Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs CSK IPL 2025: ಚೆನ್ನೈ ಗೆಲುವಿಗೆ 197 ರನ್‌ಗಳ ಗುರಿ ನೀಡಿದ ಆರ್‌ಸಿಬಿ: ರಜತ್‌ ಅರ್ಧಶತ

ಭರವಸೆಯ ಬ್ಯಾಟರ್‌ ಹಾಗೂ ನಾಯಕ ರಜತ್‌ ಪಟಿದಾರ್‌ ಬಾರಿಸಿದ ಅರ್ಧಶತಕ ಹಾಗೂ ಕೆಳ ಕ್ರಮಾಂಕದಲ್ಲಿ ಆಲ್‌ರೌಂಡರ್‌ ಟೀಮ್ ಡೇವಿಡ್‌ ತೋರಿಸಿದ ಕೆಚ್ಚೆದೆಯ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ 18ನೇ ಆವೃತ್ತಿಯ 8ನೇ ಪಂದ್ಯದಲ್ಲಿ ಸಿಎಸ್‌ಕೆ ತಂಡಕ್ಕೆ 197 ರನ್‌ಗಳ ಗುರಿಯನ್ನು ನೀಡಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶವನ್ನು ಪಡೆದ ಆರ್‌ಸಿಬಿ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಫಿಲ್‌ ಸಾಲ್ಟ್‌ ಹಾಗೂ ವಿರಾಟ್ ಕೊಹ್ಲಿ ಮೊದಲ ವಿಕೆಟ್‌ಗೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ವೇಳೆ ಫಿಲ್‌ ಸಾಲ್ಟ್‌ ಅಪ್‌ಡೇಟ್‌ ವರ್ಷನ್‌ನಲ್ಲಿ ಬ್ಯಾಟ್ ಮಾಡಿದ್ದು ಕಂಡು ಬಂದಿತು. ಇವರು ಇನಿಂಗ್ಸ್‌ನ 2ನೇ ಓವರ್‌ನಲ್ಲಿ 16 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು.

IPL 2025 RCB vs CSK Toss Update Match Report Key Highlights

ಆರಂಭಿಕರಾದ ಫಿಲ್‌ ಸಾಲ್ಟ್‌ ಹಾಗೂ ವಿರಾಟ್ ಕೊಹ್ಲಿ ಜೋಡಿ ಮೊದಲ ವಿಕೆಟ್‌ಗೆ 5 ಓವರ್‌ಗಳಲ್ಲಿ 45 ರನ್‌ ಸೇರಿಸಿತು. ಈ ವೇಳೆ ಸಾಲ್ಟ್ 16 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 32 ರನ್‌ ಬಾರಿಸಿ ಔಟ್ ಆದರು. ಇನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ದೇವದತ್ ಪಡಿಕ್ಕಲ್‌ ಸಹ ಆರ್ಭಟ ನಡೆಸುವ ಸೂಚನೆ ನಿಡಿದರು. ಇವರು 14 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 27 ರನ್‌ ಬಾರಿಸಿ ಔಟ್ ಆದರು.

ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಅಮೋಘ ಬ್ಯಾಟಿಂಗ್ ನಡೆಸುತ್ತಿದ್ದರು. ಇವರು ಸ್ಪಿನ್ ಬೌಲ್‌ ನೂರ್ ಅಹ್ಮದ್‌ ಅವರ ಎಸೆತದಲ್ಲಿ ಮಿಡ್‌ ವಿಕೆಟ್‌ ಮೇಲೆ ಸಿಕ್ಸರ್‌ ಬಾರಿಸಲು ಹೋಗಿ ರವಿಚಂದ್ರನ್‌ ಅಶ್ವಿನ್‌ ಹಿಡಿದ ಕ್ಯಾಚ್‌ಗೆ ಬಲಿಯಾದರು. ಇವರು 30 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 31 ರನ್‌ ಬಾರಿಸಿದ್ದರು.

ರಜತ್ ಅರ್ಧಶತಕ

ಆರ್‌ಸಿಬಿ ತಂಡದ ನಾಯಕ ರಜತ್ ಪಟಿದಾರ್ ಮಹತ್ವದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದರು. ಇವರು ತಮ್ಮ ನೈಜ್ಯ ಆಟವನ್ನು ಆಡಿ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿ ತಂಡಕ್ಕೆ ಆಧಾರವಾದರು. ರಜತ್‌ ಪಟಿದಾರ್‌ 32 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್‌ ಸಹಾಯದಿಂದ 51 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

IPL 2025 RCB vs CSK Toss Update Match Report Key Highlights

ಕೊನೆಯಲ್ಲಿ ಆರ್‌ಸಿಬಿ ತಂಡದ ಪರ ಟೀಮ್ ಡೇವಿಡ್‌ ಅಬ್ಬರಿಸಿದರು. ಇವರು ಅಬ್ಬರದ ಆಟದ ಪರಿಣಾಮವೇ ಬೆಂಗಳೂರು ತಂಡ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕುವಲ್ಲಿ ಸಫಲವಾಯಿತು. ಇವರು 8 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 22 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 196 ರನ್‌ ಕಲೆ ಹಾಕಿತು.

ಚೆನ್ನೈ ತಂಡದ ಪರ ನೂರ್ ಅಹ್ಮದ್‌ 36 ರನ್‌ ನೀಡಿ ಮೂರು ವಿಕೆಟ್‌ ಕಬಳಿಸಿದರೆ, ಮತೀಶ್‌ ಪತಿರಾಣಾ 36 ರನ್‌ ನೀಡಿ 2 ವಿಕೆಟ್‌ ಕಬಳಿಸಿದರು.

Story first published: Friday, March 28, 2025, 19:03 [IST]
Other articles published on Mar 28, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+