ಇಂದು ಅಕ್ಟೋಬರ್ 31 ಐಪಿಎಲ್‌ನ 10 ಫ್ರಾಂಚೈಸಿ ತಂಡಗಳು ಆಟಗಾರರನ್ನು ಉಳಿಸಿಕೊಳ್ಳಲು ಕೊನೆಯ ದಿನವಾಗಿದೆ. 10 ಫ್ರಾಂಚೈಸಿ ತಂಡಗಳು ತಾವು ಉಳಿಸಿಕೊಂಡಿರುವ ಮತ್ತು ಬಿಟ್ಟಿರುವ
ಆಟಗಾರರ ಪಟ್ಟಿಯನ್ನು ಸಂಜೆ 5 ಗಂಟೆಯೊಳಗೆ ಬಿಸಿಸಿಐಗೆ ಸಲ್ಲಿಸಬೇಕಾಗಿದೆ. ನಂತರ ಬಿಸಿಸಿಐ ಅಧಿಕೃತವಾಗಿ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.
ಆಟಗಾರರಿಂದ ಹಿಡಿದು ಅಭಿಮಾನಿಗಳವರೆಗೆ ಐಪಿಎಲ್ ರಿಟೆನ್ಷನ್ ಭಾರೀ ಕುತೂಹಲ ಮೂಡಿಸಿದೆ. ಇದರ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ಕೂಡ ಅಭಿಮಾನಿಗಳ ತಲೆ ಹುಳ ಬಿಟ್ಟಿದೆ. ಆರ್‌ಸಿಬಿ ಪಜಲ್ ರೀತಿಯಲ್ಲಿ ರಿಟೈನ್ ಆಗುವ ಆಟಗಾರರ ಹೆಸರನ್ನು ಬಹಿರಂಗಪಡಿಸಿದ್ದು, ಅಭಿಮಾನಿಗಳ ತಲೆಗೆ ಕೆಲಸ ಕೊಟ್ಟು ಅಚ್ಚರಿ ಮೂಡಿಸಿದೆ.

ಐಪಿಎಲ್ 2025ರ ಹರಾಜು ಪ್ರಕ್ರಿಯೆಗೂ ಮುನ್ನ ಎಲ್ಲರ ಕಣ್ಣು ಆರ್‌ಸಿಬಿ ಮೇಲಿದೆ. ಆರ್‌ಸಿಬಿ ಉಳಿಸಿಕೊಂಡಿರುವ ಆಟಗಾರರ ಹೆಸರನ್ನು ಪಜಲ್ (ಸುಡೋಕು) ರೀತಿಯಲ್ಲಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಬಿಸಿಸಿಐ ಹೊರಡಿಸಿರುವ ಹೊಸ ನಿಯಮದ ಪ್ರಕಾರ ಯಾವುದೇ ಐಪಿಎಲ್ ಫ್ರಾಂಚೈಸಿ ತಂಡ ಗರಿಷ್ಠ 6 ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬೇಕು. ಆದರೆ ಆರ್‌ಸಿಬಿ ಹಂಚಿಕೊಂಡಿರುವ ಪಜಲ್ ಪೋಸ್ಟ್‌ನಲ್ಲಿ 9 ಆಟಗಾರರ ಹೆಸರು ಬರುತ್ತಿವೆ. ಹೀಗಾಗಿ ಆರ್‌ಸಿಬಿ ಉಳಿಸಿಕೊಳ್ಳುವ ಆ 6 ಆಟಗಾರರು ಯಾರು ಎಂಬುದು ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟದಂತಾಗಿದೆ.
ಐಪಿಎಲ್ 2025: ಆರ್‌ಸಿಬಿಯಲ್ಲಿ ವಿರಾಟ್ ಕೊಹ್ಲಿ ಜೊತೆ ರೋಹಿತ್ ಶರ್ಮಾ ಆಡ್ತಾರಾ?; ಹಿಟ್‌ಮ್ಯಾನ್ ಬೆಲೆ ಎಷ್ಟು ಗೊತ್ತಾ?
ಐಪಿಎಲ್ ಮೂಲಗಳ ಪ್ರಕಾರ, ಆರ್‌ಸಿಬಿ ಫ್ರಾಂಚೈಸಿ ಕೇವಲ 4 ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲಿದೆ. ಇದರಲ್ಲಿ ಸ್ಟಾರ್ ಬ್ಯಾಟರ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಮೊದಲನೇ ಆಯ್ಕೆ ಆಗಿದ್ದಾರೆ. ನಂತರ ವೇಗದ ಬೌಲರ್ ಮೊಹಮ್ಮದ್ ಸಿರಾಜ್, ಯುವ ಸ್ಪೋಟಕ ಬ್ಯಾಟರ್ ರಜತ್ ಪಾಟಿದಾರ್ ಮತ್ತು ವಿದೇಶಿ ಆಟಗಾರ ವಿಲ್ ಜಾಕ್ಸ್ ಅವರನ್ನು ಆರ್‌ಸಿಬಿ ತಂಡದಲ್ಲಿ ಉಳಿಸಿಕೊಳ್ಳಿದೆ. ಆದರೆ ಈ ಬಗ್ಗ ಆರ್‌ಸಿಬಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಕಳೆದ ಆವೃತ್ತಿಯಲ್ಲಿ ಆರ್‌ಸಿಬಿಯ ಪಯಣವು ಯಾವ ಸಿನಿಮಾಕ್ಕೂ ಕಡಿಮೆಯೇನಿಲ್ಲ. ಆರಂಭದಲ್ಲಿ ಸೋಲಿನ ಸುಳಿಗೆ ಸಿಲುಕಿದ್ದ ಆರ್‌ಸಿಬಿ ಎಂಟು ಪಂದ್ಯಗಳಲ್ಲಿ 7ರಲ್ಲಿ ಸೋತಿತ್ತು. ಬಳಿಕ ಆರ್‌ಸಿಬಿ ಗೆದ್ದ ಪಂದ್ಯಗಳೆಲ್ಲವು ದಾಖಲೆ. ಕೊನೆಯಲ್ಲಿ ಆಡಿದ 6 ಪಂದ್ಯಗಳನ್ನು ಆರ್‌ಸಿಬಿ ಗೆಲ್ಲುವ ಮೂಲಕ ಪ್ಲೇಆಫ್‌ಗೆ ಏರಿತು. ವಿರಾಟ್ ಕೊಹ್ಲಿ 15 ಪಂದ್ಯಗಳಲ್ಲಿ 1 ಶತಕ ಮತ್ತು 5 ಅರ್ಧಶತಕಗಳು ಸೇರಿದಂತೆ 741 ರನ್‌ಗಳನ್ನು ಬಾರಿಸಿದ್ದರು. ಕೊಹ್ಲಿ ಐಪಿಎಲ್ 2024ರಲ್ಲಿ ಅತಿಹೆಚ್ಚು ರನ್ ಗಳಿಸಿದ್ದಕ್ಕಾಗಿ ಆರೆಂಜ್ ಕ್ಯಾಪ್ ಅನ್ನು ಗೆದ್ದಿದ್ದರು. ಕೊಹ್ಲಿ ಅವರ ಅದ್ಭುತ ಪ್ರದರ್ಶನ ಆರ್‌ಸಿಬಿ ಮತ್ತೆ ಪುಟಿದೇಳುವಂತೆ ಮಾಡಿತ್ತು.
ವಿರಾಟ್ ಕೊಹ್ಲಿ ಜೊತೆಗೆ ನಾಯಕ ಫಾಫ್ ಡು ಪ್ಲೆಸಿಸ್ ಕೂಡ 438 ರನ್‌ಗಳನ್ನು ಐಪಿಎಲ್ 2024ರಲ್ಲಿ ಭಾರಿಸಿದ್ದರು. ಆದರೆ ಬೌಲಿಂಗ್ ವಿಭಾಗದಲ್ಲಿ ವೇಗದ ಬೌಲರ್‌ಗಳಾದ ಮೊಹಮ್ಮದ್ ಸಿರಾಜ್ ಮತ್ತು ಯಶ್ ದಯಾಲ್ ಭರ್ಜರಿ ಪ್ರದರ್ಶನ ನೀಡಿದ್ದರು. ಇಬ್ಬರು ವೇಗಿಗಳು ತಲಾ 15 ವಿಕೆಟ್ ಪಡೆದು ಮಿಂಚಿದ್ದರು.