Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ಪಂಜಾಬ್ ಪರ ಶ್ರೇಯಸ್‌ ಅಯ್ಯರ್ ಸಿಡಿಲಬ್ಬರದ ಬ್ಯಾಟಿಂಗ್; ಗುಜರಾತ್‌ಗೆ ಬೃಹತ್ ಗುರಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಪಂದ್ಯಗಳು ಭರದಿಂದ ಸಾಗುತ್ತಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್ 2025 ರ ಐದನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್‌ ನಡುವೆ ನಡೆಯುತ್ತಿದೆ. ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಮೊದಲ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ. ಗುಜರಾತ್ ಟೈಟನ್ಸ್ ತಂಡದ ಬೌಲರ್‍‌ಗಳನ್ನು ಅಯ್ಯರ್ ಬೆಂಡೆತ್ತಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಪರ ನಾಯಕ ಶ್ರೇಯಸ್ ಅಯ್ಯರ್, ಪ್ರಿಯಾಂಶ್ ಆರ್ಯ ಮತ್ತು ಶಶಾಂಕ್ ಸಿಂಗ್ ಸ್ಪೋಟಕ ಇನ್ನಿಂಗ್ಸ್ ಆಡಿದರು. ಅಯ್ಯರ್ ಅಜೇಯ 97 ರನ್ ಗಳಿಸಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಹೀಗಾಗಿ ಪಂಜಾಬ್ ನಿಗದಿತ 20 ಓವರ್‍‌ಗಳಲ್ಲಿ 5 ನಷ್ಟಕ್ಕೆ 243 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದೆ.

IPL 2025 Punjab Kings set Gujarat Titans a target of 244 runs

ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭಮನ್ ಗಿಲ್ ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಆರಂಭಿಸಿತು. ಆರಂಭಿಕ ಬ್ಯಾಟರ್ ಪ್ರಭಸಿಮ್ರನ್ ಸಿಂಗ್ ಕೇವಲ 5 ರನ್ ಗಳಿಸಿ ಔಟಾದರು. ನಂತರ ಒಂದಾದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಪ್ರಿಯಾಂಶ್ ಆರ್ಯ ಅದ್ಭುತ ಜೊತೆಯಾಟ ಆಡಿದರು. ಬಿರುಸಿನ ಬ್ಯಾಟಿಂಗ್ ಮಾಡಿದ ಪ್ರಿಯಾಂಶ್ ಆರ್ಯ 23 7 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 47 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿ ವಿಕೆಟ್ ಕಳೆದುಕೊಂಡರು.

ಪ್ರಿಯಾಂಶ್ ಆರ್ಯ ಔಟಾದ ನಂತರ ಬಂದ ಅಜ್ಮತುಲ್ಲಾ ಒಮರ್ಜೈ ಕೂಡ 16 ರನ್ ಗಳಿಸಿ ವಿಕೆಟ್ ಕಳೆದುಕೊಂಡರೆ, ಸ್ಪೋಟಕ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಶೂನ್ಯಕ್ಕೆ ಔಟಾದರು. ಮಾರ್ಕಸ್ ಸ್ಟೊಯಿನಿಸ್ ಕೂಡ ಕೇವಲ 20 ರನ್‌ಗಳಿಗೆ ತಮ್ಮ ವಿಕೆಟ್ ಒಪ್ಪಿಸಿದರು.

ಅಯ್ಯರ್‍‌ಗೆ ಶಶಾಂಕ್ ಸಾಥ್

ಕೊನೆಯ ನಾಲ್ಕು ಓವರ್‍‌ಗಳಲ್ಲಿ ಶ್ರೇಯಸ್ ಅಯ್ಯರ್ ಅವರಿಗೆ ಶಶಾಂಕ್ ಸಿಂಗ್ ಸಾಥ್ ನೀಡಿದರು. ಈ ಜೋಡಿ ಗುಜರಾತ್ ಟೈಟನ್ಸ್ ಬೌಲರ್‍‌ಗಳ ಬೆವರಿಳಿಸಿದರು. ಶಶಾಂಕ್ ಕೇವಲ16 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‍‌ಗಳೊಂದಿಗೆ ಅಜೇಯ 44 ರನ್ ಗಳಿಸಿದರು. ಕೊನೆಯ ಓವರ್‌ನಲ್ಲಿ ಅವರು ಬರೋಬ್ಬರಿ 23 ರನ್ ಚಚ್ಚಿದರು. ಹೀಗಾಗಿ 42 ಎಸೆತಗಳಲ್ಲಿ 5 ಬೌಂಡರಿ ಹಾಗು 9 ಸಿಕ್ಸರ್‍‌ಗಳ ಸಹಾಯದಿಂದ 97 ರನ್ ಗಳಿಸಿ ಶತಕ ಪೂರೈಸಲು ಕಾಯುತ್ತಿದ ಅಯ್ಯರ್‌ಗೆ ಕೊನೆಯ ಓವರ್‍‌ ಸ್ಟ್ರೈಕ್ ಸಿಗಲಿಲ್ಲ. ಒಂದು ವೇಳೆ ಅಯ್ಯರ್ 100 ರನ್ ಗಳಿಸುವಲ್ಲಿ ಯಶಸ್ವಿಯಾದರೆ, ಅದು ಐಪಿಎಲ್‌ನಲ್ಲಿ ಅವರ ಮೊದಲ ಶತಕವಾಗುತ್ತಿತ್ತು.

Story first published: Tuesday, March 25, 2025, 21:32 [IST]
Other articles published on Mar 25, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+