IPL 2025: ಕೆಕೆಆರ್ ಗೌರವ ಉಳಿಸಿದ ಕ್ವಿಂಟನ್
ಐಪಿಎಲ್ 2025ರ ಆರನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಗುವಾಹಟಿಯಲ್ಲಿ ಮುಖಾಮುಖಿಯಾಗಿದವು. ಮೊದಲ ಪಂದ್ಯದಲ್ಲಿ ಸೋತಿದ್ದ ಕೆಕೆಆರ್, ಈಗ ಗೆಲುವಿನ ಖಾತೆ ತೆರೆದಿದೆ. ರಿಯಾನ್ ಪರಾಗ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಎರಡನೇ ಸೋಲು ಎದುರಾಗಿದೆ. ರಾಜಸ್ಥಾನ ತಂಡವನ್ನು ಕೆಕೆಆರ್ 8 ವಿಕೆಟ್‌ಗಳಿಂದ ಸೋಲಿಸಿತು. ಕೆಕೆಆರ್ ಗೆಲುವಿನಲ್ಲಿ ಸ್ಟಾರ್ ವಿಕೆಟ್‌ಕೀಪರ್- ಬ್ಯಾಟರ್ ಕ್ವಿಂಟನ್ ಡಿ ಕಾಕ್ ಪ್ರಮುಖ ಪಾತ್ರವಹಿಸಿದರು. ಅವರು ಏಕಾಂಗಿಯಾಗಿ ನಿಂತು ಕೆಕೆಆರ್ ತಂಡಕ್ಕೆ ಪಂದ್ಯ ಗೆಲ್ಲಿಸಿಕೊಟ್ಟರು.
ಈ ಪಂದ್ಯ ಟಾಸ್ ಗೆದ್ದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಕೆಕೆಆರ್ ತಂಡದ ಬೌಲರ್‌ಗಳು ನಾಯಕನ ನಿರೀಕ್ಷೆಗಳಿಗೆ ತಕ್ಕಂತೆ ಪ್ರದರ್ಶನ ನೀಡಿದರು. ಎಲ್ಲಾ ಬೌಲರ್‌ಗಳು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ವೈಭವ್ ಅರೋರಾ, ಹರ್ಷಿತ್ ರಾಣಾ, ಮೊಯಿನ್ ಅಲಿ ಮತ್ತು ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದು ಮಿಂಚಿದರು. ಸ್ಪೆನ್ಸರ್ ಜಾನ್ಸನ್ ಒಂದು ವಿಕೆಟ್ ಪಡೆದರು. ಅತ್ಯುತ್ತಮ ಬೌಲಿಂಗ್‌ನಿಂದಾಗಿ ಕೆಕೆಆರ್ ತಂಡಕ್ಕೆ ರಾಜಸ್ತಾನ 152 ರನ್‌ಗಳ ಸುಲಭ ಗುರಿ ನೀಡಿತು.

ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟಿಂಗ್ ದುರ್ಬಲವಾಗಿ ಕಾಣುತ್ತಿತ್ತು. ಸ್ಫೋಟಕ ಬ್ಯಾಟರ್ ಯಶಸ್ವಿ ಜೈಸ್ವಾಲ್ 29 ರನ್ ಗಳಿಸಿದರೆ, ನಾಯಕ ರಿಯಾನ್ ಪರಾಗ್ 25 ರನ್ ಗಳಿಸಿ ಔಟಾದರು. ಧ್ರುವ್ ಜುರೆಲ್ 33 ರನ್ ಗಳಿಸುವ ಮೂಲಕ ತಂಡದ ಸ್ಕೋರ್ ಅನ್ನು 151ಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಗೌರವ ಉಳಿಸಿ ಡಿ ಕಾಕ್
ಕಳೆದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಸೋತ ನಂತರ, ಕೆಕೆಆರ್ ಅದ್ಭುತ ಪುನರಾಗಮನ ಮಾಡಿದೆ. ಕೋಲ್ಕತ್ತಾ ಪರ ಕ್ವಿಂಟನ್ ಡಿ ಕಾಕ್ ಕೇವಲ 61 ಎಸೆತಗಳಲ್ಲಿ 97 ರನ್ ಗಳಿಸಿದರು. ರಾಜಸ್ಥಾನ ಬೌಲರ್‍ಗಳನ್ನು ಸಮರ್ಥವಾಗಿ ಎದುರಿಸಿ ಡಿ ಕಾಕ್ ಕೆಕೆಆರ್ ಗೆಲುವಿಗೆ ಪ್ರಮುಖ ಕಾರಣವಾದರು.
ಕಳೆದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಡಿ ಕಾಕ್ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲವಾಗಿದ್ದರು. ಆದರೆ ರಾಜಸ್ಥಾನ ಎದುರು ಏಕಾಂಗಿಯಾಗಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ಮಾಡುವ ಮೂಲಕ ಎಲ್ಲರ ಚಿತ್ತ ಕದ್ದರು. ನಾಯಕ ರಹಾನೆ 18 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು, ನಂತರ ಅಂಗಕೃಷ್ಣ ರಘುವಂಶಿ 22 ರನ್ ಗಳಿಸಿ ಅಜೇಯರಾಗುಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications