For Quick Alerts
ALLOW NOTIFICATIONS  
For Daily Alerts
 

Turning Point: ಚೆಪಾಕ್‌ನಲ್ಲಿ ಆರ್‌ಸಿಬಿ ಬೌಲರ್‌ಗಳ ಅರ್ಭಟ

ಐಪಿಎಲ್ 2025 ರಲ್ಲಿ ರಜತ್ ಪಾಟಿದಾರ್ ಮುನ್ನಡೆಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ವಿಭಿನ್ನ ಲಯದಲ್ಲಿ ಕಾಣಿಸಿಕೊಳ್ಳುತ್ತಿದೆ. ಹಾಲಿ ಚಾಂಪಿಯನ್‌ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ಸೋಲಿಸಿದ ನಂತರ, ಆರ್‌ಸಿಬಿ 5 ಬಾರಿ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವನ್ನು ಕೂಡ ಸೋಲಿಸಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ಸಾಧಿಸಲು ಸಾಧ್ಯವಾಗದ ಗೆಲುವನ್ನು ರಜತ್ ಪಾಟಿದಾರ್ ಸಾಧಿಸಿದ್ದಾರೆ. ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ ತಂಡವು 17 ವರ್ಷಗಳ ನಂತರ ಚೆಪಾಕ್‌ ಮೈದಾನದಲ್ಲಿ ಸಿಎಸ್‌ಕೆ ತಂಡವನ್ನು 50 ರನ್‌ಗಳಿಂದ ಸೋಲಿಸಿ ಇತಿಹಾಸ ನಿರ್ಮಿಸಿದೆ.

ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 196 ರನ್‌ ಗಳಿಸಿತು. ಆರ್‍‌ಸಿಬಿ ನೀಡಿದ ಸವಾಲಿನ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 146 ರನ್‌ ಸೇರಿಸಿ ಸೋಲು ಕಂಡಿತು.

IPL 2025 Royal Challengers Bengaluru vs Chennai Super Kings Match Turning Point

ಆರ್‌ಸಿಬಿ ತಂಡದಿಂದ ಬಿಗಿ ಬೌಲಿಂಗ್ ದಾಳಿ ನಡೆಯಿತು. ಕಳೆದ ಹಲವು ವರ್ಷಗಳಿಂದ ಆರ್‍‌ಸಿಬಿ ಬೌಲಿಂಗ್ ಸಮಸ್ಯೆ ಎದುರಿಸುತ್ತಿತ್ತು. ಆದರೆ ಐಪಿಎಲ್ 2025 ರಲ್ಲಿ ಆರ್‍‌ಸಿಬಿ ಹೊಸ ಬೌಲಿಂಗ್ ತಂಡವಾಗಿ ಬದಲಾಗಿದೆ. ಕೆಕೆಆರ್ ಮತ್ತು ಸಿಎಸ್‌ಕೆ ವಿರುದ್ಧ ಆರ್‍‌ಸಿಬಿ ಬೌಲರ್‍‌ಗಳು ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದ್ದಾರೆ. ಪರಿಣಾಮ ಇಂದು ಚೆಪಾಕ್ ಮೈದಾನದಲ್ಲಿ 17 ವರ್ಷಗಳ ಬಳಿಕ ಸಿಎಸ್‌ಕೆ ವಿರುದ್ಧ ಆರ್‍‌ಸಿಬಿ ಗೆಲುವು ಸಾಧಿಸಿದೆ.

ಕಳೆದ 17 ವರ್ಷಗಳಲ್ಲಿ ತವರಿನಲ್ಲಿ ಸಿಎಸ್‌ಕೆ ತಂಡ ಆರ್‍‌ಸಿಬಿ ಮೇಲೆ ಪ್ರಾಬಲ್ಯ ಸಾಧಿಸಿತ್ತು. ಆದರೆ ಐಪಿಎಲ್ 2025 ರಲ್ಲಿ ಆರ್‍‌ಸಿಬಿ ಬೌಲರ್‍‌ಗಳು ಈ ಲೆಕ್ಕಚಾರವನ್ನು ಉಲ್ಟಾ ಮಾಡಿದರು. ಮೊದಲ ಆರು ಓವರ್‌ಗಳ ಅಂತ್ಯಕ್ಕೆ 3 ವಿಕೆಟ್‌ಗೆ 30 ರನ್ ಗಳಿಸಿದ್ದ ಸಿಎಸ್‌ಕೆ ತಂಡ ಸಂಕಷ್ಟದಲ್ಲಿತ್ತು. ಇದಕ್ಕಾಗಿ ಆರ್‌ಸಿಬಿ ಬೌಲರ್‌ಗಳಿಗೆ ಶ್ರೇಯಸ್ಸು ಸಲ್ಲಬೇಕು. ಈ ಮೂಲಕ ಸಿಎಸ್‌ಕೆ ತಂಡವನ್ನು ತವರಿನಲ್ಲಿ ಹೀನಾಯವಾಗಿ ರಜತ್ ಪಡೆ ಸೋಲಿಸಿತು. ಆರ್‍‌ಸಿಬಿ ಬೌಲರ್‍‌ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಇದು ಪಂದ್ಯದ ಟರ್ನಿಂಗ್ ಪಾಯಿಂಟ್ ಆಯಿತು.

ಆರ್‍‌ಸಿಬಿ ಪರ ಸ್ಟಾರ್ ವೇಗದ ಬೌಲರ್ ಜೋಶ್ ಹೇಜಲ್‌ವುಡ್ 3 ವಿಕೆಟ್ ಕಬಳಿಸಿ ಮಿಂಚಿದರೆ, ಯಶ್ ದಯಾಳ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ತಲಾ 2 ವಿಕೆಟ್ ಪಡೆದರು. ಸಿಎಸ್‌ಕೆ ಪರ ರಾಚಿನ್ ರವೀಂದ್ರ ಅತಿ ಹೆಚ್ಚು ರನ್ ಗಳಿಸಿದರು. ಅವರು 41 ರನ್‌ಗಳ ಇನ್ನಿಂಗ್ಸ್ ಆಡಿದರು. ತಂಡದ ಅತ್ಯುತ್ತಮ ಪ್ರದರ್ಶನದ ಆಧಾರದ ಮೇಲೆ, ಆರ್‌ಸಿಬಿ 6155 ದಿನಗಳ ನಂತರ ಚೆಪಾಕ್‌ನಲ್ಲಿ ಗೆಲುವಿನ ನಗೆ ಬೀರಿತು.

Story first published: Friday, March 28, 2025, 23:55 [IST]
Other articles published on Mar 28, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+