ಐಪಿಎಲ್ 2025 ರ ಮಧ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಚೆನ್ನೈ ತಂಡದ ನಿಯಮಿತ ನಾಯಕ ರುತುರಾಜ್ ಗಾಯಕ್ವಾಡ್ ಗಾಯದ ಕಾರಣದಿಂದಾಗಿ ಐಪಿಎಲ್ 2025 ರ ಟೂರ್ನಿಯಿಂದ ಹೊರಗುಳಿದಿದ್ದಾರೆ. ಗುವಾಹಟಿಯಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಗಾಯಗೊಂಡಿದ್ದರು. ಇದಾದ ನಂತರ ಅವರು ಗಾಯದಿಂದ ಚೇತರಿಸಿಕೊಂಡು ಮುಂದಿನ ಪಂದ್ಯಗಳಲ್ಲಿ ಆಡಲು ಅವರು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದ್ದರು. ಆದರೆ ಈಗ ಅವರು ಮುಂದೆ ಆಡಲು ಫಿಟ್ ಆಗಿಲ್ಲ. ರುತುರಾಜ್ ಗಾಯಕ್ವಾಡ್ ಹೊರಗುಳಿದ ನಂತರ ಎಂಎಸ್ ಧೋನಿ ಅವರನ್ನು ತಂಡದ ನಾಯಕರನ್ನಾಗಿ ಮಾಡಲಾಗಿದ ಎಂದು ಸಿಎಸ್‌ಕೆ ಫ್ರಾಂಚೈಸಿ ತಿಳಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ರುತುರಾಜ್ ಗಾಯಕ್ವಾಡ್ ಸ್ಥಾನಕ್ಕೆ ಬದಲಿ ಬ್ಯಾಟರ್ ಹುಡುಕಬೇಕಾಗಿದೆ. ಇಂತಹ ಸಂದರ್ಭದಲ್ಲಿ ವರದಿಗಳ ಪ್ರಕಾರ, ರುತುರಾಜ್ ಬದಲಿಗೆ ಮುಂಬೈನ ಸ್ಪೋಟಕ ಆರಂಭಿಕ ಬ್ಯಾಟರ್ ಪೃಥ್ವಿ ಶಾ ಅತ್ಯುತ್ತಮ ಆಯ್ಕೆಯಾಗಿದ್ದಾರೆ. ಇವರನ್ನು ಏಕೆ ಆಯ್ಕೆ ಮಾಡಬೇಕು ಎಂಬುದಕ್ಕೆ ಇಲ್ಲಿದೆ ಮೂರು ಕಾರಣಗಳು.

ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಪೃಥ್ವಿ ಶಾ ಅವರನ್ನು ಯಾರು ಬಿಡ್ ಮಾಡಲಿಲ್ಲ. ಅಲ್ಲದೆ, ಇತ್ತೀಚೆಗೆ ದಿನಗಳಲ್ಲಿ ಮುಂಬೈ ದೇಶೀಯ ಕ್ರಿಕೆಟ್ ತಂಡದ ಜೊತೆಗಿನ ಅವರ ವೃತ್ತಿಜೀವನವೂ ಉತ್ತಮವಾಗಿರಲಿಲ್ಲ. ಪೃಥ್ವಿ ಶಾ ಅವರಿಗೆ ಹೆಚ್ಚು ಅವಕಾಶಗಳು ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಅವರು ಒಳ್ಳೆಯ ಅವಕಾಶವನ್ನು ಹುಡುಕುತ್ತಿದ್ದಾರೆ. ಒಂದು ವೇಳೆ ಪೃಥ್ವಿ ಶಾ ಅವರನ್ನು ಸಿಎಸ್‌ಕೆ ಆಯ್ಕೆ ಮಾಡಿದರೆ, ಅವರನ್ನು ಹಲವು ಸೀಸನ್ ವರೆಗೆ ತಮ್ಮೊಂದಿಗೆ ಉಳಿಸಿಕೊಳ್ಳಬಹುದು. ಪ್ರಸ್ತುತ ಸಿಎಸ್‌ಕೆ ಆನೇಕ ಆಟಗಾರರಿಗೆ ಬದಲಿಗೆ ಆಟಗಾರರನ್ನು ಹುಡುಕಬೇಕಾಗಿದೆ. ಇದಕ್ಕಾಗಿ ಯುವ ಆಟಗಾರರನ್ನು ಹುಡುಕಬೇಕಾಗುತ್ತದೆ. ಇದರಲ್ಲಿ ಪೃಥ್ವಿ ಶಾ ಕೂಡ ಒಂದು ಆಯ್ಕೆಯಾಗಿರಬಹುದು.
