IPL 2025 CSK: ಧೋನಿ ಹೆಲಿಕಾಪ್ಟರ್ ಶಾಟ್ ನೋಡಿ ಅಶ್ವಿನ್ ಶಾಕ್!
ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿ ಸುಮಾರು 6 ವರ್ಷಗಳಾಗಿವೆ. ಆದರೆ ಇಂದಿಗೂ ಬೌಲರ್‌ಗಳಿಗೆ ಬೆವರಿಳಿಸುವ ಶಕ್ತಿ ಧೋನಿಗಿದೆ. ಐಪಿಎಲ್ 2025ರ ಟೂರ್ನಿ ಮಾರ್ಚ್ 22 ರಿಂದ ಪ್ರಾರಂಭವಾಗಲಿದ್ದು, ಕ್ರಿಕೆಟ್ ಅಭಿಮಾನಿಗಳು ಪಂದ್ಯಗಳನ್ನು ನೋಡಲು ಕಾಯುತ್ತಿದ್ದಾರೆ. ಅದಕ್ಕೂ ಮುನ್ನ ಎಲ್ಲಾ ಐಪಿಎಲ್ ಫ್ರಾಂಚೈಸಿ ತಂಡಗಳು ಅಭ್ಯಾಸದಲ್ಲಿ ನಿರತವಾಗಿವೆ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಆಟಗಾರರು ಕೂಡ ನೆಟ್ಸ್‌ನಲ್ಲಿ ಗಂಟೆಗಟ್ಟಲೆ ಅಭ್ಯಾಸ ಮಾಡುತ್ತಿದ್ದಾರೆ. ಈ ವೇಳೆ ಧೋನಿ ಬ್ಯಾಟಿಂಗ್ ಎಲ್ಲರ ಗಮನ ಸೆಳೆದಿದೆ.
ಸಿಎಸ್‌ಕೆ ಅಭ್ಯಾಸ ಶಿಬಿರದಲ್ಲಿ ಎಂಎಸ್ ಧೋನಿ ತನ್ನ ವಿಶೇಷ ಹೆಲಿಕಾಪ್ಟರ್ ಶಾಟ್ ಅನ್ನು ಪ್ರದರ್ಶಿಸಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಐಪಿಎಲ್ 2024ರ ನಂತರ ಧೋನಿ ನಿವೃತ್ತಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಆದರೆ ಧೋನಿ ಮತ್ತೊಂದು ಸೀಸನ್‌ನಲ್ಲಿ ಅಭಿಮಾನಿಗಳನ್ನು ರಂಜಿಸಲು ಸಿದ್ಧರಾಗಿದ್ದಾರೆ. ಈ ಬಾರಿಯೂ ಇದು ಧೋನಿಯ ಕೊನೆಯ ಸೀಸನ್ ಆಗಿರುತ್ತದೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಧೋನಿಗೆ 43 ವರ್ಷ, ಆದ್ದರಿಂದ ಐಪಿಎಲ್ 2026 ಆಡಲು ಕಷ್ಟವಾಗಬಹುದು ಎನ್ನಲಾಗುತ್ತಿದೆ. ಐಪಿಎಲ್ 2025ರಲ್ಲಿ ಧೋನಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಆದರೆ ಧೋನಿ ಹೆಲಿಕಾಪ್ಟರ್ ಶಾಟ್ ಮಾತ್ರ ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ರವಿಚಂದ್ರನ್ ಆಶ್ವಿನ್ ಅವರನ್ನು ಅಚ್ಚರಿಗೊಳಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಧೋನಿಗೆ ಸಿಎಸ್‌ಕೆ ಬೌಲರ್ ಮತಿಶಾ ಪತಿರಾನ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ಪತಿರಾನ ಧೋನಿಗೆ ಯಾರ್ಕರ್ ಎಸೆಯಲು ಪ್ರಯತ್ನಿಸಿದರು. ಆಗ ಧೋನಿ ಹೆಲಿಕಾಪ್ಟರ್ ಶಾಟ್ ಆಡಲು ತಡಮಾಡಲಿಲ್ಲ. ಅವರು ತಮ್ಮ ಅದ್ಭುತ ಶಾಟ್ ಆಡುವ ಮೂಲಕ ಬೌಂಡರಿ ಗೆರೆ ಬಳಿಗೆ ಚೆಂಡು ಕಳುಹಿಸಿದರು. ಇನ್ನೊಂದು ತುದಿಯಲ್ಲಿ ನಿಂತಿದ್ದ ಅಶ್ವಿನ್ ಅವರು ಧೋನಿ ಹೆಲಿಕಾಪ್ಟರ್ ಶಾಟ್ ನೋಡಿ ಶಾಕ್ ಆದರು. ಐಪಿಎಲ್ 2024ರಲ್ಲಿಯೂ ಧೋನಿ ಕೂಡ ಸ್ಫೋಟಕ ಶೈಲಿಯಲ್ಲಿ ಬ್ಯಾಟಿಂಗ್ ಮಾಡುವ ಸದ್ದು ಮಾಡಿದ್ದರು. ಈ ಬಾರಿಯೂ ಧೋನಿ ಬ್ಯಾಟಿಂಗ್ ನೋಡಲೇಬೇಕು ಎನ್ನುತ್ತಿದ್ದಾರೆ ಅಭಿಮಾನಿಗಳು.
ಧೋನಿ ಫಿಟ್ನೆಸ್
ಧೋನಿ ಅವರ ಫಿಟ್ನೆಸ್ ಬಗ್ಗೆ ಟೀಮ್ ಇಂಡಿಯಾ ಮಾಜಿ ದಿಗ್ಗಜ ಸ್ಪಿನ್ನರ್ ಹರ್ಭಜನ್ ಸಿಂಗ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. 'ನಾನು ಇತ್ತೀಚೆಗೆ ಸ್ನೇಹಿತನ ಮಗಳ ಮದುವೆಯಲ್ಲಿ ಅವರನ್ನು ಭೇಟಿಯಾದೆ. ಅವರು ಸಾಕಷ್ಟು ಫಿಟ್ ಆಗಿ ಕಾಣುತ್ತಿದ್ದರು. ಈ ವಯಸ್ಸಿನಲ್ಲಿ ನೀವು ವರ್ಕೌಟ್ ಮಾಡುತ್ತಿರುವುದು ಕಷ್ಟಕರವಲ್ಲವೇ? ಎಂದು ಕೇಳಿದೆ, "ಹೌದು ಇದು ಕಷ್ಟ, ಆದರೆ ಇದು ನನಗೆ ತುಂಬಾ ಇಷ್ಟದ ಕೆಲಸ. ನನಗೆ ವರ್ಕೌಟ್ ಮಾಡುವುದು ಸಂತೋಷವನ್ನು ನೀಡುತ್ತದೆ ಎಂದು ಉತ್ತರಿಸಿರುವ ಬಗ್ಗೆ ಹರ್ಭಜನ್ ಸಿಂಗ್ ಹೇಳಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications