‌ನ ರೋಚಕತೆ ಇನ್ನು ಹೆಚ್ಚಿದೆ. ಮೂರು ಕ್ವಾಲಿಫೈ ಆದ ತಂಡಗಳು ಈಗಲೂ ಆ ಸ್ಥಾನಕ್ಕಾಗಿ ಫೈಟ್ ನಡೆಸುತ್ತಿದ್ದರೆ, ಉಳಿದ ತಂಡಗಳು ನಾಲ್ಕನೇ ಸ್ಥಾನಕ್ಕಾಗಿ ಹೋರಾಟ ನಡೆಸುತ್ತಿವೆ.
ನವದೆಹಲಿಯಲ್ಲಿ ನಡೆದ 18ನೇ ಆವೃತ್ತಿಯ ಐಪಿಎಲ್‌ನ 60ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿದ ಗುಜರಾತ್ ಟೈಟಾನ್ಸ್ ತಾನು ಪ್ಲೇ ಆಫ್‌ಗೆ ಪ್ರವೇಶಿಸುವುದಲ್ಲದೇ ಇನ್ನು ಎರಡು ತಂಡಗಳನ್ನು ಪ್ಲೇ ಆಫ್‌ಗೆ ಕರೆದುಕೊಂಡಿದೆ. ಈ ಮೂಲಕ ಈ ಮೂರು ತಂಡಗಳು ಪ್ಲೇ ಆಫ್‌ನಲ್ಲಿ ಆಡುವುದು ಪಕ್ಕಾ ಆಗಿದೆ. ಆದರೆ ಈ ಮೂರು ತಂಡಗಳು ಆ ಎರಡು ಸ್ಥಾನಕ್ಕಾಗಿ ಫೈಟ್ ನಡೆಸಲಿವೆ.

ಸದ್ಯ ಅಂಕ ಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ ತಂಡ 12 ಅಂಕಗಳೊಂದಿಗೆ 18 ಅಂಕವನ್ನು ಕಲೆ ಹಾಕಿದ್ದು ಅಗ್ರ ಸ್ಥಾನವನ್ನು ಪಡೆದಿದೆ. ಇನ್ನು ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು 12 ಪಂದ್ಯಗಳನ್ನು ಆಡಿದ್ದು 17 ಅಂಕ ಕಲೆ ಹಾಕಿವೆ. ಈ ಮೂರು ತಂಡಗಳಿಗೆ ಇನ್ನು 2 ಪಂದ್ಯಗಳು ಆಡುವುದು ಬಾಕಿ ಇದೆ ಈ ವೇಳೆ ಈ ಮೂರು ತಂಡಗಳು ಅಗ್ರ ಎರಡು ಸ್ಥಾನದ ಮೇಲೆ ನೆಟ್ಟಿವೆ. ಗುಜರಾತ್ 22 ಅಂಕಗಳ ಮೇಲೆ ಕಣ್ಣು ನೆಟ್ಟಿದ್ದರೆ, ಆರ್‌ಸಿಬಿ, ಪಂಜಾಬ್ ತಂಡಗಳು 21 ತಂಡಗಳ ಮೇಲೆ ಕಣ್ಣು ನೆಟ್ಟಿವೆ. ಹೀಗಾಗಿ ಈ ಮೂರು ತಂಡಗಳು ಅಗ್ರ ಎರಡು ಸ್ಥಾನದ ಮೇಲೆ ಕಣ್ಣು ನೆಟ್ಟಿವೆ.
ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್, ಐದನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್, ಆರನೇ ಸ್ಥಾನದಲ್ಲಿರುವ ಕೆಕೆಆರ್, ಏಳನೇ ಸ್ಥಾನದಲ್ಲಿರುವ ಎಲ್‌ಎಸ್‌ಜಿ ತಂಡಗಳು ಮುಂದಿನ ಹಂತದ ಮೇಲೆ ಕಣ್ಣು ನೆಟ್ಟಿವೆ. ಈ ಲೆಕ್ಕಾಚಾರದಲ್ಲಿ ಕೆಕೆಆರ್‌ಗೆ ಕೊಂಚ ಕಡಿಮೆ ಚಾನ್ಸ್ ಎಂದು ಕಾಣುತ್ತದೆ ಕಾರಣ ಈಗಾಗಲೇ ಕೆಕೆಆರ್ ಆಡಿದ 13 ಪಂದ್ಯಗಳಲ್ಲಿ 12 ಅಂಕ ಕಲೆ ಹಾಕಿದೆ. ಬಾಕಿ ಇರುವ 1 ಪಂದ್ಯ ಗೆದ್ದು, ಮುಂಬೈ, ಎಲ್‌ಎಸ್‌ಜಿ, ಡಿಸಿ ತಂಡಗಳು ಒಂದೇ ಒಂದು ಪಂದ್ಯವನ್ನು ಗೆಲ್ಲದೇ ಇದ್ರೆ ಕೆಕೆಆರ್ ರನ್ ರೇಟ್ ಆಧಾರದ ಮೇಲೆ ಮುಂದಿನ ಹಂತ ಪ್ರವೇಶಿಸಬಹುದಾಗಿದೆ.
ಮುಂಬೈ ಇಂಡಿಯನ್ಸ್ 14 ಅಂಕ ಕಲೆ ಹಾಕಿದ್ದು ಮುಂದಿನ 2 ಪಂದ್ಯಗಳನ್ನು ಗೆದ್ದಲ್ಲಿ 18 ಅಂಕಗಳನ್ನು ಕಲೆ ಹಾಕುತ್ತದೆ. ಅಲ್ಲದೆ ಸುಲಭವಾಗಿ ಪ್ಲೇ ಆಫ್ ಪ್ರವೇಶಿಸಬಹುದಾಗಿದೆ. ಈ ವೇಳೆ ಡೆಲ್ಲಿ ಸಹ ಇನ್ನು 2 ಪಂದ್ಯಗಳನ್ನು ಆಡಬೇಕಿದೆ. ಈ ಎರಡೂ ಪಂದ್ಯಗಳನ್ನು ಗೆದ್ದಲ್ಲಿ 17 ಅಂಕ ಕಲೆ ಹಾಕಬಹುದಾಗಿದೆ. ಇನ್ನು ಲೆಕ್ಕಾಚಾರದಲ್ಲಿ ಎಲ್‌ಎಸ್‌ಜಿ ಸಹ 16 ಅಂಕ ಕಲೆ ಹಾಕಬಹುದು. ಆದರೆ ಎಲ್‌ಎಸ್‌ಜಿ ಇದಕ್ಕೆ ಮೂರು ಪಂದ್ಯಗಳನ್ನು ಗೆಲ್ಲ ಬೇಕಾದ ಅನಿವಾರ್ಯತೆ ಇದೆ.