ಅಗ್ರ ಕ್ರಮಾಂಕ ಬಲಿಷ್ಠ
ಪೃಥ್ವಿ ಶಾ ಆಗ್ರ ಕ್ರಮಾಂಕದ ಆಕ್ರಮಣಕಾರಿ ಬ್ಯಾಟರ್ ಎನಿಸಿಕೊಂಡಿದ್ದರೆ. ಅವರ ಸ್ಟ್ರೇಕ್‌ರೇಟ್ ಟಿ20 ಕ್ರಿಕೆಟ್‌ನಲ್ಲಿ 150 ಕ್ಕಿಂತ ಹೆಚ್ಚಿದೆ. ಐಪಿಎಲ್‌ನಲ್ಲಿಯೂ ಅವರ ಸ್ಟ್ರೇಕ್ ರೇಟ್ 150 ರ ಆಸುಪಾಸಿನಲ್ಲಿದೆ. ಮೊದಲ ಎಸೆತದಿಂದಲೇ ಆಕ್ರಮಣಕಾರಿಯಾಗಿ ಆಡುವ ಶಾ ಪವರ್ ಪ್ಲೇನ ಸಂಪೂರ್ಣ ಲಾಭವನ್ನು ಹೇಗೆ ಪಡೆಯಬೇಕೆಂದು ತಿಳಿದಿದ್ದಾರೆ. ಇದೀಗ ಸಿಎಸ್‌ಕೆ ಅಗ್ರ ಕ್ರಮಾಂಕದಲ್ಲಿ ಬಿರುಗಾಲಿ ಇನ್ನಿಂಗ್ಸ್ ಆಡಲು ಶಾ ಅವರಂತಹ ಬ್ಯಾಟರ್ ಅಗತ್ಯವಿದೆ.
ಪೃಥ್ವಿ ಶಾ ಅವರಿಗೆ ಈಗ 25 ವರ್ಷ ವಯಸ್ಸು. ಇದುವರೆಗೆ ಐಪಿಎಲ್ 79 ಪಂದ್ಯಗಳನ್ನು ಆಡಿದ್ದಾರೆ. ಆದ್ದರಿಂದ ಅವರಿಗೆ ಐಪಿಎಲ್‌ನ ಸಾಕಷ್ಟು ಅನುಭವವಿದೆ. ಅವರು ಹೆಚ್ಚಿನ ಪಂದ್ಯಗಳನ್ನು ಆರಂಭಿಕ ಬ್ಯಾಟರ್ ಆಗಿ ಆಡಿದ್ದಾರೆ. ಆದ್ದರಿಂದ ಐಪಿಎಲ್‌ನಲ್ಲಿ ಹೊಸ ಚೆಂಡಿನಲ್ಲಿ ಆಡಿರುವ ಅವನುಭ ಕೂಡ ಇದ್ದು, 2000 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 14 ಅರ್ಧಶತಕ ಸೇರಿವೆ. ಅವಕಾಶ ಸಿಗದೆ ಪೃಥ್ವಿ ಶಾ ಅದ್ಭುತ ವೃತ್ತಿಜೀವನ ಕೊನೆಗೊಳ್ಳುತ್ತಿರುವುದರಿಂದ ಸಿಎಸ್‌ಕೆ ಅವರನ್ನು ಬಳಸಿಕೊಳ್ಳಬಹುದು.